ಅಧ್ಯಾಯ -2. ಅಕ್ಷಾಂಶ ಮತ್ತು ರೇಖಾಂಶ - Globe Latitudes and Logitudes

 ಅಕ್ಷಾಂಶ ಮತ್ತು ರೇಖಾಂಶ

Globe Latitudes and Logitudes

ಸಮಭಾಜಕ ರೇಖೆ :

  • ಸಮಭಾಜಕ ರೇಖೆ ಭೂಮಿಯನ್ನು ಎರಡು ಅರ್ಧಗೋಳಗಳನ್ನಾಗಿ ವಿಭಜಿಸು ಕಾಲ್ಪನಿಕ ರೇಖೆಯಾಗಿದೆ.
  • ಭೂಮಿಯ ಉತ್ತರಾರ್ಧ ಭಾಗವನ್ನು "ಉತ್ತರಾರ್ಧಗೋಳ" ಎನ್ನುವರು.
  • ಭೂಮಿಯ ದಕ್ಷಿಣಾರ್ಧ ಭಾಗವನ್ನು "ದಕ್ಷಿಣಾರ್ಧಗೋಳ" ಎನ್ನುವರು.
  • ಸಮಭಾಜಕ ರೇಖೆ "0" ಡಿಗ್ರಿಯನ್ನು ಪ್ರತಿನಿಧಿಸುತ್ತದೆ.
  • ಸಮಭಾಜಕದಿಂದ ಎರಡು ಧ್ರುವಗಳು 90° ಡಿಗ್ರಿಯನ್ನು ತೋರಿಸುತ್ತದೆ. ಅವುಗಳನ್ನು 90°N ಹಾಗೂ 90°S ಎಂದು ತೋರಿಸಲಾಗುತ್ತದೆ.

ಅಕ್ಷಾಂಶಗಳು :

Globe Latitudes and Logitudes

  • ಸಮಭಾಜಕದಿಂದ ಧ್ರುವದ ವರೆಗಿನ ಎಲ್ಲಾ ಸಮಾನಾಂತರವಾಗಿರುವ ವೃತ್ತಗಳನ್ನು "ಸಮಾನಾಂತರ ಅಕ್ಷಾಂಶ"ಗಳೆಂದು ಕರೆಯುವರು.
  • ಅಕ್ಷಾಂಶಗಳನ್ನು ಡಿಗ್ರಿಗಳಲ್ಲಿ ಅಳೆಯುತ್ತಾರೆ.
  • ನಾವು ಸಮಭಾಜಕದಿಂದ ದೂರ ಹೋದಂತೆ ಸಮಾನಾಂತರ ಅಕ್ಷಾಂಶಗಳ ಗಾತ್ರ ಕಡಿಮೆಯಾಗುತ್ತದೆ.

       ಮುಖ್ಯವಾಗಿರುವ ಸಮಾನಾಂತರ ಅಕ್ಷಾಂಶಗಳು :

  • ಕರ್ಕಾಟಕ ಸಂಕ್ರಾಂತಿ ವೃತ್ತ  - 23 ½° N
  • ಮಕರ ಸಂಕ್ರಾಂತಿ ವೃತ್ತ  - 23 ½° S
  • ಆರ್ಕ್ಟಿಕ್ ವೃತ್ತ  - 66 ½° N
  • ಅಂಟಾರ್ಟಿಕ್ ವೃತ್ತ  - 66 ½° S
Globe Latitudes and Logitudes

  • ನಿಮ್ಮ ಸ್ಥಳದಿಂದ ಧ್ರುವ ನಕ್ಷತ್ರದ ಕೋನ ಅಳೆಯುವುದರಿಂದ ನಿಮ್ಮ ಸ್ಥಳದ ಅಕ್ಷಾಂಶವನ್ನು ತಿಳಿದುಕೊಳ್ಳಬಹುದು.


ಭೂಮಿಯ ಶಾಖ ವಲಯಗಳು :

    ಉಷ್ಣ ವಲಯ :

  • ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತಗಳ ನಡುವಿರುವ ಎಲ್ಲಾ ಅಕ್ಷಾಂಶಗಳ ತಲೆಯ ಮೇಲೆ ಮಧ್ಯಾಹ್ನ ಸೂರ್ಯ ಒಂದು ಬಾರಿಯಾದರು ಹಾದೂ ಹೊಗುತ್ತಾನೆ, ಹಾಗಾಗಿ ಈ ಪ್ರದೇಶದಲ್ಲಿ ಗರಿಷ್ಠ ಶಾಖವನ್ನು ಪಡೆಯುತ್ತದೆ, ಹಾಗಾಗಿ ಈ ವಲಯವನ್ನು "ಉಷ್ಣವಲಯ" ಎನ್ನುವರು.

    ಸಮಶಿತೋಷ್ಣ ವಲಯ :

  • ಎರಡು ಗೋಳಾರ್ಧದಲ್ಲಿ ಮಧ್ಯಾಹ್ನದ ಸೂರ್ಯನು ಎಂದಿಗೂ ಕರ್ಕಾಟಕ ಸಂಕಾಂತಿ ವೃತ್ತದ ಮುಂದಿನ ಮತ್ತು ಮಕರ ಸಂಕ್ರಾಂತಿ ವೃತ್ತದ ಮುಂದಿನ ಅಕ್ಷಾಂಶಗಳ ಮೇಲೆ ಕಾಣಬರುವುದಿಲ್ಲ, ಹಾಗಾಗಿ ಸೂರ್ಯನ ಕಿರಣಗಳು ಬಿಳುವ ಕೋನವು ಕಡಿಮೆಯಾಗುತ್ತಾ ಹೋಗುತ್ತದೆ, ಹೀಗಾಗಿ ಧ್ರುವದ ಕಡೆಗೆ ಹೋದಂತೆ ಈ ಪ್ರದೇಶಗಳು ಮಧ್ಯಮ ತಾಪಮಾನವನ್ನು ಹೊಂದಿವೆ. ಹಾಗಾಗಿ ಈ ವಲಯವನ್ನು "ಸಮಶಿತೋಷ್ಣ ವಲಯ" ಎನ್ನುವರು.

    ಶೀತ ವಲಯ :

  • ಆರ್ಕ್ಟಿಕ್‌ ವೃತ್ತದ ಹಾಗೂ ಉತ್ತರ ಧ್ರುವದ ಮಧ್ಯೆ ಇರುವ ಪ್ರದೇಶ ಹಾಗೂ ಅಂಟಾರ್ಟಿಕ್‌ ವೃತ್ತ  ಮತ್ತು ದಕ್ಷಿಣ ಧ್ರುವದ ಮಧ್ಯೆ ಇರುವ ಪ್ರದೇಶಗಳು ಅತೀ ಹೆಚ್ಚು ತಂಪಾಗಿವೆ, ಏಕೆಂದರೆ ಸೂರ್ಯನ ದಿಗಂತ ಕಡಿಮೆ ಕಾಣುವುದು, ಹಾಗಾಗಿ ಸೂರ್ಯನ ಕಿರಣಗಳು ಓರೆಯಾಗಿ ಬೀಳುವ ಈ ವಲಯವನ್ನು "ಶೀತ ವಲಯ" ಎನ್ನುವರು.

ರೇಖಾಂಶಗಳು :

Globe Latitudes and Logitudes

  • ಗೋಳದ ಮೇಲ್ಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಎರಡು ಧ್ರುವಗಳನ್ನು ಸಂಧಿಸುವಂತೆ ಎಳೆದಿರುವ ಕಾಲ್ಪನಿಕ ರೇಖೆಗಳೇ "ರೇಖಾಂಶಗಳು".
  • ರೇಖಾಂಶಗಳ ಮಧ್ಯದ ದೂರವನ್ನು  ಡಿಗ್ರಿಗಳಲ್ಲಿ ಅಳೆಯುತ್ತಾರೆ. ಪ್ರತಿ ಡಿಗ್ರಿಗಳನ್ನು ಮಿನಿಟ್ ಗಳಾಗಿ, ಮಿನಿಟ್ ಗಳನ್ನು ಸೆಕೆಂಡ್‌ ಗಳಾಗಿ ವಿಭಜಿಸಲಾಗಿದೆ.
  • ರೇಖಾಂಶಗಳು "ಅರೆ ವೃತ್ತಗಳಾಗಿವೆ".
  • ಧ್ರುವಗಳ ಕಡೆಗೆ ಹೋದಂತೆ ರೇಖಾಂಶಗಳ ನಡುವಿನ ಅಂತರವು ಸ್ಥಿರವಾಗಿ ಕಡಿಮೆಯಾಗುತ್ತಾ ಹೋಗುತ್ತದೆ, ಮತ್ತು ಧ್ರುವಗಳಲ್ಲಿ ಅಂತರವು 0° ಆಗಿರುತ್ತದೆ.
  • ಎಲ್ಲಾ ರೇಖಾಂಶಗಳು ಉದ್ದದಲ್ಲಿ ಸಮನಾಗಿವೆ. ಆದರೆ ಎಲ್ಲಾ ಅಕ್ಷಾಂಶಗಳು ಭಿನ್ನವಾಗಿವೆ.
  • ಎಲ್ಲಾ ದೇಶಗಳು ರೇಖಾಂಶಗಳ ಪರಿಗಣನೆಯನ್ನು Prime Meridian (ಎಲ್ಲಿ "ಗ್ರೀನ್ ವಿಚ್"‌ ಸಂಧಿಸುತ್ತದೆ ಮತ್ತು ಇಲ್ಲಿ ಬ್ರಿಟಿಷ್‌ ರಾಯಲ್‌ Abservetery ಇದೆ) ನಿಂದ ಆರಂಭಿಸಲು ಸಮ್ಮತಿಸಿವೆ. ಈ ರೇಖಾಂಶವನ್ನು  0° ಇಂದ ಗುರುತಿಸುತ್ತಾರೆ. ಮತ್ತು ಇಲ್ಲಿಂದ 180° ಪೂರ್ವಕ್ಕೆ, 180° ಪಶಿಮಕ್ಕೆ ಗುರುತಿಸುತ್ತಾರೆ.
  • ಪ್ರೈಮ್‌ ಮೆರಿಡಿಯನ್‌ ಭೂಮಿಯನ್ನು ಎರಡು ಸಮಭಾಗಗಳನ್ನಾಗಿ ವಿಂಗಡಿಸುತ್ತದೆ. ಅವುಗಳು ಪೂರ್ವ ಗೋಳಾರ್ಧ(E) ಮತ್ತು ಪಶ್ಚಿಮ ಗೋಳಾರ್ದ(W).
  • 180° ಪೂರ್ವ ರೇಖಾಂಶ ಮತ್ತು 180° ಪಶ್ಚಿಮ ರೇಖಾಂಶಗಳನ್ನು ಒಂದೇ ರೇಖಾಂಶದ ಮೇಲೆ ಗುರುತಿಸುತ್ತಾರೆ.
Globe Latitudes and Logitudes

ರೇಖಾಂಶ ಮತ್ತು ಸಮಯ :

  • ಭೂಮಿ, ಚಂದ್ರ ಮತ್ತು ಗ್ರಹಗಳ ಚಲನೆಯಿಂದ ಸಮಯವನ್ನು ಅತ್ಯುತ್ತಮವಾಗಿ ಅಳೆಯಬಹುದು.
  • ಸೂರ್ಯನ ಪ್ರತಿದಿನದ ಸೂರ್ಯೋದಯ ಹಾಗೂ ಸೂರ್ಯಾಸ್ತಗಳಿಂದ ಸಮಯವನ್ನು ತಿಳಿಯಬಹುದು.
  • ಸ್ಥಳೀಯ ಸಮಯವನ್ನು ತಿಳಿಯಲು ಸೂರ್ಯನ ನೆರಳು ತಿಳಿದರೆ ಸಾಕು, ಹೇಗೆಂದರೆ ನೆರಳು ಮಧ್ಯಾಹ್ನದಲ್ಲಿ ಕಡಿಮೆ ಇರುತ್ತದೆ ಮತ್ತು ಸೂರ್ಯಾಸ್ತದ ಹಾಗೂ ಸೂರ್ಯೋದಯದ ಸಮಯದಲ್ಲಿ  ಗರಿಷ್ಠ ಮಟ್ಟದಲ್ಲಿ ಕಂಡು ಬರುತ್ತದೆ.
  • ಯಾವಾಗ ಸೂರ್ಯನು ಗ್ರೀನ್‌ ವಿಚ್‌ ರೇಖಾಂಶದ ಮೇಲೆ ಇರುತ್ತಾನೋ ಆಗ ಆ ರೇಖಾಂಶದ ಮೇಲೆ ಇರುವ ಎಲ್ಲಾ ಸ್ಥಳಗಳು ಮಧ್ಯಾಹ್ನವನ್ನು ಸೂಚಿಸುತ್ತವೆ. ಇದರ ಅರ್ಥ ಸೂರ್ಯ ಯಾವುದೇ ರೇಖಾಂಶದ ಮೇಲೆ ಇರುವ ರೇಖಾಂಶ ಸಂಧಿಸುವ ಸ್ಥಳಗಳು ಒಂದೇ ತೆರನಾದ ಸಮಯ ಸೂಚಿಸುತ್ತವೆ.

ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ಸುತ್ತಿದಂತೆ :

  • ಗ್ರೀನ್‌ ವಿಚ್‌ ನಿಂದ ಪೂರ್ವಕ್ಕೆ ಇರುವ ಸ್ಥಳಗಳು ಗ್ರೀನ್‌ ವಿಚ್‌ ಸಮಯಕ್ಕಿಂತ ಮುಂದೆ ತೋರಿಸುತ್ತವೆ.
  • ಗ್ರೀನ್‌ ವಿಚ್‌ ನಿಂದ ಪಶ್ಚಿಮಕ್ಕೆ ಇರುವ ಸ್ಥಳಗಳು ಗ್ರೀನ್‌ ವಿಚ್‌ ಸಮಯಕ್ಕಿಂತ ಹಿಂದೆ ತೋರಿಸುತ್ತವೆ.
  • ಭೂಮಿಯ ಸುತ್ತುವಿಕೆ = 360 (24 ಗಂಟೆಗಳು)
  • ಒಂದು ಗಂಟೆ = 360➗24 =15 (60 ನಿಮಿಷಗಳು)
  • 1= 60➗15 = 4 ನಿಮಿಷಗಳು
Globe Latitudes and Logitudes

ಯಾಕೆ ನಾವು ಪ್ರಮಾಣಿತ ಸಮಯವನ್ನು ಹೊಂದಿದ್ದೇವೆ ? 

Globe Latitudes and Logitudes

  • ಕೆಲವೊಂದು ಸ್ಥಳಗಳು ಬೇರೆ ಬೇರೆ ರೇಖಾಂಶಗಳನ್ನು ಆವರಿಸಿವೆ.
  • ಉದಾ : ಭಾರತದ ಪ್ರಮಾಣಿತ ಸಮಯ 82½° E ಏಕೆಂದರೆ ಭಾರತವು 62° E ಇಂದ 97° E ವರೆಗೂ ಆವರಿಸಿದೆ. ಈ ರೇಖಾಂಶಗಳ ಅಂತರ ಒಂದು ಗಂಟೆಗೆ 45 ನಿಮಿಷಗಳ ವ್ಯತ್ಯಾಸ ಸೂಚಿಸುತ್ತದೆ. ಹಾಗಾಗಿ ಪ್ರಮಾಣಿತ ಸಮಯ ಹೊಂದಿದ್ದೇವೆ.
  • ಭಾರತವು ಗ್ರೀನ್‌ ವಿಚ್‌ ಗಿಂತ "5 ಗಂಟೆ 30 ನಿಮಿಷಗಳು" ಮುಂದೆ ಇದೆ.
  • ಭೂಮಿಯನ್ನು "24 ಸಮಯ" ವಲಯಗಳನ್ನಾಗಿ ವಿಭಜಿಸಲಾಗಿದೆ. ಪ್ರತಿ ವಲಯ 15° ರೇಖಾಂಶಗಳನ್ನು ಹೊಂದಿದೆ.
  • ಕೆಲವೊಂದು ದೇಶಗಳನ್ನು ಹೆಚ್ಚು ರೇಖಾಂಶಗಳನ್ನು ಆವರಿಸಿರುವುದರಿಂದ ಅವುಗಳು ಹೆಚ್ಚು ಪ್ರಮಾಣಿತ ಸಮಯವನ್ನು ಹೊಂದಿರುತ್ತವೆ.
  • ಉದಾ: ರಷ್ಯಾ 11 ಪ್ರಮಾಣಿತ ಸಮಯವನ್ನು ಹೊಂದಿದೆ.

Post a Comment (0)
Previous Post Next Post