ಅಧ್ಯಾಯ -2. ಆರಂಭಿಕ ಜನರ ಜಾಡಿನಲ್ಲಿ - ON THE TRAIL OF THE EARLIEST PEOPLE

ಆರಂಭಿಕ ಜನರ ಜಾಡಿನಲ್ಲಿ

On the Trail of Earliest People

    ಮುಂಚಿನ ಜನರು ಏಕೆ ಚಲಿಸುತ್ತಿದ್ದರು?

    👉 ಆಹಾರವನ್ನು ಹುಡುಕಾಡಲು ಸ್ಥಳದಿಂದ ಸ್ಥಳಕ್ಕೆ ಹೋಗಬೇಕಾಗುತ್ತದೆ.
    👉 ಕೆಲವು ಪ್ರಾಣಿಗಳು ಆಹಾರಕ್ಕಾಗಿ ಸ್ಥಳದಿಂದ ಸ್ಥಳಕ್ಕೆ ಚಲಿಸುತ್ತವೆ, ಅದಕ್ಕಾಗಿಯೇ ಬೆಳೆಗಾರರು ಬೇಟೆಯಾಡಲು ಒಂದು ಸ್ಥಳದಿಂದ ಸ್ಥಳಕ್ಕೆ ಚಲಿಸುತ್ತಿದ್ದರು.
    👉 ಋತುಗಳ ಬದಲಾವಣೆಯಿಂದಾಗಿ ಕೆಲವು ಸಸ್ಯಗಳು ಮತ್ತು  ಮರಗಳು ಹಣ್ಣುಗಳನ್ನು  ನೀಡುವುದಿಲ್ಲ. ಆದ್ದರಿಂದ ಜನರು ವಿವಿಧ ಬಗೆಯ ಹಣ್ಣು ಹಂಪಲುಗಳನ್ನು ಹುಡುಕಾಡಲು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸುತ್ತಿದ್ದರು. 
    👉 ಶುಷ್ಕ ಕಾಲದಲ್ಲಿ  ನೀರನ್ನು ಹುಡುಕಾಡಲು ಜನರು ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದರು. 

    ಈ ಜನರ ಬಗ್ಗೆ ನಮಗೆ ಹೇಗೆ ಗೊತ್ತು? 

    On the Trail of Earliest People


    👉 ಅವರು ಉಪಯೋಗಿಸುತ್ತಿದ್ದ ಉಪಕರಣಗಳ ಆಧಾರದ ಮೇಲೆ ಅಂದರೆ, ಕಲ್ಲು, ಕಟ್ಟಿಗೆ, ಮೂಳೆಗಳಿಂದ ಮಾಡಿದ ಉಪಕರಣಗಳನ್ನು ಬಳಸುತ್ತಿದ್ದರು.

    ಕಲ್ಲಿನ ಆಯುಧಗಳು

    On the Trail of Earliest People


    👉 ಮಾಂಸ ಮತ್ತು ಮೂಳೆಗಳನ್ನು ಕತ್ತರಿಸಲು. 
    👉 ಮರದ ತೊಗಟೆಯನ್ನು ತೆಗೆಯಲು. 
    👉 ಪ್ರಾಣಿಗಳ ಚರ್ಮ ತೆಗೆಯಲು.
    👉 ಹಣ್ಣುಗಳನ್ನು ಮತ್ತು ಮರದ ರೆಂಬೆಗಳನ್ನು ಕತ್ತರಿಸಲು. 
    👉 ಈಟಿ ಮತ್ತು ಬಾಣಗಳನ್ನು ತಯಾರಿಸಲು. 

    ವಾಸಿಸಲು ಸ್ಥಳವನ್ನು ಆರಿಸುವುದು 

    On the Trail of Earliest People


    👉 ಆರಂಭಿಕ ಮಾನವರು ಆರಿಸಿದ ವಾಸಸ್ಥಾನಗಳು ನದಿಗಳು ಮತ್ತು ಸರೋವರಗಳಂತಹ ನೀರಿನ ಮೂಲಗಳ ಸಮೀಪದಲ್ಲಿವೆ. 
    👉 ಯಾವ ಸ್ಥಳದಲ್ಲಿ ಅವರಿಗೆ ಉತ್ತಮ ಗುಣಮಟ್ಟದ ಕಲ್ಲುಗಳು ಲಭ್ಯವಿದ್ದವು ಅಲ್ಲಿ ಆಯುಧಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಪ್ರಾರಂಭಿಸಿದರು. 

    ಕಾರ್ಖಾನೆ ಜೊತೆ ವಾಸಿಸುವ ತಾಣಗಳು 

    👉 ಕಲ್ಲುಗಳು ಕಂಡುಬಂದ ಸ್ಥಳಗಳಲ್ಲಿ ಆರಂಭಿಕ ಜನರು ಉಪಕರಣಗಳನ್ನು ತಯಾರಿಸಿದರು ಮತ್ತು ಕೆಲವೊಮ್ಮೆ ಜನರು ಹೆಚ್ಚು ಕಾಲ ಅಲ್ಲಿಯೇ ವಾಸಿಸಲು ತೊಡಗಿದರು.
     

    ತಾಣಗಳು 

    👉 ಕಲ್ಲಿನ ಉಪಕರಣಗಳು, ಮಡಿಕೆ, ಕಟ್ಟಡಗಳು ದೊರೆತಿರುವ ಸ್ಥಳಗಳಿಗೆ ತಾಣಗಳು ಎನ್ನುವರು.

    ಕಲ್ಲಿನ ಉಪಕರಣಗಳನ್ನು ತಯಾಸುವುದು

    👉 ಕಲ್ಲಿನ ಉಪಕರಣಗಳನ್ನು ತಯಾರಿಸಲು ಎರಡು ವಿಭಿನ್ನ ತಂತ್ರಗಳನ್ನು ಬಳಸುತ್ತಿದ್ದರು. 

    1. ಕಲ್ಲಿನ ಮೇಲೆ ಕಲ್ಲು (Stone on Stone)

    👉 ಒಂದು ಕಲ್ಲಿಗೆ ಅಗತ್ಯವಾದ ಆಕಾರವನ್ನು ನೀಡಲು ಇನ್ನೊಂದು ಕಲ್ಲನ್ನು ಬಳಸುವುದು.

    2. ಒತ್ತಡ ಪದರುಗಳು (Pressure Flaking)

    👉 ಒಂದು ಕಲ್ಲಿಗೆ ಅಗತ್ಯವಾದ ಆಕಾರವನ್ನು ನೀಡಲು ಕಬ್ಬಿಣದ ಆಯುಧವನ್ನು ಬಳಸುವುದು.

    On the Trail of Earliest People

     

    ಬೆಂಕಿಯ ಬಗ್ಗೆ ಕಂಡು ಹಿಡಿಯುವುದು 

    👉 ಆಂಧ್ರಪ್ರದೇಶದ "ಕರ್ನೂಲ್ ಗುಹೆ"ಗಳಲ್ಲಿ ಬೆಂಕಿಯ ಬಳಕೆಯನ್ನು ಸೂಚಿಸುವ ಪುರಾವೆಗಳು ಮತ್ತು ಕುರುಹುಗಳು ಕಂಡು ಬಂದಿವೆ. 
    👉 ಬೆಂಕಿಯನ್ನು ಬೆಳಕಿನ ಮೂಲವಾಗಿ, ಮಾಂಸವನ್ನು ಬೇಯಿಸಲು ಮತ್ತು ಪ್ರಾಣಿಗಳನ್ನು ಹೆದರಿಸಲು ಬಳಸಿರಬಹುದು. 

    ಬದಲಾಗುತ್ತಿರುವ ಪರಿಸರ 

    👉 ಸುಮಾರು 12000 ವರ್ಷಗಳ ಹಿಂದೆ ಪ್ರಪಂಚದ ಹವಾಮಾನದಲ್ಲಿ ದೊಡ್ಡ ಬದಲಾವಣೆಯಾಯಿತು 
    👉 ಈ ಬದಲಾವಣೆಯಿಂದ ಬೆಚ್ಚಗಿನ ಪರಿಸ್ಥಿತಿ ಉಂಟಾಯಿತು 
    👉 ಇದು ಅನೇಕ ಸ್ಥಳಗಳಲ್ಲಿ ಹುಲ್ಲುಗಾವಲುಗಳ ಅಭಿವೃದ್ದಿಗೆ ಕಾರಣವಾಯಿತು 
    👉 ಇದರಿಂದ ಜನರಲ್ಲಿ ಸಾಕು ಪ್ರಾಣಿಗಳ ಬಗ್ಗೆ ಆಸಕ್ತಿ ಹೆಚ್ಚಾಯಿತು 
    👉 ಪಶುಪಾಲನೆ ಸಾಕಾಣಿಕೆ ಮತ್ತು ಮೀನುಗಾರಿಕೆ ಸಾಮಾನ್ಯವಾಯಿತು. 
    👉 ಗೋಧಿ ಬಾರ್ಲಿ ಅಕ್ಕಿಯಂತಹ ಧಾನ್ಯಗಳು ನೈಸರ್ಗಿಕವಾಗಿ ಬೆಳೆದವು
    👉 ಜನರು ಸ್ವಂತ ಗಿಡಗಳನ್ನು ಬೆಳೆಸತೊಡಗಿದರು. 

    ಪ್ರಮುಖ ಕಾಲ ಘಟ್ಟಗಳು

    1. ಹಳೆ ಶಿಲಾಯುಗ

    👉 ಎರಡು ಮಿಲಿಯನ್‌ ವರ್ಷಗಳಿಂದ 12000 ವರ್ಷಗಳ ವರೆಗಿನ ಕಾಲಾವಧಿಯನ್ನು "ಹಳೆ ಶಿಲಾಯುಗ" (ಪೆಲಿಯೋಲಿಥಿಕ್)(Paleolithic Age) ಎನ್ನುವರು.
    👉 ಈ ಹಳೆಯ ಶಿಲಾಯುಗದ ಸುದೀರ್ಘ ಕಾಲಾವಧಿಯನ್ನು 3 ಭಾಗವಾಗಿ ವಿಂಗಡಿಸಲಾಗಿದೆ.
    1. ಆದಿ ಹಳೆ ಶಿಲಾಯುಗ
    2. ಮಧ್ಯ ಹಳೆ ಶಿಲಾಯುಗ
    3. ಅಂತ್ಯ ಹಳೆ ಶಿಲಾಯುಗ

    ಹಂಗ್ಸಿ (Hunsgi)

    👉 ಇದೊಂದು ಹಳೆಶಿಲಾಯುದ ಸ್ಥಳ.
    👉 ಇದು ಕಾರ್ಖಾನೆ ಜೊತೆಗೆ ವಾಸವಿರುವ ಸ್ಥಳವಾಗಿದೆ.
    👉 ಇಲ್ಲಿ ಬುಗ್ಗೆಗಳು ಕಂಡು ಬಂದಿವೆ.
    👉 ಇಲ್ಲಿ ಸುಣ್ಣದ ಕಲ್ಲಿನಿಂದ ಮಾಡಿದ ಉಪಕರಣಗಳು ದೊರೆತಿವೆ.

    2. ಮಧ್ಯಶಿಲಾಯುಗ

    👉 ಸುಮಾರು 12000 ವರ್ಷಗಳಿಂದ ಸುಮಾರು 10000 ವರ್ಷಗಳ ವರೆಗಿನ ಕಾಲಾವಧಿಯನ್ನು "ಮಧ್ಯಶಿಲಾಯುಗ" (ಮೆಸೋಲಿಥಿಕ್)(Mesolithic Age) ಎನ್ನುವರು.
    👉 ಈ ಕಾಲದಲ್ಲಿ ಕಂಡು ಬರುವ ಪರಿಕಲ್ಪನೆಗಳು ಸೂಕ್ಷ್ಮವಾಗಿದ್ದು ಹಾಗಾಗಿ ಇವುಗಳನ್ನು "ಸೂಕ್ಷ್ಮ ಶಿಲಾಪರಿಕರಗಳು" ಎನ್ನುವರು.
    👉 ಸೂಕ್ಷ್ಮ ಶಿಲಾಪರಿಕರಗಳನ್ನು ಕೈ ಹಿಡಿಕೆಗಳು, ಮೂಳೆ ಮತ್ತು ಕಟ್ಟಿಗೆಯಿಂದ ಅಲಂಕರಿಸುತ್ತಿದ್ದರು.
            ಉದಾ :- ಕೈಗೊಡಲಿ ಹಾಗೂ ಗರಗಸ
    👉 ಹಳೆ ಶಿಲಾಯುಗದ ಭಾರತದಲ್ಲಿ "ಆಸ್ಟ್ರೀಚ್ ಗಳು" ಕಂಡು ಬಂದಿವೆ.
    👉 ದೊಡ್ಡ ಮಟ್ಟದ ಆಸ್ಟ್ರೀಚ್‌ ಮೊಟ್ಟೆಗಳು ಮಹಾರಾಷ್ಟ್ರದ ಪಟ್ನೆಯಲ್ಲಿ ಕಂಡು ಬಂದಿವೆ.
    👉 ಕರ್ನಾಟಕದ ಹುಣಸಗಿಯೂ ಹಳೆ ಶಿಲಾಯುಗದ ಸ್ಥಳವಾಗಿದ್ದು, ಇಲ್ಲಿ ಸುಣ್ಣದ ಕಲ್ಲಿನಿಂದ ಮಾಡಿದ ಪರಿಕರಗಳು ಕಂಡು ಬಂದಿವೆ.

    3. ನವಶಿಲಾಯುಗ

    👉 ಸುಮಾರು 10000 ವರ್ಷಗಳ ನಂತರದ ಕಾಲಾವಧಿಯನ್ನು "ನವಶಿಲಾಯುಗ" (ನಿಯೋಲಿಥಿಕ್)(‌Neolithic Age) ಎನ್ನುವರು.
    👉 "ಬುರ್ಜ್ ಹೋಮ್"(ಕಾಶ್ಮೀರ) ನವ ಶಿಲಾಯುಗದ ಸ್ಥಳವಾಗಿದೆ.
    👉 "ಕ್ಯಾಟಲ್‌ ಹುಯುಕ್"‌ ಎಂಬ ನವಶಿಲಾಯುಗದ ಸ್ಥಳ ಟರ್ಕಿಯಲ್ಲಿ ಕಂಡುಬರುತ್ತದೆ.

    ರಾಕ್‌ ಚಿತ್ರಕಲೆ 

    On the Trail of Earliest People


    👉 ಮಧ್ಯ ಪ್ರದೇಶ ಮತ್ತು ಉತ್ತರಪ್ರದೇಶದ ದಕ್ಷಿಣಕ್ಕೆ ಕಾಡು ಪ್ರಾಣಿಗಳ ಚಿತ್ರಗಳನ್ನು ಬಿಡಿಸಿರುವ ರಾಕ್ ಚಿತ್ರಕಲೆಯನ್ನು ಕಾಣಬಹುದು.

    ಪ್ರಮುಖ ಕಾಲ ಘಟ್ಟಗಳು 

    1. ಹಳೆ ಶಿಲಾಯುಗ (ಪೆಲಿಯೋಲಿಥಿಕ್) ➠ 12,000 ವರ್ಷಗಳ ಹಿಂದೆ
    2. ಮಧ್ಯಶಿಲಾಯುಗ (ಮೆಸೋಲಿಥಿಕ್) ➠ ಸುಮಾರು 12000 ವರ್ಷಗಳಿಂದ ಸುಮಾರು 10000 ವರ್ಷಗಳ ವರೆಗೆ
    3. ನವಶಿಲಾಯುಗ (ನಿಯೋಲಿಥಿಕ್) ➠ ಆರಂಭ 10,000 ವರ್ಷಗಳ ಹಿಂದೆ
    Post a Comment (0)
    Previous Post Next Post