ನಮ್ಮ ದೇಶ ಭಾರತ
👉 ಭಾತರತವು ಸುಮಾರು 3.28 ದಶಲಕ್ಷ ಚ.ಕಿ.ಮೀ ವರೆಗೆ ವಿಸ್ತಾರವಾಗಿದೆ.
👉 ಉತ್ತರದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯ ವರೆಗೆ ದೂರ -
3200 ಕಿ.ಮೀ.
👉 ಪೂರ್ವದ ಅರುಣಾಚಲ ಪ್ರದೇಶದಿಂದ
ಪಶ್ಚಿಮದ ಕಛ್ (ಗುಜರಾತ್) ವರೆಗೆ ದೂರ - 2900 ಕಿ.ಮೀ.
👉 ಭಾರತ ವಿಸ್ತೀರ್ಣದಲ್ಲಿ ವಿಶ್ವದ 7ನೇ ಅತಿ ದೊಡ್ಡ
ರಾಷ್ಟ್ರವಾಗಿದೆ.
👉 ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ
ಪ್ರಥಮ ರಾಷ್ಟ್ರವಾಗಿದೆ. ಚೀನಾ 2ನೇ ಸ್ಥಾನದಲ್ಲಿದೆ.
ಪರ್ಯಾಯ ದ್ವೀಪ
👉 ಒಂದು ಕಡೆ ಭೂಭಾಗ, ಮೂರು ಕಡೆ ಜಲಾವೃತವಾಗಿದ್ದರೆ ಆ ಭೂಮಿಯನ್ನು
ಪರ್ಯಾಯ ದ್ವೀಪ ಎನ್ನುವರು.
👉 ಭಾರತವು ಒಂದು ಪರ್ಯಾಯ ದ್ವೀಪವಾಗಿದೆ.
👉 ಭಾರತವು ಉತ್ತರಾರ್ಧ ಗೋಳದಲ್ಲಿದೆ.
👉 ಭಾರತದ ಮಧ್ಯಬಾಗದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತವು
(23½° N) ಪೂರ್ವದಿಂದ ಪಶ್ಚಿಮಕ್ಕೆ ಹಾದು
ಹೋಗುತ್ತದೆ.
👉 ಭಾರತದ ಅಕ್ಷಾಂಶದ ವಿಸ್ತಾರ - ದಕ್ಷಿಣದಿಂದ ಉತ್ತರಕ್ಕೆ -
8°4 N ರಿಂದ 37°6 N.
👉 ಭಾರತದ ರೇಖಾಂಶದ ವಿಸ್ತಾರ ಪೂರ್ವದಿಂದ ಪಶ್ಚಿಮಕ್ಕೆ -
68°7 E ರಿಂದ 97°25 E.
👉 ರೇಖಾಂಶಗಳ ನಡುವಿನ ಅಂತರ 29° ಆಗಿರುವುದರಿಂದ
ಭಾತರತದ ಪ್ರಮಾಣಿತ ಸಮಯವು 82°30 E ಆಗಿದೆ.
ಭಾರತದ ನೆರೆ-ಹೊರೆ
👉 ಭಾರತವು 7 ದೇಶಗಳೊಂದಿಗೆ ತನ್ನ ಭೂಗಡಿಯನ್ನು
ಹಂಚಿಕೊಳ್ಳುತ್ತದೆ.
👉 ನಮ್ಮ ದೇಶದ ನೆರೆಹೊರೆಯ ದ್ವೀಪ ರಾಷ್ಟ್ರಗಳು -
ಶ್ರೀಲಂಕಾ ಮತ್ತು ಮಾಲ್ಡೀವ್ಸ್.
👉 ಭಾರತದಿಂದ ಶ್ರೀಲಂಕಾವನ್ನು
"ಪಾಕ್ ಜಲಸಂಧಿ"
ಬೇರ್ಪಡಿಸುತ್ತದೆ.
👉 ಭಾರತದಲ್ಲಿ , ವಿಸ್ತೀರ್ಣದಲ್ಲಿ
ರಾಜಸ್ಥಾನ ದೊಡ್ಡ ರಾಜ್ಯವಾಗಿದೆ ಮತ್ತು
ಗೋವಾ ಚಿಕ್ಕ ರಾಜ್ಯವಾಗಿದೆ.
ಭಾರತದ ಪ್ರಾಕೃತಿಕ ವಿಭಾಗಗಳು
1. ಹಿಮಾಲಯಗಳು :
👉 ಹಿಮಾಲಯಗಳನ್ನು ಮೂರು ಸಮಾನಾಂತರ
ಶ್ರೇಣಿಗಳಾಗಿ ವಿಂಗಡಿಸಲಾಗಿದೆ.
- ಉತ್ತರದ ಹಿಮಾಲಯಗಳು (ಹಿಮಾದ್ರಿ) - ವಿಶ್ವದ ಅತಿ ಎತ್ತರದ ಶ್ರೇಣಿಗಳು ಇಲ್ಲಿ ಕಂಡು ಬರುತ್ತವೆ.
- ಮಧ್ಯ ಹಿಮಾಲಯ (ಹಿಮಾಚಲ) - ಇಲ್ಲಿ ಗಿರಿಧಾಮಗಳು ಕಂಡು ಬರುತ್ತವೆ.
- ಶಿವಾಲಿಕ್ ಬೆಟ್ಟಗಳು - ದಕ್ಷಿಣದ ತುದಿ.
2. ಉತ್ತರದ ಮಹಾ ಮೈದಾನಗಳು :
👉 ಹಿಮಾಲಯದ ದಕ್ಷಿಣಕ್ಕೆ ಕಂಡು
ಬರುತ್ತವೆ.
👉 ಈ ಮೈದಾನಗಳು ಸಿಂಧೂ, ಗಂಗಾ,
ಬ್ರಹ್ಮಪುತ್ರ ಮತ್ತು ಅವುಗಳ ಉಪ
ನದಿಗಳು ತಂದು ಹಾಕುವ ಮೆಕ್ಕಲು ಮಣ್ಣಿನ
ಸಂಚಯನದಿಂದಾಗಿದೆ. ಈ ಕಾರಣದಿಂದಾಗಿ ಈ
ಮೈದಾನಗಳು ಹೆಚ್ಚಿನ ಜನಸಂಖ್ಯೆಯನ್ನು
ಹೊಂದಿವೆ.
👉 ಭಾರತದ ಪಶ್ಚಿಮ ಭಾಗಕ್ಕೆ ಮರುಭೂಮಿ
ಇದೆ. ಇದು ಒಣ, ಬಿಸಿ ಮತ್ತು ಮರಳಿನ
ಪ್ರದೇಶವಾಗಿದೆ. ಇಲ್ಲಿ ಚಿಕ್ಕದಾದ
ಸಸ್ಯ ವರ್ಗ ಕಂಡುಬರುತ್ತದೆ.
3. ಪರ್ಯಾಯ ಪ್ರಸ್ಥಭೂಮಿ :
👉 ಉತ್ತರ ಮೈದಾನದ
ದಕ್ಷಿಣಕ್ಕಿದೆ.
👉 ಇದು ತ್ರಿಭುಜದ ಆಕಾರವನ್ನು
ಹೊಂದಿದೆ.
👉 ಪರ್ಯಾಯ ಪ್ರಸ್ಥಭೂಮಿಯ ವಾಯುವ್ಯ
ಭಾಗಕ್ಕೆ ವಿಶ್ವದ ಹಳೆಯ ಬೆಟ್ಟಗಳಲ್ಲಿ
ಒಂದಾದ
ಅರಾವಳಿ ಬೆಟ್ಟಗಳು ಕಂಡು
ಬರುತ್ತವೆ.
👉 ವಿಂಧ್ಯ ಮತ್ತು ಸಾತ್ಪುರ ಪರ್ವತ
ಶ್ರೇಣಿಗಳು ಕಂಡು ಬರುತ್ತವೆ. ಈ
ಶ್ರೇಣಿಗಳಲ್ಲಿ ನರ್ಮದಾ ಮತ್ತು
ತಾಪಿ ನದಿಗಳು ಹರಿದು
ಹೋಗುತ್ತವೆ. ಈ ನದಿಗಳು
ಪಶ್ಚಿಮಾಭಿಮುಖವಾಗಿ ಹರಿಯುವ
ನದಿಗಳಾಗಿದ್ದು, ಅರಬ್ಬೀ ಸಮುದ್ರವನ್ನು
ಸೇರುತ್ತವೆ.
👉 ಪ್ರಸ್ಥಭೂಮಿಯ ಪಶ್ಚಿಮಕ್ಕೆ
ಪಶ್ಚಿಮ ಘಟ್ಟಗಳು (ಸಹ್ಯಾದ್ರಿ
ಬೆಟ್ಟಗಳು) ಮತ್ತು ಪೂರ್ವಕ್ಕೆ ಪೂರ್ವ
ಘಟ್ಟಗಳು ಕಂಡು ಬರುತ್ತವೆ.
👉
ಪಶ್ವಿಮ ಘಟ್ಟಗಳು ಬಹುತೇಕ
ನಿರಂತರವಾಗಿವೆ, ಆದರೆ ಪೂರ್ವ
ಘಟ್ಟಗಳು ಅಸಮವಾಗಿದ್ದು
ನಿರಂತರವಾಗಿಲ್ಲ.
4. ಕರಾವಳಿ ಮೈದಾನಗಳು :
👉 ಪಶ್ಚಿಮ ಘಟ್ಟಗಳ ಪಶ್ಚಿಮಕ್ಕೆ
ಮತ್ತು ಪೂರ್ವ ಘಟ್ಟಗಳ ಪೂರ್ವಕ್ಕೆ
ಕಂಡು ಬರುತ್ತವೆ.
👉
ಪಶ್ಚಿಮ ಕರಾವಳಿ ಮೈದಾನಗಳು ಬಹಳ
ಕಿರಿದಾಗಿದ್ದು , ಪೂರ್ವ ಕರಾವಳಿ
ಮೈದಾನಗಳು ವಿಶಾಲವಾಗಿವೆ.
👉 ಮಹಾನದಿ, ಗೋಧಾವರಿ, ಕೃಷ್ಣ ಮತ್ತು
ಕಾವೇರಿ ನದಿಗಳು ಬಂಗಾಳಕೊಲ್ಲಿ
ಸೇರುತ್ತವೆ. ಈ ನದಿಗಳು ಸಂಧಿಸುವಲ್ಲಿ
ನದಿ ಮುಖಜಭೂಮಿಗಳನ್ನು
ಸೃಷ್ಟಿಸುತ್ತವೆ.
👉
"ಸುಂದರಬನ್" ಮುಖಜಭೂಮಿಯು
ಗಂಗಾ ಮತ್ತು ಬ್ರಹ್ಮಪುತ್ರ ನದಿಗಳಿಂದ ನಿರ್ಮಿತವಾಗಿದೆ. ಈ ಮುಖಜ
ಭೂಮಿಯು ತ್ರಿಭುಜಾಕಾರದಲ್ಲಿದೆ.
ದ್ವೀಪಗಳ ಎರಡು ಗುಂಪುಗಳು ಸಹ ಭಾರತದ ಒಂದು ಭಾಗವಾಗಿದೆ
1. ಲಕ್ಷದ್ವೀಪಗಳು :
👉 ಅರಬ್ಬಿ ಸಮುದ್ರದಲ್ಲಿವೆ.
👉 ಈ ದ್ವೀಪಗಳು ಹವಳ ದ್ವೀಪಗಳಾಗಿದ್ದು , ಕೇರಳದ ಕರಾವಳಿ ಪ್ರದೇಶದ ಕಡೆ ಕಂಡು ಬರುತ್ತವೆ.
👉 ಹವಳಗಳು ಚಿಕ್ಕ ಸಮುದ್ರ / ಸಾಗರ ಪ್ರಾಣಿಗಳ (ಪಾಲಿಪ್ಸ್ ಎಂಬ ಪ್ರಾಣಿ) ಅಸ್ಥಿಪಂಜರಗಳಿಂದಾಗಿವೆ.
2. ಅಂಡಮಾನ ಮತ್ತು ನಿಕೋಬಾರ್ ದ್ವೀಪಗಳು :
👉 ಈ ದ್ವೀಪಗಳು ಭಾರತದ ಭೂ ಭಾಗದ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಕಂಡುಬರುತ್ತವೆ.
