ಏನು, ಎಲ್ಲಿ, ಹೇಗೆ ಮತ್ತು ಯಾವಾಗ?
ಜನರು ಎಲ್ಲಿ ವಾಸಿಸುತ್ತಿದ್ದರು?
👉ನರ್ಮದಾ ನದಿಯು ದಡದಲ್ಲಿ ಸಾವಿರಾರು ವರ್ಷಗಳಿಂದ ಜನರು ವಾಸಿಸುತಿದ್ದಾರೆ. ಇಲ್ಲಿ ವಾಸಿಸುತಿದ್ದ ಸಾವಿರಾರು ಜನರು ನುರಿತ ಸಂಗ್ರಹಕಾರರು ಅಂದರೆ ತಮ್ಮ ಆಹಾರವನ್ನು ಸಂಗ್ರಹಿಸುವ ಜನರು ಅವರು ಸುತ್ತಮುತ್ತಲಿನ ಕಾಡುಗಳಲ್ಲಿನ ಸಸ್ಯಗಳ ಅಪಾರ ಸಂಪತ್ತಿನ ಬಗ್ಗೆ ತಿಳಿದಿದ್ದರು ಮತ್ತು ತಮ್ಮ ಆಹಾರಕ್ಕಾಗಿ ಬೇರುಗಳು ಹಣ್ಣುಗಳು ಮತ್ತು ಇತರ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿದರು. ಹಾಗೂ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು
ಸುಲೈಮಾನ್ ಮತ್ತು ಕಿರ್ತಾರ್ ಬೆಟ್ಟಗಳು (ಪಾಕಿಸ್ತಾನ)
👉 ಸುಮಾರು 8000 ವರ್ಷಗಳ ಹಿಂದೆ ಸುಲೈಮಾನ್ ಮತ್ತು ಕಿರ್ತಾರ್ ಬೆಟ್ಟಗಳಲ್ಲಿ ಮೊದಲು ಗೋಧಿ ಮತ್ತು ಬಾರ್ಲಿಯಂತಹ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದರು.
👉 ಜನರು ಕುರಿ, ಮೇಕೆ ಮತ್ತು ದನಗಳಂತಹ ಪ್ರಾಣಿಗಳನ್ನು ಸಾಕಲು ಪ್ರಾರಂಭಿಸಿದರು.
👉 ಜನರು ಹಳ್ಳಿಗಳಲ್ಲಿ ವಾಸಿಸಲು ಪ್ರಾರಂಭಿಸಿದರು.
ಗಾರೋ ಬೆಟ್ಟಗಳು
👉 ಈಶಾನ್ಯ ಭಾರತದಲ್ಲಿ ಮೊದಲು ಕೃಷಿ ಅಭಿವೃದ್ಧಿಗೊಂಡಿತು.
👉 ಭತ್ತವನ್ನು (ಅಕ್ಕಿ) ಮೊದಲು ಬೆಳೆದ ಸ್ಥಳ - ಗಾರೋ ಬೆಟ್ಟಗಳು.
ಸಿಂಧೂ ನದಿ ಮತ್ತು ಅದರ ಉಪನದಿಗಳು
👉 ಸಿಂಧೂ ನದಿಯ ಮತ್ತು ಅದರ ಉಪನದಿಗಳ ದಡದಲ್ಲಿ ಸುಮಾರು 4700 ವರ್ಷಗಳ ಹಿಂದೆ ಆರಂಭಿಕ ನಗರಗಳು ಪ್ರವರ್ಧಮಾನಕ್ಕೆ ಬಂದವು.
ಗಂಗಾ ನದಿ ಮತ್ತು ಸನ್ ನದಿ
👉 ಸುಮಾರು 2500 ವರ್ಷಗಳ ಹಿಂದೆ ಗಂಗಾ ಮತ್ತು ಅದರ ಉಪನದಿಗಳ ದಡದಲ್ಲಿ ನಗರಗಳು ಅಭಿವೃದ್ಧಿಗೊಂಡವು.
👉 ಗಂಗಾ ನದಿಯ ಉಪನದಿಯನ್ನು "ಸನ್" ಎಂದು ಕರೆಯಲಾಗುತ್ತದೆ.
👉 ಪ್ರಾಚೀನ ಕಾಲದಲ್ಲಿ ಗಂಗಾ ನದಿಯ ದಕ್ಷಿಣಕ್ಕಿರುವ ಪ್ರದೇಶವನ್ನು "ಮಗಧ" ಎಂದು ಕರೆಯುತ್ತಿದ್ದರು. ಅದು ಇಂದಿನ ಬಿಹಾರ ರಾಜ್ಯವಾಗಿದೆ.
👉ಮಗಧ ಪ್ರದೇಶದ ಆಡಳಿತಗಾರರು ಬಹಳ ಶಕ್ತಿಶಾಲಿಗಳಾಗಿದ್ದರು. ಅವರು ದೊಡ್ಡ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಅದನ್ನು "ಮಗಧ ಸಾಮ್ರಾಜ್ಯ" ಎನ್ನುವರು.
👉 ಈ ಕಾಲದಲ್ಲಿ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಲು ಪ್ರಾರಂಭಿಸಿದರು.
ಉದಾ - ಸೈನ್ಯ ವ್ಯಾಪಾರಿಗಳು ಧಾರ್ಮಿಕ ಶಿಕ್ಷಕರು ಸಾಹಸಿಗಳು.
👉ವ್ಯಾಪಾರಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಲು ಚಕ್ಕಡಿ ರೀತಿಯ ವಾಹನಗಳನ್ನು ಬಳಸುತ್ತಿದ್ದರು.
👉ದಕ್ಷಿಣ ಏಷ್ಯಾವನ್ನು ಒಂದು "ಉಪಖಂಡ" ಎಂದು ಕರೆಯುತ್ತಾರೆ. ಏಕೆಂದರೆ ಇದು ಖಂಡಕ್ಕಿಂತ ಚಿಕ್ಕದಾಗಿದ್ದರೂ. ಇದು ತುಂಬಾ ದೊಡ್ಡದಾಗಿ.
ಭೂಮಿಯ ಹೆಸರುಗಳು
👉 ನಮ್ಮ ದೇಶಕ್ಕೆ ನಾವು ಸಾಮಾನ್ಯವಾಗಿ ಬಳಸುವ ಎರಡು ಪದಗಳಾಗಿ ಇಂಡಿಯಾ ಮತ್ತು ಭಾರತ.
ಇಂಡಿಯಾ
👉ಇಂಡಿಯಾ ಎಂಬ ಪದವು "ಇಂಡಸ್" ಎಂಬ ಪದದಿಂದ ಬಂದಿದೆ. ಇಂಡಸ್ ಎಂಬುದಕ್ಕೆ ಸಂಸ್ಕೃತದಲ್ಲಿ "ಸಿಂಧೂ" ಎಂದೂ ಕರೆಯುತ್ತಾರೆ.
👉ಸುಮಾರು 2500 ವರ್ಷಗಳ ಹಿಂದೆ ಇರಾನಿಯನ್ನರು ಮತ್ತು ಗ್ರೀಕರು ಭಾರತಕ್ಕೆ ಬಂದರು. ಮತ್ತು ಭಾರತವನ್ನು "ಇಂಡೋಸ್" ಎಂದೂ ಮತ್ತು ಇಲ್ಲಿನ ಭಾರತೀಯರನ್ನು "ಹಿಂದೋಸ್" (ಹಿಂದೂಗಳು) ಎಂದು ಕರೆದರು.
👉 ಸಿಂಧೂ ನದಿಯ ಪೂರ್ವ ಭಾಗದ ಪ್ರದೇಶವನ್ನು "ಇಂಡಿಯಾ" (ಭಾರತ) ಎಂದು ಕರೆದರು.
ಭಾರತ
👉ಭಾರತ ಎಂಬ ಪದವನ್ನು ಸುಮಾರು 3500 ವರ್ಷಗಳ ಹಿಂದೆ "ಖುಗ್ವೇದ"ದಲ್ಲಿ ಬಳಸಲಾಗಿದೆ. ಅಂದರೆ ಭಾರತ ಎಂಬ ಪದವನ್ನು ವಾಯುವ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರ ಗುಂಪಿಗೆ ಬಳಸಲಾಗುತ್ತಿತ್ತು.
ಹಿಂದಿನದನ್ನು ಕಂಡು ಹಿಡಿಯುವುದು
ಹಸ್ತ ಪ್ರತಿಗಳು (Manu script)
👉 ಇದು "ಮನು" ಎಂಬ "ಲ್ಯಾಟಿನ್" ಪದದಿಂದ ಬಂದಿದ್ದು ಇದರ ಅರ್ಥ - "ಕೈ"
👉 ಇವುಗಳನ್ನು ಕೈಯಿಂದ ಬರೆಯಲಾಗುತ್ತಿತ್ತು.
👉 ಇವುಗಳನ್ನು "ತಾಳೆ ಎಲೆಯ" ಮೇಲೆ ಅಥವಾ ಹಿಮಾಲಯದಲ್ಲಿ ಬೆಳೆಯುವ "ಬರ್ಚ್" ಎಂದು ಕರೆಯಲ್ಪಡುವ ಮರದ ತೊಗಟೆಯ ಮೇಲೆ ಬರೆಯಲಾಗುತ್ತಿತ್ತು.
👉 ಇವುಗಳಲ್ಲಿ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳು ರಾಜರ ಜೀವನ ಔಷಧ ಮತ್ತು ವಿಜ್ಞಾನ ಮಹಾಕಾವ್ಯಗಳು ಕವಿತೆಗಳು ನಾಟಕಗಳನ್ನು ಬರೆಯುತ್ತಿದ್ದರು.
👉 ಇವುಗಳನ್ನು ಸಂಸ್ಕೃತ, ಪ್ರಾಕೃತ ಮತ್ತು ತಮಿಳು ಭಾಷೆಗಳಲ್ಲಿ ಕಾಣಬಹುದಾಗಿದೆ.
ಶಾಸನಗಳು
👉 ಇವುಗಳನ್ನು ಕಲ್ಲು ಅಥವಾ ಗಟ್ಟಿಯಾದ ಲೋಹದ ಮೇಲೆ ಬರೆಯಲಾಗುತ್ತಿತ್ತು.
👉 ಇವುಗಳಲ್ಲಿ ರಾಜರುಗಳು ಯುದ್ಧಗಳಲ್ಲಿ ಮಾಡಿದ ವಿಜಯದ ದಾಖಲೆಗಳನ್ನು ಮತ್ತು ರಾಜರ ಆದೇಶಗಳನ್ನು ಕೆತ್ತಲಾಗುತ್ತಿತ್ತು.
ಪುರಾತತ್ವಶಾಸ್ತ್ರಜ್ಞ
👉 ಇವರು ಕಲ್ಲು ಇಟ್ಟಿಗೆಯಿಂದ ಮಾಡಿದ ಕಟ್ಟಡಗಳು, ವರ್ಣಚಿತ್ರಗಳು, ಶಿಲ್ಪ ಕಲೆಗಳು, ಉಪಕರಣವನ್ನು ಆಯುಧಗಳು, ಮಾಡಿಕೆಗಳು, ಹರಿವಾಣಗಳು, ಆಭರಣಗಳು ಮತ್ತು ನಾಣ್ಯಗಳು ಕುರಿತು ಅನ್ವೇಷಣೆ ಮತ್ತು ಉತ್ಖನನ ಮಾಡುತ್ತಾರೆ.
ದಿನಾಂಕ ಎಂದರೇನು?
👉 year 2000 or 2000 AD CAmma Domini).
👉 BC (Before Christ) Back word count.
👉 AD → CE (Common Era) - ಕ್ರಿಸ್ತ ಶಕ.
👉 BC → BCE (Before common Era)→ BP (Before Present) - ಕ್ರಿಸ್ತ ಪೂರ್ವ.
ಪ್ರಮುಖ ಮಾಹಿತಿ
👉ನರ್ಮದಾ ಕಣಿವೆ ➠ ಮೊದಲ ದೊಡ್ಡ ಸಾಮ್ರಾಜ್ಯ
👉 ಮಗಧ ➠ ಬೇಟೆ ಮತ್ತು ಸಂಗ್ರಹಣೆ
👉 ಗಾರೋ ಬೆಟ್ಟಗಳು ➠ ಸುಮಾರು 2500 ವರ್ಷಗಳ ಹಿಂದಿನ ನಗರಗಳು
👉 ಸಿಂಧೂ ಮತ್ತು ಅದರ ಉಪನದಿಗಳು ➠ ಆರಂಭಿಕ ಕೃಷಿ
👉 ಗಂಗಾ ಕಣಿವೆ ➠ ಮೊದಲ ನಗರಗಳು
