5. ಪದಾರ್ಥಗಳನ್ನು ಬೇರ್ಪಡಿಸುವಿಕೆ
✅ ಬೇರ್ಪಡಿಸುವಿಕೆ ವಿಧಾನಗಳು
👉 ಕೈಯಿಂದ ಆರಿಸುವಿಕೆ
👉 ತೂರುವಿಕೆ,
👉 ಜರಡಿ ಹಿಡಿಯುವಿಕೆ,
👉 ಬಸಿಯುವಿಕೆ
👉 ಸೋಸುವಿಕೆ
👉 ಗುರುತ್ವ ಬಲದಿಂದ ಬೇರ್ಪಡಿಸುವಿಕೆ,
👉 ಆವೀಕರಣ
✅ ಧಾನ್ಯಗಳಲ್ಲಿರುವ ಹೊಟ್ಟು ಮತ್ತು ಕಲ್ಲುಗಳನ್ನು ಕೈಯಿಂದ ಆರಿಸಿ ಬೇರ್ಪಡಿಸಬಹುದು.
✅ಧಾನ್ಯಗಳ ಭಾರವಾದ ಬೀಜಗಳಿಂದ ಹಗುರಾದ ಹೊಟ್ಟನ್ನು ತೂರುವಿಕೆ ವಿಧಾನದಿಂದ
ಬೇರ್ಪಡಿಸಬಹುದು.
✅ಮರಳು ಮತ್ತು ನೀರಿನ ಮಿಶ್ರಣದಲ್ಲಿ ಮರಳಿನ ಭಾರವಾದ ಕಣಗಳು ನೀರಿನ ತಳದಲ್ಲಿ
ಸಂಗ್ರಹವಾಗುತ್ತದೆ ಮತ್ತು ಬಸಿಯುವಿಕೆಯಿಂದ ನೀರನ್ನು ಬೇರ್ಪಡಿಸಬಹುದು.
✅ನೀರನ್ನು ಅವಿಯನ್ನಾಗಿ ಪರಿವರ್ತಿಸುವ ಕ್ರಿಯೆಯೇ "ಆವೀಕರಣ" (Evaporation).
ನೀರಾವಿಯೂ ಅದರ ದ್ರವ ರೂಪಕ್ಕೆ ಬದಲಾಗುವ ಕ್ರಿಯೆಗೆ "ಸಾಂದ್ರಿಕರಣ" (Condenstion)
ಎನ್ನುವರು.
✅ಯಾವ ದ್ರಾವಣದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಪದಾರ್ಥವನ್ನು ಕರಗಿಸಲು ಸಾಧ್ಯವಿಲ್ಲವೋ ಅದನ್ನು "ಪರ್ಯಾಪ್ತ ದ್ರಾವಣ" ಎನ್ನುವರು
ಹೆಚ್ಚಿನ ಅಧ್ಯಯನಕ್ಕಾಗಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ "ವಿದ್ಯಾಸಂಗಮ" ಸಂವೇದ ದೂರದರ್ಶನ ಆಧಾರಿತ ಇ-ಕಲಿಕಾ ಕಾರ್ಯಕ್ರಮದಲ್ಲಿ ಪ್ರಸಾರವಾಗುವ 6ನೇ ತರಗತಿಯ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಈ ಕೆಳಗಿನ ವಿಡಿಯೋವನ್ನು ವಿಕ್ಷಿಸಬಹುದಾಗಿದೆ
