ಭೂಮಿಯ ಚಲನೆ
- ಭೂಮಿಯು ಎರಡು ವಿವಿಧ ಚಲನೆಯನ್ನಯ ಹೊಂದಿದೆ.
- ಭ್ರಮಣೆ : ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುವುದು.
- ಪರಿಭ್ರಮಣೆ : ಭೂಮಿಯು ಸೂರ್ಯನ ಸುತ್ತ ಸುತ್ತುವುದು.
- ಭೂಮಿಯು ಅಕ್ಷವು ಕಾಲ್ಪನಿಕ ರೇಖೆಯಾಗಿದ್ದು, ಅದರ ಕಕ್ಷೆಯು ಸಮತಲದೊಂದಿಗೆ 62 ½° ಕೋನವನ್ನ ಮಾಡುತ್ತದೆ.
- ಭೂಮಿಯು ಗೋಳಾಕಾರದಿಂದ ಅದರ ಅರ್ಧದಷ್ಟು ಮಾತ್ರ ಒಂದು ಸಮಯದಲ್ಲಿ ಸೂರ್ಯನಿಂದ ಬೆಳಕನ್ನು ಪಡೆಯುತ್ತದೆ. ಅಂದರೆ ಸೂರ್ಯನು ಎದುರಿಸುವ ಭಾಗ "ಹಗಲು", ಅದರ ವಿರುದ್ಧ ಇರುವ ಭಾಗ "ರಾತ್ರಿ/ಕತ್ತಲು".
- ಭೂಗೋಳದಲ್ಲಿ ಹಗಲನ್ನು ರಾತ್ರಿಯಿಂದ ವಿಭಜಿಸುವ ವೃತ್ತವನ್ನು "ಪ್ರಕಾಶದ ವೃತ್ತ" ಎಂದು ಕರೆಯುವರು.
- ಭೂಮಿಯು ತನ್ನ ಅಕ್ಷದ ಸುತ್ತ ಸುತ್ತಲೂ 24 ಗಂಟೆ ತೆಗೆದುಕೊಳ್ಳತ್ತದೆ.ಈ ಅವಧಿಯನ್ನು "ಭೂಮಿಯ ದಿನ" ಎನ್ನುವರು
ಭೂಮಿಯು ತಿರುಗದಿದ್ದರೆ ಏನಾಗಬಹುದು?
- ಸೂರ್ಯನನ್ನು ಎದುರಿಸುವ ಭಾಗವು ಯಾವಾಗಲು ಬೆಳಕಿನ್ನು ಅನುಭವಿಸುತ್ತದೆ. ಹೀಗಾಗಿ ಈ ಪ್ರದೇಶ ನಿರಂತರ ಉಷ್ಣತೆಯನ್ನು ಅನುಭವಿಸುತ್ತದೆ. ಉಳಿದ ಅರ್ಧ ಭಾಗ ನಿರಂತರ ಶೀತವಾಗಿರುತ್ತದೆ. ಇದರಿಂದಾಗಿ ಜೀವನ ಉಗಮ ಅಸಾಧ್ಯವಾಗಬಹುದಿತ್ತು.
ಭೂಮಿಯ ಪರಿಭ್ರಮಣೆ :
- ಭೂಮಿ ಸೂರ್ಯನ ಸುತ್ತ ಸುತ್ತಲೂ ತೆಗೆದುಕೊಳ್ಳುವ ಸಮಯ 365 ¼ ದಿನಗಳು (ಅಂದರೆ 365 ದಿನಗಳು ಮತ್ತು 6 ಗಂಟೆಗಳು). ನಾವು ನಮ್ಮ ಅನುಕೂಲಕ್ಕಾಗಿ 365 ದಿನಗಳು ಎಂದು ಪರಿಗಣಿಸಿ 6 ಗಂಟೆಗಳನ್ನು ಪ್ರತಿ ವರ್ಷ ಉಳಿಸಿ, 4 ವರ್ಷಗಳ ನಂತರ ಒಂದು ದಿನವನ್ನಾಗಿಸಿ "ಅಧಿಕ ವರ್ಷವಾಗಿ" ಪರಗಣಿಸುತ್ತೇವೆ. ಈ ಅಧಿಕ ವರ್ಷದ ದಿನವನ್ನು ಫೆಬ್ರುವರಿ ತಿಂಗಳಿನಲ್ಲಿ ಕೂಡಿಸುತ್ತೇವೆ. (ಫೆಬ್ರುವರಿ-29)
- ವರ್ಷವನ್ನು ಸಾಮಾನ್ಯವಾಗಿ ಬೇಸಿಗೆ, ಚಳಿಗಾಲ, ವಸಂತ ಹಾಗೂ ಶರತ್ಕಾಲದ ಋತುಗಳಾಗಿ ವಿಂಗಡಿಸಲಾಗಿದೆ.
- ಸೂರ್ಯನ ಸುತ್ತ ಭೂಮಿಯ ಸ್ಥಾನದಲ್ಲಿನ ಬದಲಾವಣೆಯಿಂದಾಗಿ ಈ ಋತುಗಳು ಬದಲಾಗುತ್ತವೆ.
ಕಟಕಾಯನ :
- ಜೂನ್ 21 ರಂದು ಭೂಮಿಯು ಉತ್ತರ ಗೋಳಾರ್ಧವು ಸೂರ್ಯನ ಕಡೆಗೆ ವಾಲಿರುವುದು. ಹೀಗಾಗಿ, ಸೂರ್ಯನ ಕಿರಣಗಳು ನೇರವಾಗಿ "ಕರ್ಕಾಟಕ ಸಂಕ್ರಾಂತಿಯ" ಮೇಲೆ ಬೀಳುವವು. ಈ ಪರಿಣಾಮವಾಗಿ ಈ ಪ್ರದೇಶ ಹೆಚ್ಚು ಶಾಖ ಪಡೆಯುತ್ತದೆ. ಸೂರ್ಯನ ಕಿರಣಗಳು ಧ್ರುವಗಳ ಮೇಲೆ ಓರೆಯಾಗಿರುವುದರಿಂದ ಧ್ರುವ ಪ್ರದೇಶಗಳು ಕಡಿಮೆ ಶಾಖವನ್ನು ಅನುಭವಿಸುತ್ತವೆ, ಆದರೆ ಭೂಮಿಯ ವಾಲಿಕೆಯಿಂದ ಉತ್ತರ ಧ್ರುವ ನಿರಂತರ ಹಗಲು ಬೆಳಕನ್ನು 6 ತಿಂಗಳ ಕಾಲ ಅನುಭವಿಸುತ್ತದೆ.
- ಜೂನ್ 21 ರಂದು ಉತ್ತರ ಗೋಳಾರ್ಧದಲ್ಲಿ ಅತಿ ಹೆಚ್ಚು ಹಗಲು ಮತ್ತು ಅತಿ ಕಡಿಮೆ ರಾತ್ರಿ ಸಂಭವಿಸುತ್ತದೆ. ಈ ಸಮಯದಲ್ಲಿ ದಕ್ಷಿಣ ಗೋಳಾರ್ಧದಲ್ಲಿ ಈ ಎಲ್ಲಾ ಪರಿಸ್ಥಿತಿಗಳು ವ್ಯತಿರಿಕ್ತವಾಗಿರುತ್ತವೆ.
- ದಕ್ಷಿಣ ಗೋಳಾರ್ಧದಲ್ಲಿ - ಚಳಿಗಾಲ.
- ಉತ್ತರ ಗೋಳಾರ್ಧದಲ್ಲಿ - ಬೇಸಿಗೆ ಕಾಲ.
ಮಕರಾಯನ :
- ಡಿಸೆಂಬರ್ 22 ರಂದು ಸೂರ್ಯನ ನೇರವಾದ ಕಿರಣಗಳು ಮಕರ ಸಂಕ್ರಾಂತಿ ವೃತ್ತದ ಮೇಲೆ ಬೀಳುವವು. ಏಕೆಂದರೆ, ದಕ್ಷಿಣ ಧ್ರುವ ಸೂರ್ಯನ ಕಡೆ ವಾಲಿರುತ್ತದೆ. ಹೀಗಾಗಿ, ದಕ್ಷಿಣ ಗೋಳಾರ್ಧವು ಧೀರ್ಘ ಹಗಲು ಹಾಗೂ ಕಡಿಮೆ ರಾತ್ರಿಗಳೊಂದಿಗೆ ಬೇಸಿಗೆಯಾಗಿದೆ. ಉತ್ತರ ಗೋಳಾರ್ಧದಲ್ಲಿ ವ್ಯತಿರಿಕ್ತವಾಗಿರುತ್ತದೆ.
- ಮಾರ್ಚ 21 ರಂದು ಹಾಗೂ ಸೆಪ್ಟಂಬರ್ 23 ರಂದು ಸೂರ್ಯನ ಕಿರಣಗಳು ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುತ್ತವೆ. ಈ ಸಮಯದಲ್ಲಿ ಎರಡು ಧ್ರುವಗಳು ಸೂರ್ಯನ ಕಡೆಗೆ ಓರೆಯಾಗಿರುವುದಿಲ್ಲ. ಹಿಗಾಗಿ, ಇಡಿ ಭೂಮಿಯಲ್ಲಿ ಸಮನಾಗಿ ಹಗಲು ಮತ್ತು ರಾತ್ರಿಗಲು ಸಂಭವಿಸುತ್ತವೆ. ಇದನ್ನು "ವಿಷವತ್ ಸಂಕ್ರಾಂತಿ" ಎನ್ನುವರು.
| ಸಮಯ | ಉತ್ತರ ಗೋಳಾರ್ಧ | ದಕ್ಷಿಣ ಗೋಳಾರ್ಧ |
|---|---|---|
| ಸೆಪ್ಟೆಂಬರ್-23 | ಶರತ್ಕಾಲ | ವಸಂತ ಕಾಲ |
| ಮಾರ್ಚ್-21 | ವಸಂತ ಕಾಲ | ಶರತ್ಕಾಲ |