ಅಧ್ಯಾಯ -7. ಹೊಸ ಪ್ರಶ್ನೆಗಳು ಮತ್ತು ಆಲೋಚನೆಗಳು - NEW QUESTIONS AND IDEAS

ಹೊಸ ಪ್ರಶ್ನೆಗಳು ಮತ್ತು ಆಲೋಚನೆಗಳು

New questions and ideas

    ಬೌದ್ಧ ಧರ್ಮ

    ಗೌತಮ ಬುದ್ಧ

    👉 ಬುದ್ಧನ ಮೊದಲ ಹೆಸರುಗಳು "ಸಿದ್ದಾರ್ಥ", "ಗೌತಮ".
    👉 ಗೌತಮ ಬುದ್ಧನು "ಬೌದ್ಧ ಧರ್ಮ"ವನ್ನು ಸ್ಥಾಪಿಸಿದನು.

    New questions and ideas


    👉 ಗೌತಮ ಬುದ್ಧನು ಕ್ರಿ.ಪೂ 6ನೇ ಶತಮಾನ ಅಂದರೆ ಸುಮಾರು 2500 ವರ್ಷಗಳ ಹಿಂದೆ ಜನಿಸಿದನು.
    👉 ಗೌತಮ ಬುದ್ಧನು "ಶಾಕ್ಯ ಗಣ" ಎಂದು ಕರೆಯಲ್ಪಡುವ ಒಂದು ಸಣ್ಣ ಗಣಕ್ಕೆ ಸೇರಿದವನಾಗಿದ್ದನು ಮತ್ತು ಕ್ಷತ್ರಿಯನಾಗಿದ್ದನು.
    👉 ಗೌತಮ ಬುದ್ಧನಿಗೆ "ಬಿಹಾರದ ಬೋಧಗಯಾ" ದಲ್ಲಿ "ಅರಳಿಮರದ" ಕೆಳಗೆ ಜ್ಞಾನೋದಯವಾಯಿತು.
    ಬುದ್ದ ಎಂದರೆ "ಜಾಣ" ಎಂದರ್ಥ.
    👉 ಗೌತಮ ಬುದ್ಧನು  -"ಸಾರನಾಥ" (ವಾರನಾಶಿ) ದಲ್ಲಿರುವ "ಜಿಂಕೆವನದಲ್ಲಿ" ಮೊದಲ ಬಾರಿಗೆ ತನ್ನ ಬೋಧನೆ ಮಾಡಿದನು.
    👉 ಗೌತಮ ಬುದ್ಧನು "ಕುಶಿನಗರ"ದಲ್ಲಿ ಮರನ ಹೊಂದಿದನು.
    👉 ಗೌತಮ ಬುದ್ಧನು ತನ್ನ ಬೋಧನೆಗಳನ್ನು "ಪ್ರಾಕೃತ" ಭಾಷೆಯಲ್ಲಿ ಬೋಧಿಸಿದನು.

    New questions and ideas

    ಕಿಸಾಗೌತಮಿಯ ಕಥೆ

                ಕಿಸಾಗೌತಮಿ ಎಂಬ ಒಬ್ಬ ಮಹಿಳೆ ಇದ್ದಳು. ಅವಳ ಮಗ ಸತ್ತು ಹೋಗಿದ್ದನು. ಅವಳು ತುಂಬಾ ದುಃಖಿತಳಾಗಿದ್ದಳು. ಮಗುವನ್ನು ತನ್ನೊಂದಗೆ ಹೊತ್ತುಕೊಂಡು ಅವನನ್ನು ಮತ್ತೆ ಬದುಕಿಸಲು ನಗರದ ಬೀದಿ, ಬೀದಿಗಳಲ್ಲಿ ಅಲೆದಾಡುತ್ತಿದ್ದಳು. ಒಬ್ಬ ವ್ಯಕ್ತಿ ಅವಳನ್ನು ಬುದ್ಧನ ಬಳಿ ಕರೆದುಕೊಂಡು ಬಂದನು. ಬುದ್ಧ ಕಿಸಾಗೌತಮಿಗೆ "ನನಗೆ ಒಂದು ಹಿಡಿ ಸಾಸಿವೆ ಕಾಳು ತೆಗೆದುಕೊಂಡು ಬಾ, ನಾನು ನಿನ್ನ ಮಗುವನ್ನು ಮತ್ತೆ ಬದುಕಿಸುತ್ತೇನೆ." ಎಂದು ಹೇಳಿದನು. ಕಿಸಾಗೌತಮಿ ತುಂಬಾ ಸಂತೋಷದಿಂದ ತಕ್ಷಣವೇ ತರಲು ಹೋರಟಳು, ಆದರೆ ಬುದ್ಧ ಅವಳನ್ನು ನಿಧಾನವಾಗಿ ತಡೆದು " ನನಗೆ ಯಾರೂ ಸಾಯದ ಮನೆಯಿಂದ ಸಾಸಿವೆ ಕಾಳನ್ನು ತರಬೇಕು" ಎಂದೂ ಹೇಳಿದನು. ನಂತರ ಕಿಸಾಗೌತಮಿ ಮನೆಯಿಂದ ಮನೆಗೆ ಸಾಸಿವೆ ತರಲು ಹೋದಳು. ಆದರೆ ಅವಳು ಎಲ್ಲಿ ಹೋದರು , ಯಾರಾದರೂ ಒಬ್ಬರು ಸತ್ತು ಹೋಗಿದ್ದರು. ಕೊನೆಗೂ ಅವಳಿಗೆ ಸಾಸಿವೆ ಕಾಳೂ ದೊರೆಯುವುದಿಲ್ಲ. ಖಾಲಿ ಕೈಯಿಂದ ಬುದ್ಧನ ಬಳಿ ಬಂದು ಹೇಳುತ್ತಾಳೆ. ಆಗ ಬುದ್ಧನು ಅವಳಗೆ "ಸಾವು ಖಚಿತವಾದುದು, ಇದು ಸಹಜವಾದುದು, ಸಾವು ಇಲ್ಲದ ಮನೆಯೇ ಇಲ್ಲ" ಆದ್ದರಿಂದ ಯಾವುದೇ ಒಂದು ವಸ್ತು ಅಥವಾ ವ್ಯಕ್ತಿಯ ಮೇಲೆ ಅತಿಯಾದ ಮೋಹ ಇರಬಾರದು ಎಂದು ಹೇಳಿದನು.


    ಗೌತಮ ಬುದ್ಧನ ಬೋಧನೆಗಳು

    • ಜೀವನವು ದುಃಖ ಮತ್ತು ಅಶಾಂತಿಯಿಂದ ಕೂಡಿದೆ ಎಂದು ಹೇಳಿದ್ದಾರೆ.
    • ದಯಾಳುಗಳಾಗಿರಿ, ಪ್ರಾಣಿಗಳು ಸೇರಿದಂತೆ ಇತರರ ಜೀವನವನ್ನ ಗೌರವಿಸಿ ಎಂದು ಹೇಳಿದ್ದಾರೆ.
    • ಕರ್ಮಗಳಲ್ಲಿ ನಂಬಿಕೆ ಇಟ್ಟಿದ್ದರು.

    ಉಪನಿಷತ್ತುಗಳು

    👉 ಇವುಗಳು ವೇದಗಳು ರಚನೆಯಾದ ನಂತರದ ಕಾಲದಲ್ಲಿ ರಚಿತವಾಗಿವೆ.
    👉 ಉಪನಿಷತ್ ಎಂದರೆ "ಗುರುವಿನ ಹತ್ತಿರ ಕುಳಿತುಕೊಂಡು ಅರ್ಥೈಸಿಕೊಳ್ಳುವುದು ಮತ್ತು ಗುರು ಶಿಷ್ಯರ ಸಂಭಾಷಣೆ".
    👉 ಬಹುತೇಕ ಉಪನಿಷತ್ ಗಳ ವಿಚಾರಕರು ಪುರುಷರಾಗಿದ್ದಾರೆ. ವಿಶೇಷವಾಗಿ ಬ್ರಾಹ್ಮಣರು ಮತ್ತು ರಾಜರು.
    👉 ಮಹಿಳಾ ಚಿಂತಕರಲ್ಲಿ "ಗಾರ್ಗಿ" ಹೆಸರುವಾಸಿಯಾಗಿದ್ದಾಳೆ. ಮತ್ತು "ಸತ್ಯಕಾಮ ಜಬಲಿ" ಗುಲಾಮ ಮಹಿಳೆ.
    👉 ಉಪನಿಷತ್ತುಗಳ ಅನೇಕ ವಿಚಾರಗಳನ್ನು ನಂತರ ಅಭಿವೃದ್ದಿಪಡಿಸಿದವರು -"ಶಂಕರಾಚಾರ್ಯರು".
    👉 ಪಾನಿಣಿ - ಸಂಸ್ಕೃತದಲ್ಲಿ "ವಾಕರಣ"ವನ್ನು ಸಿದ್ದಪಡಿಸಿದರು. ಸ್ವರಗಳನ್ನು ಮತ್ತು ವ್ಯಂಜನಗಳನ್ನು ವಿಶೇಷ ಕ್ರಮದಲ್ಲಿ ಜೋಡಿಸಿದರು ಮತ್ತು ನಂತರ ಬೀಜಗಣಿತದಲ್ಲಿ ಕಂಡು ಬರುವ ಸೂತ್ರಗಳನ್ನು ರಚಿಸಲು ಸುಮಾರು 3000 ಬಾಷೆಯ ನಿಯಮಗಳನ್ನು ಬಳಸಿದರು.

    ಜೈನ ಧರ್ಮ

    ವರ್ಧಮಾನ ಮಹಾವೀರ

    👉 ಜೈನರ ಕೊನೆಯ ಮತ್ತು 24ನೇ ತೀರ್ಥಂಕರ - "ವರ್ಧಮಾನ ಮಹಾವೀರ".
    👉 ವರ್ಧಮಾನ ಮಹಾವೀರ 2500 ವರ್ಷಗಳ ಹಿಂದೆ ತಮ್ಮ ಸಂದೇಶವನ್ನು ಹರಡಿದರು.
    👉 ವರ್ಧಮಾನ ಮಹಾವೀರನು "ವಜ್ಜಿ ಸಂಘ"ದಲ್ಲಿರುವ "ಲಿಚ್ಚವಿಯ" ಕ್ಷತ್ರಿಯ ರಾಜಕುಮಾರನಾಗಿದ್ದನು.

    New questions and ideas

    👉 ವರ್ಧಮಾನ ಮಹಾವೀರ 30 ನೇ ವಯಸ್ಸಿನಲ್ಲಿ ಮನೆ ಬಿಟ್ಟು ಕಾಡಿನಲ್ಲಿ ವಾಸಿಸಲು ಹೋದರು. ಸುಮಾರು 12 ವರ್ಷಗಳ ಕಾಲ ಅವರು ಕಠಿಣ ಮತ್ತು ಒಂಟಿ ಜೀವನ ನಡೆಸಿದರು. ನಂತರ ಕೊನೆಯಲ್ಲಿ ಜ್ಞಾನೋದಯವನ್ನು ಪಡೆದರು.

    ಮಹಾವೀರನ ಬೋಧನೆಗಳು

    • ಸತ್ಯವನ್ನು ತಿಳಿಯ ಬಯಸುವ ಪ್ರತಿಯೊಬ್ಬ ಪುರುಷರು ಮತ್ತು ಸ್ತ್ರೀಯರು ತಮ್ಮ ಮನೆಗಳನ್ನು ತೊರೆಯಬೇಕು ಎಂದು ಹೇಳಿದರು.
    • ಅಂಹಿಸೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಮತ್ತು ಯಾವ ಜೀವಿಗಳನ್ನು ನೋಯಿಸಬಾರದು ಎಂದು ಬೋಧಿಸಿದರು.
    👉 ವರ್ಧಮಾನ ಮಹಾವೀರ ತನ್ನ ಬೊದನೆಗಳನ್ನು "ಪ್ರಾಕೃತ" ಭಾಷೆಯಲ್ಲಿ ಬೋಧಿಸಿದರು.

    ಮಹಾವೀರನ ಅನುಯಾಯಿಗಳು

    👉 ಮಹಾವೀರನ ಅನುಯಾಯಿಗಳನ್ನು "ಜೈನರು" ಎಂದು ಕರೆಯುತ್ತಾರೆ.
    👉 ಅನುಯಾಯಿಗಳು ಸಾಮಾನ್ಯ ಜೀವನವನ್ನು ಬದುಕಬೇಕು ಮತ್ತು ಆಹಾರಕ್ಕಾಗಿ ಭಿಕ್ಷೆ ಬೇಡಬೇಕು.
    👉 ಕಳ್ಳತನ ಮಾಡುವಂತಿಲ್ಲ.
    👉 ಬ್ರಹ್ಮಚಾರವನ್ನು ಅನುಸರಿಸಬೇಕು.
    👉 ಪುರುಷರು ಎಲ್ಲವನ್ನು ತ್ಯಜಿಸಬೇಕು. (ಬಟ್ಟೆಯನ್ನು ಕೂಡಾ)

    👉 ಈ ಧರ್ಮ ಭಾರತದ ಗುಜರಾತ್‌, ಉತ್ತರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹರಡಿತು.
    👉 ಸುಮಾರು 1500 ವರ್ಷಗಳ ಹಿಂದೆ  "ಗುಜರಾತಿನ ವಲ್ಲಭಿ" ಎಂಬ ಸ್ಥಳದಲ್ಲಿ ಬುದ್ಧನ ಬೋದನೆಗಳನ್ನು ಬರೆಯಲಾಯಿತು.

    ಸಂಘ

    👉 ತಮ್ಮ ಮನೆಯನ್ನು ತೊರೆದರೆ ಮಾತ್ರ ಜ್ಞಾನವನ್ನು ಸಂಪಾದಿಸಬಹುದು ಎಂದು ಮಾಹಾವೀರ ಮತ್ತು ಬುದ್ಧರು ಅಭಿಪ್ರಾಯ ಪಟ್ಟಿದ್ದಾರೆ.
    👉 ಮನೆಯನ್ನು ಬಿಟ್ಟ ಮಾಹಾವೀರ ಮತ್ತು ಬುದ್ಧರ ಅನುಯಾಯಿಗಳು ಕೂಡಿಕೊಂಡು "ಸಂಘ"ಗಳನ್ನು ಕಟ್ಟಿದರು.
    👉 "ವಿನಯ ಪೀಠಕ"ದಲ್ಲಿ ಬೌದ್ಧ ಧರ್ಮದ ಅನುಯಾಯಿಗಳ ನಿಯಮಗಳನ್ನು ಬರೆಯಲಾಗಿದೆ.
    👉 ಸಂಘಗಳಲ್ಲಿ ಮಹಿಳೆಯರು ಕೂಡಾ ಸೇರಬಹುದಾಗಿತ್ತು.
    👉 ಬೌದ್ಧ ಧರ್ಮದ ಅನುಯಾಯಿಗಳು :
    1. ಬಿಕ್ಕು (ಪುರುಷರು)
    2. ಬಿಕ್ಕುನಿಯರು (ಮಹಿಳೆಯರು)

    ವಿಹಾರಗಳು

    👉 ಬೌದ್ಧ ಸನ್ಯಾಸಿಗಳು ಮಳೆಗಾಲದಲ್ಲಿ ತಂಗಲು ಮಠಗಳನ್ನು (Monasteries) ನಿರ್ಮಿಸಲಾಯಿತು. ಇವುಗಳನ್ನು "ವಿಹಾರಗಳು" ಎಂದು ಕರೆಯುತ್ತಾರೆ.
    👉  ವಿಹಾರಗಳನ್ನು ಕಟ್ಟಿಗೆ ಮತ್ತು ಇಟ್ಟಿಗೆಗಳಿಂದ ನಿರ್ಮಿಸಲಾಯಿತು. ಮತ್ತು ಪಶ್ಚಿಮ ಭಾರತದಲ್ಲಿ ವಿಹಾರಗಳನ್ನು ಗುಹೆಗಳಲ್ಲಿ ನಿರ್ಮಿಸಲಾಗಿದೆ.

    New questions and ideas


    ಆಶ್ರಮಗಳು

    👉 ಜೈನ ಮತ್ತು ಬೌದ್ಧ ಧರ್ಮ ಜನಪ್ರಿಯವಾದಂತೆ ಬ್ರಾಹ್ಮಣರು ಜೀವನದ ಆಶ್ರಮದ ಹಂತಗಳನ್ನು ಅಭಿವೃದ್ಧಿಗೊಳಿಸಿದರು.
    👉 ಆಶ್ರಮದ ಹಂತಗಳು :
    1. ಬ್ರಹ್ಮಚರ್ಯ
    2. ಗೃಹಸ್ಥ
    3. ವಾನಪ್ರಸ್ಥ
    4. ಸನ್ಯಾಸ

    ಪಾರ್ಸಿ

    👉 ಇರಾನ್‌ ನಲ್ಲಿ "ಝೋರೋಸ್ಟರ್"‌ ಧರ್ಮವು ಒಂದು ಪ್ರಮುಖ ಧರ್ಮವಾಗಿತ್ತು. 
    👉 ಈ ಧರ್ಮ "ಝೋರೋಸ್ಟರ್"‌ ಎಂಬ ಧರ್ಮ ಪ್ರತಿಪಾದಕನ ಬೋಧನೆಯಿಂದ ಪ್ರಾರಂಭವಾಯಿತು.
    👉 ಝೋರೋಸ್ಟರ್ "ಅವೆಸ್ತಾ" ಎಂಬ ಪುಸ್ತಕವನ್ನು ಬರೆದನು.
    👉 ಪ್ರಸ್ತುತ "ಪಾರ್ಸಿ" ಜನರ ಪೂರ್ವಜರು ಈ ಧರ್ಮಕ್ಕೆ ಸೇರಿದವರಾಗಿದ್ದಾರೆ.
    Post a Comment (0)
    Previous Post Next Post