ಭಾರತದಲ್ಲಿ ಶಾಸ್ತ್ರೀಯ ಭಾಷೆಗಳ ಪಟ್ಟಿ
ಶಾಸ್ತ್ರೀಯ ಭಾಷೆ ಎಂದರೆ ಸ್ವತಂತ್ರ ಸಾಹಿತ್ಯ ಸಂಪ್ರದಾಯ ಮತ್ತು ಪ್ರಾಚೀನ ಲಿಖಿತ ಸಾಹಿತ್ಯದ ಗಣನೀಯ ಭಾಗವನ್ನು ಹೊಂದಿರುವ ಭಾಷೆ ಎಂದು ವ್ಯಾಖ್ಯಾನಿಸಲಾಗಿದೆ. ಈ ಭಾಷೆಗಳು ಸಾಮಾನ್ಯವಾಗಿ ಐತಿಹಾಸಿಕ ಮಹತ್ವವನ್ನು ಹೊಂದಿರುತ್ತವೆ ಮತ್ತು ಸಾಮಾನ್ಯವಾಗಿ ಶ್ರೀಮಂತ ಸಾಂಸ್ಕೃತಿಕ ಪರಂಪರೆಯೊಂದಿಗೆ ಸಂಬಂಧ ಹೊಂದಿವೆ.
ಭಾರತ ಸರ್ಕಾರವು ಕೆಲವು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿದೆ. ಈ ಸ್ಥಾನಮಾನವನ್ನು ನೀಡಲು ನಿರ್ಧಿಷ್ಟ ಮಾನದಂಡಗಳಿವೆ:
- ಭಾಷೆಯು ಕನಿಷ್ಠ 1500-2000 ವರ್ಷಗಳ ಇತಿಹಾಸ ಹೊಂದಿರಬೇಕು.
- ಸ್ವತಂತ್ರವಾದ ಸಾಹಿತ್ಯ ಪರಂಪರೆಯುಳ್ಳ ಭಾಷೆಯಾಗಿರಬೇಕು.
- ವೈಖರಿಕ ವಿನ್ಯಾಸ ಹಾಗೂ ಪುರಾತನ ಗ್ರಂಥಗಳು ಇದ್ದಿರಬೇಕು.
| ಕ್ರ ಸಂ | ಭಾಷೆ | ಪಡೆದ ವರ್ಷ | ಅಧಿಸೂಚನೆ ದಿನಾಂಕ |
|---|---|---|---|
| 1 | ತಮಿಳು | 2004 | 12/10/2004 |
| 2 | ಸಂಸ್ಕೃತ | 2005 | 25/11/2005 |
| 3 | ಕನ್ನಡ | 2008 | 31/10/2008 |
| 4 | ತೆಲುಗು | 2008 | 31/10/2008 |
| 5 | ಮಲಯಾಳಂ | 2013 | 08/08/2013 |
| 6 | ಒಡಿಯಾ | 2014 | 01/03/2014 |
| 7 | ಮರಾಠಿ | 2024 | 03/10/2024 |
| 8 | ಪಾಲಿ | 2024 | 03/10/2024 |
| 9 | ಪ್ರಾಕೃತ | 2024 | 03/10/2024 |
| 10 | ಅಸ್ಸಾಮೀಸ್ | 2024 | 03/10/2024 |
| 11 | ಬಂಗಾಳಿ | 2024 | 03/10/2024 |