ಇತಿಹಾಸದ ಅರ್ಥ, ವ್ಯಾಖ್ಯೆ ಮತ್ತು ಇತಿಹಾಸದ ಅಧ್ಯನದ ಪ್ರಾಮುಖ್ಯತೆ - Meaning, definition of history and importance of study of history.

ಇತಿಹಾಸದ ಅರ್ಥ, ವ್ಯಾಖ್ಯೆ ಮತ್ತು ಇತಿಹಾಸದ ಅಧ್ಯನದ ಪ್ರಾಮುಖ್ಯತೆ

Meaning, definition of history and importance of study of history.

ಇತಿಹಾಸದ ಅರ್ಥ :

        ಹಿಸ್ಟರಿ ಎಂಬ ಪದವು ಗ್ರೀಕ್‌ ಭಾಷೆಯ "ಹಿಸ್ಟೋರಿಯಾ" ಎಂಬ ಪದದಿಂದ ಬಂದಿದೆ. ಇದರ ಅರ್ಥ "ವಿಚಾರಣೆ" ಅಥವಾ "ತನಿಕೆ". ಸಂಸ್ಕೃತದಲ್ಲಿ ಇತಿಹಾಸವೆಂದರೆ - "ಖಚಿತವಾಗಿ ಘಟಿಸಿದ ಘಟನೆಗಳು ಎಂದರ್ಥ". ಇತಿಹಾಸವನ್ನು  ವೈಜ್ಞಾನಿಕವಾಗಿ ಬರೆಯುವ ಕಲೆಯನ್ನು ಮೊದಲು ಗ್ರೀಕರು ವಿಕಸನಗೊಳಿಸಿದರು. ಗ್ರೀಕ್‌ ಇತಿಹಾಸಕಾರ "ಹೆರೋಡೋಟಸ್"‌ ನನ್ನು "ಇತಿಹಾಸದ ಪಿತಾಮಹ" ಎಂದು ಕರೆಯುತ್ತಾರೆ.

ಇತಿಹಾಸದ ವ್ಯಾಖ್ಯೆ :

        👉 ಸಾಮಾನ್ಯವಾಗಿ ಇತಿಹಾಸವನ್ನು ಗತಕಾಲದ ಘಟನೆಗಳ ದಾಖಲೆ ಎಂದು ತಿಳಿಯಲಾಗಿದೆ.

Meaning, Definition of History and Importance of Study of History.

Meaning, Definition of History and Importance of Study of History.

Meaning, Definition of History and Importance of Study of History.

Meaning, Definition of History and Importance of Study of History.

Meaning, Definition of History and Importance of Study of History.

Meaning, Definition of History and Importance of Study of History.

ಇತಿಹಾಸ ಅಧ್ಯಯನದ ಪ್ರಾಮುಖ್ಯತೆ :

        ಅನಾದಿಕಾಲದಿಂದಲೂ ಇಂದಿನವರೆಗೆ ಮಾನವ ಜನಾಂಗದ ಸಂಸ್ಕೃತಿಯ ಬೆಳವಣಿಗೆಯ ವಿವರಣೆಯನ್ನು  ಇತಿಹಾಸ ಅಧ್ಯಯನ ನೀಡುತ್ತದೆ. ಹೀಗಾಗಿ ಇತಿಹಾಸ ಅಧ್ಯಯನವು ಮಾನವನಿಗೆ ವಿವಿಧ ರೀತಿಯಲ್ಲಿ ಉಪಯೋಗವಾಗಿದೆ.

  • ಇತಿಹಾಸವು ಗತಕಾಲದ ಘಟನೆಗಳ ಸ್ಮರಣೆಯಾಗಿದೆ :

👉ಇತಿಹಾಸ ಅಧ್ಯಯನವು ನಮಗೆ ವಿಶ್ವದ ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆ ಮತ್ತು ಪ್ರಮುಖ ಘಟನೆಗಳ ಕುರಿತು ತಿಳಿಸುತ್ತದೆ. ಮಾನವನು ಪರಿಸರಕ್ಕೆ ಹೊಂದಿಕೊಂಡ ರೀತಿ ಹಾಗೂ ಅವನ ಏಳಿಗೆ ಮತ್ತು ವೈಪಲ್ಯಗಳ ಬಗೆಗೆ ಓಳನೋಟವನ್ನು ಒದಗಿಸುತ್ತದೆ.

  • ಇತಿಹಾಸವು ಧಾರ್ಮಿಕ ಸಹಿಷ್ಣುತೆಯನ್ನು ಬೋಧಿಸುತ್ತದೆ :

👉ಸಮಾಜದಲ್ಲಿನ ಶಾಂತಿ ಮತ್ತು ಸೌಹಾರ್ದತೆಗೆ ವಿವಿಧ ಧರ್ಮಗಳ ನಡುವೆ ಧಾರ್ಮಿಕ ಸಹಿಷ್ಣುತೆ ಅವಶ್ಯಕವಾಗಿದೆ. ಧಾರ್ಮಿಕ ಸಹಿಷ್ಣುತೆ ಇಲ್ಲದಿದ್ದರೆ ಸಮಾಜದ ಪ್ರಗತಿ ಸಾಧ್ಯವಾಗಲಾರದು. ಇಂತಹ ಧಾರ್ಮಿಕ ಸಹಿಷ್ಣುತೆಯ ಬೆಳವಣಿಗೆಗೆ ಇತಿಹಾಸ ಅಧ್ಯಯನ ತುಂಬಾ ಅಗತ್ಯವಾಗಿದೆ.

  • ಇತಿಹಾಸವು ಸ್ಫೂರ್ತಿಯ ಮೂಲವಾಗಿದೆ :

👉ಇತಿಹಾಸವು ಮಾನವನ ಅನುಭವಗಳ ಸಾಗರವಿದ್ದಂತೆ. ಇತಿಹಾಸವು ಮಹಾನ್‌ ವ್ಯಕ್ತಿಗಳ ಸುಖ-ದುಃಖ, ಶ್ರೇಷ್ಠ ಕಾರ್ಯಗಳ, ಸಾಧನೆಗಳ, ಸಾಹಸಗಳ, ಕೊಡುಗೆಗಳ, ಚಿಂತನೆಗಳ ಮತ್ತು ತ್ಯಾಗಗಳ ದಾಖಲೆಯಾಗಿದೆ. ಆದ್ದರಿಂದ ಇದು ಸ್ಫೂರ್ತಿಯ ಸೆಲೆಯಾಗಿದೆ

  • ಇತಿಹಾಸವು ದೇಶಾಭಿಮಾನವನ್ನು ಮೂಡಿಸುತ್ತದೆ :

👉ದೇಶಾಭಿಮಾನವನ್ನು ಮೂಡಿಸುವಲ್ಲಿ ಇತಿಹಾಸದ ಅಧ್ಯನವು ಒಂದು ಪ್ರಮುಖ ಅಂಶವಾಗಿದೆ. ಒಂದು ದೇಶದ ಸಂಸ್ಕೃತಿ, ಕಲೆ, ಸಂಗೀತ, ಸಾಹಿತ್ಯ, ಧರ್ಮ, ತತ್ವಶಾಸ್ತ್ರ, ಜಾನಪದ ಮತ್ತು ಪರಂಪರೆಯ ಅರಿವು ವ್ಯಕ್ತಿಯನ್ನು ಹೆಮ್ಮೆಪಡುವಂತೆ ಮಾಡುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಜೀವನ ಮತ್ತು ಸಾಧನೆಗಳು ನಮ್ಮಲ್ಲಿ ರಾಷ್ಟ್ರಾಭಿಮಾನವನ್ನು ಮೂಡಿಸುತ್ತದೆ.

  • ಇತಿಹಾಸವು ಸಮಾಜ ವಿಜ್ಞಾನಗಳ ಪ್ರಯೋಗ ಶಾಲೆ :

👉 ಇತಿಹಾಸವು ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನೋವಿಜ್ಞಾನ, ಧರ್ಮಶಾಸ್ತ್ರ, ತತ್ವಶಾಸ್ತ್ರ, ತರ್ಕಶಾಸ್ತ್ರ, ಭೂಗೋಳಶಾಸ್ತ್ರ ಮುಂತಾದವುಗಳಿಗೆ ಬೇಕಾದ ಐತಿಹಾಸಿಕ ಮಾಹಿತಿಯನ್ನು ಒದಗಿಸುತ್ತದೆ. ಆದ್ದರಿಂದ ಇತಿಹಾಸ ಎಲ್ಲಾ ಸಮಾಜ ವಿಜ್ಞಾನಗಳ ಬೇರು. ಹಿಂದೆ ಸಮಾಜ ವಿಜ್ಞಾನಗಳು ಇತಿಹಾಸದ ಶಾಖೆಗಳಾಗಿ ಅಭ್ಯಸಿಸಲ್ಪಡುತ್ತಿದ್ದವು. ಆದ್ದರಿಂದ ಇತಿಹಾಸವು ಅವುಗಳಿಗೆ ಬೇಕಾದ ಜ್ಞಾನವನ್ನು ಒದಗಿಸುವ ಪ್ರಯೋಗ ಶಾಲೆಯಾಗಿದೆ.

  • ಇತಿಹಾಸವು ಉದಾತ್ತ ಧ್ಯೇಯಗಳನ್ನು ಬೆಳೆಸುತ್ತದೆ :

👉ಅಧುನಿಕ ಯುಗದಲ್ಲಿ ಜನರಲ್ಲಿ ಮೌಲ್ಯ ಮತ್ತು ನೀತಿಗಳ ಬಗ್ಗೆ ಗೌರವ ಕಡಿಮೆಯಾಗುತ್ತಿದೆ. ಈ ಸಂಧರ್ಭದಲ್ಲಿ ಹಿಂದಿನ ಮಹಾಪುರುಷರು ಪ್ರತಿಪಾದಿಸಿದ ಮೌಲ್ಯಗಳನ್ನು ಅಧುನಿಕ ಮಾನವ ಅಳವಡಿಸಿಕೊಳ್ಳಲು ಇತಿಹಾಸದ ಅಧ್ಯಯನ ಸಹಕಾರಿಯಾಗಿದೆ. ಉದಾತ್ತ ಧ್ಯೇಯಗಳಾದ ಸ್ವಾತಂತ್ಯ, ಸಮಾನತೆ, ಸಹೋದರತೆ, ನೀತಿ, ಅಹಿಂಸೆ, ಅನ್ಯರ ಸೇವೆ, ಪ್ರೀತಿ, ಕ್ಷಮಾಗುಣ, ದಯೆ, ಉತ್ತಮ ರಾಜನೀತಿ, ಧಾರ್ಮಿಕ ಸಹಿಷ್ಣುತೆ ಮುಂತಾದವುಗಳನ್ನು ಇತಿಹಾಸವು ಅಧುನಿಕ ಪೀಳಿಗೆಗೆ ಬಳುವಳಿಯಾಗಿ ನೀಡಿದೆ.

  • ಇತಿಹಾಸವು ನಮ್ಮ ದೃಷ್ಠಿಕೋನವನ್ನು ವಿಸ್ತರಿಸುತ್ತದೆ :

👉ಇತಿಹಾಸ ಅಧ್ಯನವು ನಮಗೆ ವಿವಿಧ ದೇಶಗಳ ಜನರು, ಸಂಪ್ರದಾಯ, ಸಂಸ್ಕೃತಿ ಮತ್ತು ನಾಗರಿಕತೆಗಳ ಬಗ್ಗೆ ಹೆಚ್ಚು ಜ್ಞಾನವನ್ನು ಸಂಪಾದಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮಾನವನ ದೃಷ್ಠಿಕೋನವನ್ನು ವಿಶಾಲಗೊಳಿಸುತ್ತದೆ.

  • ಇತಿಹಾಸವು ವಿಶ್ವ ಶಾಂತಿಯನ್ನು ಬೆಳೆಸುತ್ತದೆ :

👉ಜಗತ್ತು ಈಗಾಗಲೇ ಎರಡು ಮಹಾಯುದ್ಧಗಳನ್ನು ಕಂಡಿದೆ. ಭವಿಷ್ಯದಲ್ಲಿ ಇನ್ನೊಂದು ಯುದ್ಧವಾದರೆಅದು ಇಡೀ ಪ್ರಪಂಚವನ್ನೇ ವಿನಾಶಗೊಳಿಸುತ್ತದೆ. ಸಂಕುಚಿತ ರಾಷ್ಟ್ರೀಯತೆ ಈ ಯುದ್ಧಕ್ಕೆ ಕಾರಣವಾಗಿದೆ ಎಂದು ಇತಿಹಾಸವು ತೋರಿಸಿಕೊಟ್ಟಿದೆ. ದೇಶಗಳ ನಡುವಿಣ ಸೌಹಾರ್ದಯುತ ಬಾಂಧವ್ಯ ವೃದ್ಧಿಗೆ ಪ್ರಪಂಚದ ಇತಿಹಾಸ ಅಧ್ಯಯನ ಇಂದಿನ ಅಗತ್ಯವಾಗಿದೆ.

  • ಇತಿಹಾಸವು ವೃತ್ತಿಪರ ಉಪಯೋಗಗಳನ್ನು ಹೊಂದಿದೆ :

👉ಇದು ಸ್ಪರ್ಧಾತ್ಮಕ ಪ್ರಪಂಚ. IAS, IPS, IFS, KAS ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತಿಹಾಸವು ಪ್ರಮುಖ ಐಚ್ಚಿಕ ವಿಷಯವಾಗಿದೆ. ಇತಿಹಾಸ ಜ್ಞಾನವು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ವಕೀಲರಿಗೆ, ಪತ್ರಕರ್ತರಿಗೆ, ಆಡಳಿತಗಾರರಿಗೆ ಮತ್ತು ರಾಜನೀತಿ ತಜ್ಞರಿಗೆ ಅತ್ಯವಶ್ಯಕವಾಗಿದೆ.

  • ಇತಿಹಾಸವು ಪೂರ್ವಾಗ್ರಹಗಳನ್ನು ಹೋಗಲಾಡಿಸುತ್ತದೆ :

👉ಜಾತಿ, ಮತ, ಪಂಥ, ವರ್ಣ, ಭಾಷೆ ಮುಂತಾದವುಗಳಿಗೆ ಸಂಬಂಧಪಟ್ಟ ಪೂರ್ವಾಗ್ರಹಗಳನ್ನು ಹೋಗಲಾಡಿಸಲು ಇತಿಹಾಸವು ಸಹಾಯ ಮಾಡುತ್ತದೆ. ರಾಷ್ಟ್ರಗಳ ನಡುವೆ ಶಾಂತಿ, ಸ್ನೇಹ ಮತ್ತು ಸಹಕಾರವಿರಬೇಕು. ಇದು ಇತಿಹಾಸ ಅಧ್ಯನದಿಂದ ಮಾತ್ರ ಸಾಧ್ಯ.

Post a Comment (0)
Previous Post Next Post