ಭಾರತ ರತ್ನ ಪ್ರಶಸ್ತಿ - Bharata ratna Award

ಭಾರತ ರತ್ನ ಪ್ರಶಸ್ತಿ


    ಭಾರತ ರತ್ನ ಪ್ರಶಸ್ತಿಯ ಕ್ಷೇತ್ರಗಳು ಮತ್ತು ಸಾಂವಿಧಾನಿಕ ಮಹತ್ವ

    • ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ - ಭಾರತ ರತ್ನ ಪ್ರಶಸ್ತಿ.
    • ಕಲೆ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಸಾಹಿತ್ಯ, ರಾಜಕೀಯ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ನೀಡುವ ದೇಶದ ಅತ್ಯುನ್ನತ ಪ್ರಶಸ್ತಿ ಇದು.
    • ಸಂವಿಧಾನದ 18 ನೇ ವಿಧಿಯು "ಬಿರುದುಗಳ ರದ್ದತಿಯ" ಬಗ್ಗೆ ತಿಳಿಸುತ್ತದೆ.
    • ಭಾರತದ ಸಂವಿಧಾನದ 18 (1) ನೇ ವಿಧಿಯಲ್ಲಿ ಉಲ್ಲೇಖಿಸಿದಂತೆ, ಸ್ವೀಕರಿಸುವವರು ಭಾರತ ರತ್ನವನ್ನು ತಮ್ಮ ಹೆಸರಿನ ಪೂರ್ವಪ್ರತ್ಯಯ ಅಥವಾ ಪ್ರತ್ಯಯವಾಗಿ ಬಳಸುವಂತಿಲ್ಲ. ಆದಾಗ್ಯೂ, ಸ್ವೀಕರಿಸುವವರು ತಮ್ಮ ರೆಸ್ಯೂಮ್,ಲೆಟರ್‌ಹೆಡ್, ವಿಸಿಟಿಂಗ್ ಕಾರ್ಡ್ ಇತ್ಯಾದಿಗಳಲ್ಲಿ "ರಾಷ್ಟ್ರಪತಿಗಳಿಂದ ಭಾರತ ರತ್ನ ಪ್ರಶಸ್ತಿಪುರಸ್ಕೃತರು"ಅಥವಾ "ಭಾರತ ರತ್ನ ಪ್ರಶಸ್ತಿ ಪುರಸ್ಕೃತರು" ಎಂಬ ಅಭಿವ್ಯಕ್ತಿಯನ್ನು ಬಳಸಬಹುದು.

    ಭಾರತ ರತ್ನ ಪ್ರಶಸ್ತಿಯ ಹಿನ್ನಲೆ

    • ಸ್ಥಾಪನೆ : 1954 ಜನೆವರಿ 2
    • ನೀಡುವವರು : ಭಾರತ ಸರ್ಕಾರ
    • ಸಂವಿಧಾನದ 18 ನೇ ವಿಧಿಯು "ಬಿರುದುಗಳ ರದ್ದತಿಯ" ಬಗ್ಗೆ ತಿಳಿಸುತ್ತದೆ.
    • ನೀಡುವ ವ್ಯಕ್ತಿ : ರಾಷ್ಟ್ರಪತಿ
    • ನೀಡುವ ಸ್ಥಳ : ರಾಷ್ಟ್ರಪತಿ ಭವನ (ದೆಹಲಿ)
    • ನೀಡುವ ದಿನಾಂಕ : ಜನೆವರಿ 26
    • ಮೊತ್ತ : ಮೊತ್ತ ಇರುವುದಿಲ್ಲ,ಒಂದು ಪದಕ ನೀಡಲಾಗುತ್ತದೆ.
    • ಈ ಪ್ರಶಸ್ತಿಯನ್ನು ಭಾರತದ ಮಾಜಿ ರಾಷ್ಟ್ರಪತಿ "ರಾಜೇಂದ್ರ ಪ್ರಸಾದ್" ಅವರು 2 ನೇ ಜನವರಿ 1954 ರಂದು ಪ್ರಾರಂಭಿಸಿದರು.
    • ಇದುವರೆಗೂ ಪ್ರಶಸ್ತಿ ಪಡೆದ ಒಟ್ಟು ಜನ : 48
    • ಮೊದಲ ನೊಬೆಲ್ ಪ್ರಶಸ್ತಿ ಪಡೆದ ಮತ್ತು ಭಾರತ ರತ್ನ ಪ್ರಶಸ್ತಿ ಪಡೆದ ಭಾರತೀಯ – ರವೀಂದ್ರನಾಥ ಠಾಗೋರ್
    • ಈ ಪ್ರಶಸ್ತಿಯನ್ನು 1 ವರ್ಷದಲ್ಲಿ 3 ಜನರಿಗೆ ಮಾತ್ರ ನೀಡಲಾಗುತ್ತದೆ.
    • ಮರಣೋತ್ತರವಾಗಿ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ- ಲಾಲ್ ಬಹುದ್ದೂರ್ ಶಾಸ್ತ್ರಿ (1966 ವರ್ಷ).
    • ಮರಣೋತ್ತರವಾಗಿ ಈ ಪ್ರಶಸ್ತಿ ಪಡೆದ ಮೊದಲ ಮಹಿಳೆ - ಅರುಣಾ ಅಸಫ್ ಅಲಿ (1997) (ಮೊದಲ ಸ್ವಾತಂತ್ರ ಹೋರಾಟಗಾರ್ತಿ)
    • ಭಾರತ ರತ್ನ ಪ್ರಶಸ್ತಿ ರದ್ದುಗೊಳಿಸಿದ ಮೊದಲ ಪ್ರಧಾನಿ - ಮೊರಾರ್ಜಿ ದೇಸಾಯಿ-1977
    • ಪುನಃ ಪ್ರಾರಂಭಿಸಿದವರು – ಇಂದಿರಾ ಗಾಂಧಿ 1980
    • ಭಾರತ ರತ್ನ ಪ್ರಶಸ್ತಿ ನಿರಾಕರಿಸಿದ ವ್ಯಕ್ತಿ - ಮೌಲಾನ ಅಬ್ದುಲ್‌ ಕಲಾಂ ಅಜಾದ್
    • ಭಾರತ ರತ್ನ ಮತ್ತು ನೊಬೆಲ್ ಪ್ರಶಸ್ತಿ ಎರಡನ್ನೂ ಪಡೆದವರು: ಸರ್ ಸಿ. ವಿ. ರಾಮನ್, ಮದರ್ ಥೆರೆಸಾ, ನೆಲ್ಸನ್ ಮಂಡೇಲಾ, ಅಮರ್ಥ್ಯ್ ಸೇನ್.

    ಭಾರತ ರತ್ನ ಪ್ರಶಸ್ತಿ ಪದಕದ ವಿವರಣೆ

    Bharata ratna prashasti

    • ಭಾರತ ರತ್ನ ಪ್ರಶಸ್ತಿ ಪದಕವು ಚಿನ್ನ, ಪ್ಲಾಟಿನಂ, ಹಿತ್ತಾಳೆಯನ್ನು ಒಳಗೊಂಡಿದೆ.
    • ಅರಳಿ ಮರದ ಎಲೆಯ ಮಾದರಿಯಲ್ಲಿ ಮುಂಬದಿಯಲ್ಲಿ ಸೂರ್ಯನ ಚಿತ್ರವಿದ್ದು ಇದರ ಕೆಳಗಡೆ ಭಾರತ ರತ್ನ ಎಂದು ಬೆಳ್ಳಿಯಲ್ಲಿ ಕೆತ್ತಲಾಗಿದೆ.
    • ಇನ್ನೊಂದು ಬದಿಗೆ ಭಾರತದ ಲಾಂಛನವಾಗಿರುವ ಸಿಂಹ ಲಾಂಛನವಿದ್ದು, ಅದರ ಕೆಳಗೆ "ಸತ್ಯಮೇವ ಜಯತೆ" (ಸತ್ಯ ಜಯಿಸುತ್ತದೆ) ಎಂದು ದೇವನಾಗರಿ ಲಿಪಿಯಲ್ಲಿ ಬೆಳ್ಳಿಯಲ್ಲಿ ಕೆತ್ತಲಾಗಿದೆ.
    • ಸತ್ಯ ಮೇವ ಜಯತೆ ಸಾಲನ್ನು "ಮಂಡೋಕ ಉಪನಿಷತ್‌"ನಿಂದ ಆರಿಸಲಾಗಿದೆ.
    • ಪದಕದ ಉದ್ದ: 5.8 ಸೆಂ. ಮೀ
    • ಅಗಲ: 4.7 ಸೆಂ. ಮೀ
    • ದಪ್ಪ: 3.1 ಮಿ. ಮೀ
    • ಸೂರ್ಯನ ಡಯಾಮೀಟರ್: 16 ಮಿ. ಮೀ
    • ಕಂದು ಕಂಚಿನ ಪದಕ ಇದಾಗಿರುತ್ತದೆ.
    • ಪದಕಕ್ಕೆ 2-ಇಂಚಿನ ಅಗಲದ ಬಿಳಿ ರಿಬ್ಬನ್ ಅನ್ನು ಜೋಡಿಸಲಾಗಿದೆ ಆದ್ದರಿಂದ ಅದನ್ನು ಕುತ್ತಿಗೆಗೆ ಧರಿಸಬಹುದು.
    • ಭಾರತ ರತ್ನ ಪದಕ ತಯಾರಿಸುವ ಸ್ಥಳ – ಕೋಲ್ಕತ್ತಾದ ಅಲಿಪೋರ್ ಮಿಂಟ್

    ಭಾರತ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಸಿಗುವ ಸೌಲಭ್ಯಗಳು

    • ಯಾವುದೇ ಹಣ ಸಿಗುವುದಿಲ್ಲ.
    • ಭಾರತ ಸರ್ಕಾರದ ಅಧಿಕೃತ ಪ್ರೊಟೊಕಾಲ್‌ನಲ್ಲಿ 7 ನೇ ಸ್ಥಾನ ಹೊಂದಿರುತ್ತಾರೆ.
    • ಭಾರತದೊಳಗೆ ಪ್ರಯಾಣಿಸುವಾಗ ಅವರನ್ನು ರಾಜ್ಯ ಅತಿಥಿಗಳಾಗಿ ಪರಿಗಣಿಸಲಾಗುತ್ತದೆ.
    • ರಾಜತಾಂತ್ರಿಕ ಪಾಸ್‌ಪೋರ್ಟ್ಗೆ (ಮೆರೂನ್ ಬಣ್ಣ) ಅರ್ಹರಾಗಿರುತ್ತಾರೆ. ಅವರು ಭಾರತವನ್ನು ಪ್ರತಿನಿಧಿಸುವ ಗಣ್ಯರು ಎಂಬುದನ್ನು ಇದು ಸೂಚಿಸುತ್ತದೆ. ಇದು ವಿಮಾನ ನಿಲ್ದಾಣಗಳಲ್ಲಿ ಪ್ರತ್ಯೇಕ ವಲಸೆ ಕೌಂಟರ್‌ಗಳು ಮತ್ತು ಲಾಂಜ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.
    • ಏರ್ ಇಂಡಿಯಾದಲ್ಲಿ ಜೀವಮಾನದ ಉಚಿತ ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣ ಮತ್ತು ಉಚಿತ ಜೀವಮಾನದ ಪ್ರಥಮ ದರ್ಜೆ ರೈಲು ಪ್ರಯಾಣಕ್ಕೆ ಅರ್ಹರಾಗಿರುತ್ತಾರೆ.
    • ಭಾರತದ ಪ್ರಧಾನ ಮಂತ್ರಿಯ ವೇತನದ 50% ಕ್ಕೆ ಸಮಾನವಾದ ಪಿಂಚಣಿಗೆ ಅರ್ಹರಾಗಿರುತ್ತಾರೆ.
    • ಸಂಸತ್ತಿನ ಸಭೆಗಳು ಮತ್ತು ಅಧಿವೇಶನಗಳಲ್ಲಿ ಭಾಗವಹಿಸಬಹುದು.
    • ಅಗತ್ಯವಿದ್ದರೆ ಅವರು Z ವರ್ಗದ ರಕ್ಷಣೆಗೆ ಅರ್ಹರಾಗಿರುತ್ತಾರೆ. Z ವರ್ಗದ ರಕ್ಷಣೆ ಎಂದರೆ NSG ಕಮಾಂಡೋಗಳು+ಪೊಲೀಸ್ ಸಿಬ್ಬಂದಿಯಿಂದ ರಕ್ಷಣೆ.
    • ಗಣರಾಜ್ಯ ಮತ್ತು ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಅವರನ್ನು ವಿಶೇಷ ಅತಿಥಿಯಾಗಿ ಪರಿಗಣಿಸಲಾಗುತ್ತದೆ.
    • ಅವರ ಸ್ಥಾನಮಾನವು ಭಾರತದ ಒಳಗೆ ಮತ್ತು ಹೊರಗೆ ವಿವಿಐಪಿಗೆ ಸಮಾನವಾಗಿದೆ.
    • ಅವರಿಗೆ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
    • ಭಾರತದ ಯಾವುದೇ ನಾಗರಿಕ ವಿಮಾನ ನಿಲ್ದಾಣದಲ್ಲಿ ಅವರನ್ನು ಪರೀಕ್ಷಿಸಲಾಗುವುದಿಲ್ಲ.
    • ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಪೂರ್ವ ಭದ್ರತಾ ತಪಾಸಣೆಯಿಂದ ವಿನಾಯಿತಿ ಪಡೆದಿರುವ 32 ವರ್ಗದ ಜನರಲ್ಲಿ ಅವರು ಸೇರಿದ್ದಾರೆ.

    ಭಾರತ ರತ್ನ ಪ್ರಶಸ್ತಿ ಪಡೆದ ಮೊದಲಿಗರು

    • ರಾಜ ಗೋಪಾಲಚಾರಿ ನೀಡಿದ ವರ್ಷ 1954 (ಭಾರತೀಯ ಮೊದಲ ಮತ್ತು ಕೊನೆಯ ಗೌವರ್ನರ್ ಜನರಲ್)
    • ತಮಿಳು ನಾಡಿನ ಸರ್ವಪಲ್ಲಿ ರಾಧಾಕೃಷ್ಣನ್ 1954 (ಭಾರತೀಯ ಮೊದಲ ಉಪರಾಷ್ಟ್ರಪತಿ ಮತ್ತು 2ನೇ ರಾಷ್ಟ್ರಪತಿ, ಶಿಕ್ಷಣ ತಜ್ಞ)
    • ಸಿ. ವಿ. ರಾಮನ್ (ಭೌತ ವಿಜ್ಞಾನಿ) 1954 
    • ಈ ಮೂರು ಜನರು ತಮಿಳುನಾಡಿನವರು

    ಎರಡನೇ ಬಾರಿಗೆ 1955 ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರು

    • ಸರ್. ಎಮ್. ವಿಶ್ವೇಶ್ವರಯ್ಯ (ಇಂಜಿನಿಯರ್)
    • ಭಗವಾನ್ ದಾಸ್ (ಸಮಾಜಸೇವೆ)
    • ಜವಾಹರ್ ಲಾಲ್ ನೆಹರೂ (ರಾಜಕೀಯ-ಮೊದಲ ಪ್ರಧಾನಿ)

    ಭಾರತ ರತ್ನ ಪ್ರಶಸ್ತಿ ಪಡೆದ ಮಹಿಳೆಯರು 

    • 1971 - ಇಂಧಿರಾ ಗಾಂಧಿ (ಉತ್ತರ ಪ್ರದೇಶ) - ರಾಜಕೀಯ
    • 1980 - ಮಧರ್ ಥೆರಸಾ (ಪಶ್ಚಿಮ ಬಂಗಾಳ) - ಸಮಾಜ ಸೇವೆ.
    • 1997 - ಅರುಣಾ ಅಸಫ್ ಅಲಿ (ಪಂಜಾಬ್)
    • 1998 - ಎಂ. ಎಸ್. ಸುಬ್ಬಲಕ್ಷ್ಮೀ (ತಮಿಳುನಾಡು) - ಭಾರತ ರತ್ನ ಪಡೆದ ಮೊದಲ ಸಂಗೀತಗಾರ್ತಿ
    • 2001 - ಲತಾ ಮಂಗೇಶ್ಕರ್ (ಮಹಾರಾಷ್ಟ್ರ) - ಸಂಗೀತ ಹಿನ್ನಲೆ ಗಾಯಕಿ

    ಭಾರತ ರತ್ನ ಪ್ರಶಸ್ತಿ ಪಡೆದ ರಾಷ್ಟ್ರಪತಿಗಳು 

    • 1954 - ಸರ್ವ ಪಲ್ಲಿ ರಾಧಾಕೃಷ್ಣ 
    • 1962 - ಡಾ. ಬಾಬು ರಾಜೇಂದ್ರ ಪ್ರಸಾದ್ 
    • 1963 - ಜಾಕೀರ್ ಹುಸೇನ್ (ಭಾರತದ ಮೊದಲ ಮುಸ್ಲಿಂ ರಾಷ್ಟ್ರಪತಿ 1963 ರಲ್ಲಿ ಮತ್ತು ಅಧಿಕಾರ ಅವಧಿಯಲ್ಲಿ ಮರಣ ಹೊಂದಿದರು)
    • 1975 - ವಿ. ವಿ. ಗಿರಿ ಮೊದಲ ಹಂಗಾಮಿ ರಾಷ್ಟ್ರಪತಿ
    • 1997 - ಎ.ಪಿ.ಜೆ.ಅಬ್ದುಲ್ ಕಲಾಂ
    • 2019 - ಪ್ರಣಬ್ ಮುಖರ್ಜಿ 

    ಭಾರತ ರತ್ನ ಪ್ರಶಸ್ತಿ ಪಡೆದ ಪ್ರಧಾನ ಮಂತ್ರಿಗಳು 

    • 1955 - ಜವಾಹರ್ ಲಾಲ್ ನೆಹರೂ
    • 1966 - ಲಾಲ್ ಬಹದ್ದೂರ್ ಶಾಸ್ತ್ರಿ
    • 1971 - ಇಂದಿರಾಗಾಂಧಿ
    • 1991 – ಮೂರಾರ್ಜಿ ದೇಸಾಯಿ
    • 2015 - ಅಟಲ್ ಬಿಹಾರಿ ವಾಜಪೇಯಿ
    • 2024 - ಚೌಧರಿ ಚರಣ್ ಸಿಂಗ್ 

    ಭಾರತ ರತ್ನ ಪ್ರಶಸ್ತಿ ಪಡೆದ ಇಬ್ಬರು ವಿದೇಶಿಗರು

    • 1987 - ಖಾನ್ ಅಬ್ದುಲ್ ಘಫರ್‌ಖಾನ್ - ಪಾಕಿಸ್ತಾನ
    • 1990 - ನೆಲ್ಸನ್ ಮಂಡೇಲಾ (ಆಫ್ರಿಕಾದ ಗಾಂಧಿ)

    ರಾಷ್ಟ್ರಪತಿ ಹುದ್ದೆಗೆ ಏರುವ ಮುಂಚೆ ಭಾರತ ರತ್ನ ಪ್ರಶಸ್ತಿ ಪಡೆದ ಇಬ್ಬರು ವ್ಯಕ್ತಿಗಳು

    • ಎ. ಪಿ. ಜೆ. ಅಬ್ದುಲ್ ಕಲಾಂ
    • ಡಾ. ಎಸ್. ರಾಧಾಕೃಷ್ಣ

    ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಹೆಚ್ಚು ರಾಜ್ಯಗಳು ಮತ್ತು ವ್ಯಕ್ತಿಗಳು

    • ಉತ್ತರ ಪ್ರದೇಶ ರಾಜ್ಯದ 10 ಜನರು.
    • ತಮಿಳುನಾಡು ರಾಜ್ಯದ 8 ಜನರು.
    • ಕರ್ನಾಟಕ ರಾಜ್ಯದ 3 ಜನರು.
    • 1955 - ಸರ್ ಎಮ್ ವಿಶ್ವೇಶ್ವರಯ್ಯ (ಮೊದಲ ಕನ್ನಡಿಗ)
    • 2008 - ಭೀಮಸೇನ್ ಜೋಶಿ 
    • 2014 - ಸಿ. ಎನ್. ಆರ್. ರಾವ್

    ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪಡೆದವರು 

    • ಲಾಲ ಬಹುದ್ದೂರ್ ಶಾಸ್ತ್ರೀ (1966)
    • ಅರುಣಾ ಅಸಫ್ ಅಲಿ
    • ಕೆ. ಕಾಮರಾಜ
    • ಎಮ್. ಜಿ. ರಾಮಚಂದ್ರನ್ (ಸಿನಿಮಾ ರಂಗದಿಂದ ಮುಖ್ಯಮಂತ್ರಿಯಾದಂತಹ ಭಾರತದ ಮೊದಲ ವ್ಯಕ್ತಿ)
    • ವಿನೋಭಾ ಭಾವೆ
    • ಗೋಪಿನಾಥ ಬಾರ್ಡೋಲಿ
    • ಸರ್ದಾರ ವಲ್ಲಭಬಾಯಿ ಪಟೇಲ
    • ಮೌಲಾನಾ ಅಬ್ದುಲ್ ಕಲಾಂ ಆಜಾದ್
    • ರಾಜೀವ್ ಗಾಂಧಿ
    • ಮದನ್ ಮೋಹನ್ ಮಾಳ್ವಿಯಾ
    • ಡಾ. ಬಿ. ಆರ್. ಅಂಬೇಡ್ಕರ್
    • ಜಯಪ್ರಕಾಶ ನಾರಾಯಣ
    • ಭೂಪೇನ್ ಹಜಾರಿಕಾ (2019)
    • ನಾನಾಜಿ ದೇಶಮುಖ್ (2019)
    • ಕರ್ಪೂರಿ ಠಾಕೂರ್ (2024)

    ಇತ್ತೀಚಿಗೆ ಭಾರತ ರತ್ನ ಪ್ರಶಸ್ತಿ ಪಡೆದವರು 

    • 2024 - ಲಾಲ್ ಕೃಷ್ಣ ಅಡ್ವಾಣಿ (ರಾಜಕಾರಣಿ ಮತ್ತು ಮಾಜಿ ಉಪ ಪ್ರಧಾನ ಮಂತ್ರಿ) - 
    • 2024 - ಕರ್ಪೂರಿ ಠಾಕೂರ್ (ಮರಣೋತ್ತರ) (ರಾಜಕಾರಣಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ)
    • 2024 - ಎಂ.ಎಸ್.ಸ್ವಾಮಿನಾಥನ್ (ಕೃಷಿ ಶಾಸ್ತ್ರಜ್ಞ, ಸಸ್ಯತಳಿ ಶಾಸ್ತ್ರಜ್ಞ ಮತ್ತು ಭಾರತದ ಹಸಿರು ಕ್ರಾಂತಿಯ ಹರಿಕಾರ)

    ಭಾರತ ರತ್ನ ಪ್ರಶಸ್ತಿ ಬಗ್ಗೆ ನೆನಪಿನಲ್ಲಿಡಬೇಕಾದ ಸಂಗತಿಗಳು 

    • ಭಾರತ ರತ್ನ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವ್ಯಕ್ತಿ: ಸಚಿನ್ ತೆಂಡೋಲ್ಕರ್ 2014 (40 ವರ್ಷ) (ಕ್ರೀಡೆಯಲ್ಲಿ ಈ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ)
    • ಭಾರತ ರತ್ನ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ವ್ಯಕ್ತಿ: ದೊಂಡಚಾ ಕೇಶವ ಕರ್ವೆ (100ವರ್ಷ)
    • ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಮುಖ್ಯಮಂತ್ರಿ: ಗೋವಿಂದ ವಲ್ಲಭ ಪಂತ (ಉತ್ತರ ಪ್ರದೇಶ)
    • ಮನೋರಂಜನೆಗೆ ಈ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ: ಸತ್ಯಜೀತ ರೇ (1992)
    • ಭಾರತ ರತ್ನ ಪ್ರಶಸ್ತಿ ಪಡೆದ ಕೈಗಾರಿಕಾ ಉದ್ಯಮಿ: ಜೆ. ಆರ್. ಡಿ. ಟಾಟಾ (1992)
    • ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡುವವರು: ಪ್ರಧಾನಮಂತ್ರಿ
    • ಭಾರತ ರತ್ನ ಪ್ರಶಸ್ತಿ ಪಡೆದ ಸಿತಾರವಾದಕ: ಪಂಡಿತ್ ರವಿಶಂಕರ (1999- ಉತ್ತರ ಪ್ರದೇಶ)
    • ಇತಿಹಾಸದಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಮರಳಿ ಪಡೆದ ಏಕೈಕ ವ್ಯಕ್ತಿ: ಸುಭಾಷ್ ಚಂದ್ರಬೋಸ್ (1992)
    • ಭಾರತ ರತ್ನ ಪ್ರಶಸ್ತಿ ಸ್ಥಾಪನೆಯಾಗಲು ಕಾರಣರಾದ ರಾಷ್ಟ್ರಪತಿ: ಡಾ. ಬಾಬು ರಾಜೇಂದ್ರ ಪ್ರಸಾದ.
    • ಭಾರತ ರತ್ನ ಪ್ರಶಸ್ತಿ ಮತ್ತು ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ: ನಿಶಾನ್-ಏ-ಪಾಕಿಸ್ತಾನ ಪಡೆದ ಏಕೈಕ ಭಾರತೀಯ ಮುರಾರ್ಜಿ ದೇಸಾಯಿ.
    • ಭಾರತ ರತ್ನ ಪ್ರಶಸ್ತಿಯನ್ನು 2011 ನವೆಂಬರ್ 16 ರಿಂದ ಕ್ರೀಡಾ ಕ್ಷೇತ್ರಕ್ಕೆ ಕೊಡಲು ಆರಂಭಿಸಿತು.

    ಭಾರತ ರತ್ನ ಪ್ರಶಸ್ತಿಯನ್ನು ಮಹಾತ್ಮಾ ಗಾಂಧಿಜೀ ಯವರಿಗೆ ನೀಡದೆ ಇರಲು ಕಾರಣಗಳು

    • ಈ ಪ್ರಶಸ್ತಿ ಸ್ಥಾಪನೆಯಾಗುವ ಸಂದರ್ಭದಲ್ಲಿ ಗಾಂಧೀಜಿಯವರು ಬದುಕಿರಲಿಲ್ಲ.
    • ಈ ಪ್ರಶಸ್ತಿ ನೀಡಿದರೆ ರಾಷ್ಟ್ರಪಿತ ಪದಕ್ಕೆ ಅವಮಾನವಾಗುತ್ತದೆ.

    ಭಾರತ ಪ್ರಶಸ್ತಿ ವಿಜೇತರುಗಳು (1954 - 2024)

    ವರ್ಷ

    ಭಾವ ಚಿತ್ರ

    ಪ್ರಶಸ್ತಿ ವಿಜೇತರಗಳು

    ರಾಜ್ಯ / ರಾಷ್ಟ್ರ

    1954

    ಸಿ. ರಾಜಗೋಪಾಲಾಚಾರಿ

    ಸಿ. ರಾಜಗೋಪಾಲಾಚಾರಿ

    ತಮಿಳುನಾಡು

    ಸರ್ವೆಪಲ್ಲಿ ರಾಧಾಕೃಷ್ಣನ್

    ಸರ್ವೆಪಲ್ಲಿ ರಾಧಾಕೃಷ್ಣನ್

    ಆಂಧ್ರಪ್ರದೇಶ

    ಚಂದ್ರಶೇಖರ ವೆಂಕಟರಾಮನ್

    ಚಂದ್ರಶೇಖರ ವೆಂಕಟರಾಮನ್

    ತಮಿಳುನಾಡು

    1955

    ಭಗವಾನ್ ದಾಸ್

    ಭಗವಾನ್ ದಾಸ್

    ಉತ್ತರ ಪ್ರದೇಶ

    ಮೋಕ್ಷಗುಂಡಂ ವಿಶ್ವೇಶ್ವರಯ್ಯ

    ಮೋಕ್ಷಗುಂಡಂ ವಿಶ್ವೇಶ್ವರಯ್ಯ

    ಕರ್ನಾಟಕ

    ಜವಾಹರಲಾಲ್ ನೆಹರು

    ಜವಾಹರಲಾಲ್ ನೆಹರು

    ಉತ್ತರ ಪ್ರದೇಶ

    1957

    ಜಿ. ಬಿ. ಪಂತ್

    ಜಿ. ಬಿ. ಪಂತ್

    ಉತ್ತರ ಪ್ರದೇಶ

    1958

    ಧೊಂಡೊ ಕೇಶವ ಕರ್ವೆ

    ಧೊಂಡೊ ಕೇಶವ ಕರ್ವೆ

    ಮಹಾರಾಷ್ಟ್ರ

    1961

    ಬಿಧಾನ್‌ ಚಂದ್ರ ರಾಯ್‌

    ಬಿಧಾನ್‌ ಚಂದ್ರ ರಾಯ್‌

    ಪಶ್ಚಿಮ ಬಂಗಾಳ

    ಪುರುಷೋತ್ತಮ್ ದಾಸ್ ಟಂಡನ್

    ಪುರುಷೋತ್ತಮ್ ದಾಸ್ ಟಂಡನ್

    ಉತ್ತರ ಪ್ರದೇಶ

    1962

    ರಾಜೇಂದ್ರ ಪ್ರಸಾದ್

    ರಾಜೇಂದ್ರ ಪ್ರಸಾದ್

    ಬಿಹಾರ

    1963

    ಜಾಕಿರ್ ಹುಸೇನ್

    ಜಾಕಿರ್ ಹುಸೇನ್

    ಉತ್ತರ ಪ್ರದೇಶ

    ಪಿ. ವಿ. ಕಾಣೆ

    ಪಿ. ವಿ. ಕಾಣೆ

    ಮಹಾರಾಷ್ಟ್ರ

    1966

    ಲಾಲ್ ಬಹದ್ದೂರ್ ಶಾಸ್ತ್ರಿ

    ಲಾಲ್ ಬಹದ್ದೂರ್ ಶಾಸ್ತ್ರಿ

    ಉತ್ತರ ಪ್ರದೇಶ

    1971

    ಇಂದಿರಾ ಗಾಂಧಿ

    ಇಂದಿರಾ ಗಾಂಧಿ

    ಉತ್ತರ ಪ್ರದೇಶ

    1975

    ವಿ. ವಿ. ಗಿರಿ

    ವಿ. ವಿ. ಗಿರಿ

    ಒಡಿಶಾ

    1976

    ಕೆ. ಕಾಮರಾಜ್

    ಕೆ. ಕಾಮರಾಜ್

    ತಮಿಳುನಾಡು

    1980

    ಮದರ್ ತೆರೇಸಾ

    ಮದರ್ ತೆರೇಸಾ 

    ಪಶ್ಚಿಮ ಬಂಗಾಳ


    1983

    ವಿನೋಬಾ ಭಾವೆ

    ವಿನೋಬಾ ಭಾವೆ

    ಮಹಾರಾಷ್ಟ್ರ

    1987

    ಖಾನ್ ಅಬ್ದುಲ್ ಗಫಾರ್ ಖಾನ್

    ಖಾನ್ ಅಬ್ದುಲ್ ಗಫಾರ್ ಖಾನ್ 

    ಪಾಕಿಸ್ತಾನ



    1988

    ಎಂ. ಜಿ. ರಾಮಚಂದ್ರನ್

    ಎಂ. ಜಿ. ರಾಮಚಂದ್ರನ್

    ತಮಿಳುನಾಡು

    1990

    ಬಿ. ಆರ್. ಅಂಬೇಡ್ಕರ್

    ಬಿ. ಆರ್. ಅಂಬೇಡ್ಕರ್

    ಮಹಾರಾಷ್ಟ್ರ

    ನೆಲ್ಸನ್ ಮಂಡೇಲಾ

    ನೆಲ್ಸನ್ ಮಂಡೇಲಾ 

    ದಕ್ಷಿಣ ಆಫ್ರಿಕಾ


    1991

    ರಾಜೀವ್ ಗಾಂಧಿ

    ರಾಜೀವ್ ಗಾಂಧಿ

    ಉತ್ತರ ಪ್ರದೇಶ

    ವಲ್ಲಭ್‌ಭಾಯಿ ಪಟೇಲ್

    ವಲ್ಲಭ್‌ಭಾಯಿ ಪಟೇಲ್

    ಗುಜರಾತ್

    ಮೊರಾರ್ಜಿ ದೇಸಾಯಿ

    ಮೊರಾರ್ಜಿ ದೇಸಾಯಿ

    ಗುಜರಾತ್

    1992

    ಮೌಲಾನಾ ಅಬುಲ್ ಕಲಾಂ‌ ಅಜಾದ್

    ಮೌಲಾನಾ ಅಬುಲ್ ಕಲಾಂ‌ ಅಜಾದ್ 

    ಪಶ್ಚಿಮ

    ಜೆ. ಆರ್. ಡಿ. ಟಾಟಾ

    ಜೆ. ಆರ್. ಡಿ. ಟಾಟಾ

    ಮಹಾರಾಷ್ಟ್ರ

    ಸತ್ಯಜಿತ್ ರೇ

    ಸತ್ಯಜಿತ್ ರೇ

    ಪಶ್ಚಿಮ ಬಂಗಾಳ

    1997

    ಗುಲ್ಜಾರಿಲಾಲ್ ನಂದಾ

    ಗುಲ್ಜಾರಿಲಾಲ್ ನಂದಾ

    ಪಂಜಾಬ್

    ಅರುಣಾ ಅಸಫ್ ಅಲಿ

    ಅರುಣಾ ಅಸಫ್ ಅಲಿ

    ಪಶ್ಚಿಮ ಬಂಗಾಳ

    ಎ. ಪಿ. ಜೆ. ಅಬ್ದುಲ್ ಕಲಾಂ

    ಎ. ಪಿ. ಜೆ. ಅಬ್ದುಲ್ ಕಲಾಂ

    ತಮಿಳುನಾಡು

    1998

    ಎಂ. ಎಸ್. ಸುಬ್ಬುಲಕ್ಷ್ಮೀ

    ಎಂ. ಎಸ್. ಸುಬ್ಬುಲಕ್ಷ್ಮೀ

    ತಮಿಳುನಾಡು

    ಸಿ. ಸುಬ್ರಹ್ಮಣ್ಯಂ

    ಸಿ. ಸುಬ್ರಹ್ಮಣ್ಯಂ

    ತಮಿಳುನಾಡು

    1999

    ಜಯಪ್ರಕಾಶ್ ನಾರಾಯಣ್

    ಜಯಪ್ರಕಾಶ್ ನಾರಾಯಣ್

    ಬಿಹಾರ

    ಅಮರ್ತ್ಯ ಸೇನ್

    ಅಮರ್ತ್ಯ ಸೇನ್

    ಪಶ್ಚಿಮ ಬಂಗಾಳ

    ಗೋಪಿನಾಥ್ ಬೋರ್ಡೊಲೋಯಿ

    ಗೋಪಿನಾಥ್ ಬೋರ್ಡೊಲೋಯಿ

    ಅಸ್ಸಾಂ

    ರವಿಶಂಕರ್

    ರವಿಶಂಕರ್

    ಪಶ್ಚಿಮ ಬಂಗಾಳ

    2001

    ಲತಾ ಮಂಗೇಶ್ಕರ್

    ಲತಾ ಮಂಗೇಶ್ಕರ್

    ಮಹಾರಾಷ್ಟ್ರ

    ಬಿಸ್ಮಿಲ್ಲಾ ಖಾನ್

    ಬಿಸ್ಮಿಲ್ಲಾ ಖಾನ್

    ಉತ್ತರ ಪ್ರದೇಶ

    2008

    ಭೀಮಸೇನ ಜೋಶಿ

    ಭೀಮಸೇನ ಜೋಶಿ

    ಕರ್ನಾಟಕ

    2014

    ಸಿ. ಎನ್. ಆರ್. ರಾವ್

    ಸಿ. ಎನ್. ಆರ್. ರಾವ್

    ಕರ್ನಾಟಕ

    ಸಚಿನ್ ತೆಂಡೂಲ್ಕರ್

    ಸಚಿನ್ ತೆಂಡೂಲ್ಕರ್

    ಮಹಾರಾಷ್ಟ್ರ

    2015

    ಮದನ ಮೋಹನ ಮಾಳವೀಯ

    ಮದನ ಮೋಹನ ಮಾಳವೀಯ

    ಉತ್ತರ ಪ್ರದೇಶ

    ಅಟಲ್ ಬಿಹಾರಿ ವಾಜಪೇಯಿ

    ಅಟಲ್ ಬಿಹಾರಿ ವಾಜಪೇಯಿ

    ಮಧ್ಯಪ್ರದೇಶ

    2019

    ಪ್ರಣಬ್ ಮುಖರ್ಜಿ

    ಪ್ರಣಬ್ ಮುಖರ್ಜಿ

    ಪಶ್ಚಿಮ ಬಂಗಾಳ

    ಭೂಪೇನ್ ಹಜಾರಿಕಾ

    ಭೂಪೇನ್ ಹಜಾರಿಕಾ

    ಅಸ್ಸಾಂ

    ನಾನಾಜಿ ದೇಶಮುಖ್

    ನಾನಾಜಿ ದೇಶಮುಖ್

    ಮಹಾರಾಷ್ಟ್ರ

    2024

    ಲಾಲ್ ಕೃಷ್ಣ ಅಡ್ವಾಣಿ

    ಲಾಲ್ ಕೃಷ್ಣ ಅಡ್ವಾಣಿ 


    ಪಾಕಿಸ್ತಾನ

    ಕರ್ಪೂರಿ ಠಾಕೂರ್

    ಕರ್ಪೂರಿ ಠಾಕೂರ್ 

    ಬಿಹಾರ

    ಮಂಕೊಂಬು ಸಾಂಬಶಿವನ್ ಸ್ವಾಮಿನಾಥನ್

    ಮಂಕೊಂಬು ಸಾಂಬಶಿವನ್ ಸ್ವಾಮಿನಾಥನ್ 

    ತಮಿಳುನಾಡು

    ಪಾಮುಲಪರ್ತಿ ವೆಂಕಟ ನರಸಿಂಹ ರಾವ್

    ಪಾಮುಲಪರ್ತಿ ವೆಂಕಟ ನರಸಿಂಹ ರಾವ್ 

    ತೆಲಂಗಾಣ

    ಚೌಧರಿ ಚರಣ್ ಸಿಂಗ್

    ಚೌಧರಿ ಚರಣ್ ಸಿಂಗ್ 

    ಉತ್ತರ ಪ್ರದೇಶ


    ·
    Post a Comment (0)
    Previous Post Next Post