ಒಂದು ರಾಜ್ಯದಿಂದ ಒಂದು ಸಾಮ್ರಾಜ್ಯಕ್ಕೆ
ಮೌರ್ಯ ಸಾಮ್ರಾಜ್ಯ
👉 ಅಶೋಕನು ಆಳುತ್ತಿದ್ದ ಸಾಮ್ರಾಜ್ಯವನ್ನು ಅವನ ತಾತನಾದ "ಚಂದ್ರಗುಪ್ತ ಮೌರ್ಯ" ಚಾಣಕ್ಯ ಅಥವಾ
ಕೌಟಿಲ್ಯನ ಸಹಾಯದಿಂದ ಸುಮಾರು 2300 ವರ್ಷಗಳ ಹಿಂದೆ ಸ್ಥಾಪಿಸಿದನು.
👉 ಚಾಣಕ್ಯ ತನ್ನ ನೀತಿಗಳನ್ನು ಮತ್ತು ವಿಚಾರಗಳನ್ನು "ಅರ್ಥಶಾಸ್ತ್ರ" ಎಂಬ ಗ್ರಂಥದಲ್ಲಿ
ಬರೆದಿದ್ದಾನೆ.
ಮೌರ್ಯ ರಾಜವಂಶದ ಪ್ರಮುಖ ರಾಜರುಗಳು
- ಚಂದ್ರಗುಪ್ತ ಮೌರ್ಯ
- ಬಿಂದುಸಾರ (ಚಂದ್ರಗುಪ್ತನ ಮಗ)
- ಅಶೋಕ (ಬಿಂದುಸಾರ ಮಗ)
ಈ ಕಾಲದ ಪ್ರಮುಖ ನಗರಗಳು
👉 "ತಕ್ಷಶಿಲಾ" ವಾಯುವ್ಯ ಭಾರತ ಮತ್ತು ಮಧ್ಯ ಏಷ್ಯಾಕ್ಕೆ ಹೆಬ್ಬಾಗಿಲಾಗಿತ್ತು.
👉 ಉಜೈನಿ ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಹೋಗುವ ಮಾರ್ಗದಲ್ಲಿತ್ತು.
👉 ಸಾಮ್ಯಾಜ್ಯಗಳು ರಾಜ್ಯಗಳಿಗಿಂತ ದೊಡ್ಡದಾಗಿರುವುದರಿಂದ ಮತ್ತು ದೊಡ್ಡ ಸೈನ್ಯಗಳಿಂದ ರಕ್ಷಣೆ ಮಾಡ ಬೇಕಾಗಿರುವುದರಿಂದ ಚಕ್ರವರ್ತಿಗಳಿಗೆ ರಾಜರಿಗಿಂತ ಹೆಚ್ಚಿನ ಸಂಪನ್ಮೂಲ
ಬೇಕಾಗುತ್ತದೆ.
👉 ತೆರಿಗೆ ಸಂಗ್ರಹಿಸಲು ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಬೇಕಾಗುತ್ತದೆ.
👉 ವಾಯುವ್ಯ ಭಾರತವು ಕಂಬಳಿಗಳಿಗೆ ಮತ್ತು ದಕ್ಷಿಣ ಭಾರತವು ಚಿನ್ನ ಮತ್ತು ಅಮೂಲ್ಯ ಶಿಲೆಗಳಿಗೆ
ಪ್ರಮುಖವಾಗಿದ್ದವು ಎಂದು "ಅರ್ಥಶಾಸ್ತ್ರ"ದಲ್ಲಿ ತಿಳಿಸಲಾಗಿದೆ.
ಮೆಗಾಸ್ತನೀಸ್
👉 ಮೆಗಾಸ್ತನೀಸ್ ಒಬ್ಬ ರಾಯಭಾರಿ
👉 ಪಶ್ಚಿಮ ಏಷ್ಯಾದ ಗ್ರೀಕ್ ದೊರೆ "ಸೆಲ್ಯೂಕಸ್ ನಿಕೇಟರ್" ಈತನನ್ನು ಚಂದ್ರಗುಪ್ತ ಮೌರ್ಯನ
ಆಸ್ಥಾನಕ್ಕೆ ಕಳುಹಿಸಿದನು.
👉 ಮೆಗಾಸ್ತನೀಸ್‌ನು ರಾಜನ ಕುರಿತು ಮತ್ತು ಪಾಟಲೀಪುತ್ರದ ನಗರದ ಬಗ್ಗೆ ವಿಶ್ಲೇಷಿಸಿದ್ದಾನೆ.
ಅಶೋಕ ಒಬ್ಬ ವಿಶಿಷ್ಟ ಆಡಳಿತಗಾರ
👉 ಶಾಸನಗಳ ಮೂಲಕ ತನ್ನ ಸಂದೇಶವನ್ನು ಜನರಿಗೆ ತಲುಪಿಸಲು ಪ್ರಯತ್ನಿಸಿದ ಮೊದಲ ದೊರೆ -"ಅಶೋಕ".
👉 ಅಶೋಕನ ಬಹುತೇಕ ಶಾಸನಗಳನ್ನು "ಪ್ರಾಕೃತ" ಮತ್ತು "ಬ್ರಾಹ್ಮಿಲಿಪಿ"ಯಲ್ಲಿ ಬರೆಯಲಾಗಿದೆ.
ಕಳಿಂಗ ಯುದ್ದದಲ್ಲಿ ಅಶೋಕ
👉 ಕರಾವಳಿ ಒರಿಸ್ಸಾದ ಪ್ರಾಚೀನ ಹೆಸರು - "ಕಳಿಂಗ".
👉 ಕಳಿಂಗ ಯುದ್ದದಲ್ಲಿ ಆದ ಹಿಂಸಾಚಾರ ಮತ್ತು ರಕ್ತಪಾತವನ್ನು ನೋಡಿ ಮುಂದೆ ಯಾವುದೇ ಯುದ್ದವನ್ನು
ಮಾಡಬಾರದು ಎಂದು ಅಶೋಕ ನಿರ್ಧರಿಸಿದನು.
👉 ಪ್ರಪಂಚದ ಇತಿಹಾಸದಲ್ಲಿ ಯದ್ದವನ್ನು ಗೆದ್ದ ನಂತರ ವಿಜಯವನ್ನು ತ್ಯಜಿಸಿದ ಏಕೈಕ ರಾಜ - "ಅಶೋಕ".
ಅಶೋಕನ ಧರ್ಮ/ದಮ್ಮ
👉 ಅಶೋಕನ ಧರ್ಮವು ದೇವರ ಆರಾಧನೆ ಮತ್ತು ಯಜ್ಞವನ್ನು ಹಾಗೂ ಬಲಿದಾನವನ್ನು ಒಳಗೊಂಡಿರಲಿಲ್ಲ.
👉 ಅಶೋಕನು ತನ್ನ ಪ್ರಜೆಗಳನ್ನು ತಂದೆ ಮಕ್ಕಳ ಸಂಬಂಧದಂತೆ ಭಾವಿಸಿ, ತಾನು ತಂದೆಯಂತೆ ಸಲಹೆಗಳನ್ನು ನೀಡುವ ಕರ್ತವ್ಯವನ್ನು ಹೊಂದಿದ್ದನು.
👉 ಅಶೋಕನಿ ಬುದ್ಧನ ಬೋಧನೆಗಳಿಂದ ಪ್ರೇರಿತನಾಗಿದ್ದನು.
👉 ಅಶೋಕನು "ಧರ್ಮ ಮಹಾಮಾತ್ರರು" ಎಂಬ ಅಧಿಕಾರಿಗಳನ್ನು ನೇಮಿಸಿದನು. ಇವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಗಳಿಗೆ ಹೋಗಿ ಜನರಿಗೆ ಅಶೋಕನ ಧರ್ಮದ ಕುರಿತು ಬೋಧಿಸುತ್ತಿದ್ದರು.
👉 ಅಶೋಕನು ಸಿರಿಯಾ, ಈಜಿಪ್ಟ್, ಗ್ರೀಸ್ ಮತ್ತು ಶ್ರೀಲಂಕಾ ದೇಶಗಳಿಗೆ ಧರ್ಮ ಕುರಿತು ಪ್ರಚಾರಕ್ಕಾಗಿ ಧರ್ಮ ಪ್ರಚಾರಕರನ್ನು ಕಳುಹಿಸಿದನು.
👉 ಅಶೋಕನು ರಸ್ತೆಗಳನ್ನು ನಿರ್ಮಿಸಿದನು, ಬಾವುಗಳನ್ನು ತೋಡಿಸಿಸನು ಮತ್ತು ವಿಶ್ರಾಂತಿ ಗೃಹಗಳನ್ನು ನಿರ್ಮಿಸಿದನು.
👉 ಅಶೋಕನು ಮನುಷ್ಯ ಮತ್ತು ಪ್ರಾಣಿಗಳ ಚಿಕಿತ್ಸೆಗಾಗಿ ವ್ಯವಸ್ಥೆಯನ್ನು ಮಾಡಿದನು.
ರಾಂಪುರ್ವಾ ಬುಲ್
👉 ಇದು ಬಿಹಾರದ ರಾಂಪುರ್ವಾದಲ್ಲಿ ಕಂಡುಬಂದ ಮೌರ್ಯ ಸ್ತಂಭದ ಭಾಗವಾಗಿತ್ತು.
👉 ಈಗ ಇದನ್ನು ರಾಷ್ಟ್ರಪತಿಭವನದಲ್ಲಿ ಇರಿಸಲಾಗಿದೆ.
ಚೀನಾದ ಮಹಾಗೋಡೆ
👉 ಇದನ್ನು ಸುಮಾರು 2400 ವರ್ಷಗಳ ಹಿಂದೆ ನಿರ್ಮಿಸಿದರು.
👉 ಇದನ್ನು 2400 ವರ್ಷಗಳ ಕಾಲ ನಿರ್ಮಿಸಿದರು.
👉 ಇದು ಸುಮಾರು 6400 ಕಿ.ಮೀ ಉದ್ದವಿದೆ.
👉 ಇದರ ಸುತ್ತಲು 100 ರಿಂದ 200 ಮೀ ಗೆ ಒಂದರಂತೆ "ವೀಕ್ಷಣಾ ಗೋಪುರ"ಗಳನ್ನು ನಿರ್ಮಿಸಲಾಗಿದೆ.
ಮೌರ್ಯರ ಅವನತಿಯ ನಂತರ
👉 ಮೌರ್ಯ ಸಾಮ್ರಾಜ್ಯ ಸುಮಾರು 2200 ವರ್ಷಗಳ ಹಿಂದೆ ಅವನತಿ ಹೊಂದಿತು.
👉 ಇಡೋ-ಗ್ರೀಕ್ ರು ವಾಯುವ್ಯ ಮತ್ತು ಉತ್ತರ ಭಾರತದಲ್ಲಿ ಸುಮಾರು 100 ವರ್ಷಗಳ ಕಾಲ ಆಳಿದರು.
👉 ಅವರ ನಂತರ ಶಕರು ಮಧ್ಯ ಏಷ್ಯಾ, ವಾಯುವ್ಯ, ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಸಾಮ್ಯಾಜ್ಯವನ್ನು ಸ್ಥಾಪಿಸಿ ಆಳಿದರು. ಇವರು ಸುಮಾರು 500 ವರ್ಷಗಲ ಕಾಲ ಅಂದರೆ ಗುಪ್ತರು ಇವರನ್ನು ಸೋಲಿಸುವ ವರೆಗೆ ಆಳಿದರು.
👉 ಅವರ ನಂತರ ಕುಷಾನರು ಸುಮಾರು 200 ವರ್ಷಗಳ ಕಾಲ ಆಳಿದರು.
👉 ಅವರ ನಂತರ ಉತ್ತರ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಪುಷ್ಯಮಿತ್ರ ಶುಂಗ ಎಂಬ ಮೌರ್ಯರ ಸೇನಾಧಿಪತಿಯು ಒಂದು ರಾಜ್ಯವನ್ನು ಸ್ಥಾಪಿಸಿದನು.
👉 ಇವರ ನಂತರ ಕಣ್ವರು ಗುಪ್ತ ಸಾಮ್ರಾಜ್ಯ ಸ್ಥಾಪನೆಯಾಗುವವರೆಗೆ ಆಳ್ವಿಕೆ ನಡೆಸಿದರು.
👉 ಇವರ ನಂತರ ಗುಪ್ತರು ಸುಮಾರು 1700 ವರ್ಷಗಳ ಹಿಂದೆ ಆಳಿದರು.
👉 ಇವರ ನಂತರ ಶಾತವಾಹನರು ಸುಮಾರು 2100 ವರ್ಷಗಳ ಹಿಂದೆ ಪ್ರವರ್ಧಮಾನಕ್ಕೆ ಬಂದು. ಇವರು ಸುಮಾರು 400 ವರ್ಷಗಳ ಕಾಲ ಮಧ್ಯ ಮತ್ತು ಪಶ್ಚಿಮ ಭಾರತದಲ್ಲಿ ಆಳಿದರು.
👉 ಇವರ ನಂತರ ವಾಕಾಟಕರು ಆಳಿದರು.
👉 ದಕ್ಷಿಣ ಭಾರತದಲ್ಲಿ ಚೋಳರು, ಚೇರರು ಮತ್ತು ಪಾಂಡ್ಯರು ಸುಮಾರು 2200 ರಿಂದ 1800 ವರ್ಷ್ ಗಳ ವರೆಗೆ ಆಳಿದರು.
👉 ಸುಮಾರು 1500 ವರ್ಷಗಳ ಹಿಂದೆ ಪಲ್ಲವ ಮತ್ತು ಚಾಳುಕ್ಯರು ಎಂಬ ಎರಡು ದೊಡ್ಡ ಸಾಮ್ಯಾಜ್ಯಗಳು ಹುಟ್ಟಿಕೊಂಡವು.