ಅಧ್ಯಾಯ -5. ಭೂಮಿಯ ಪ್ರಮುಖ ಭೂ ರೂಪಗಳು - Major Landforms of the Earth

ಭೂಮಿಯ ಪ್ರಮುಖ ಭೂ ರೂಪಗಳು


Landforms of the Earth

👉 ಪರ್ವತಗಳು, ಪ್ರಸ್ಥಭೂಮಿಗಳು ಮತ್ತು ಬಯಲು ಪ್ರದೇಶಗಳು ಭೂಮಿಯ ಕೆಲವು ಪ್ರಮುಖ ಭೂ ರೂಪಗಳು.
👉 ಹವಾಮಾನ, ನೀರು, ಎತ್ತರ, ಮುಳುಗುವಿಕೆ ಮತ್ತು ಮಣ್ಣಿನ ಸವೆದಂತಹ ನೈಸರ್ಗಿಕ ಪ್ರಕೃತಿಗಳು ನಿರಂತರವಾಗಿ ಭೂಮಿಯ ಮೇಲ್ಮೈಯನ್ನು ರೂಪಿಸುತ್ತವೆ
👉 ಇದು ನಿಜವಾಗಿಯು ರಾತ್ರೋರಾತ್ರಿ ಸಂಭವಿಸುವುದಿಲ್ಲ. ವಾಸ್ತವವಾಗಿ ಬದಲಾವಣೆಗಳನ್ನು ನಾವು ಗಮನಿಸಲು ನೂರಾರು ಮತ್ತು ಸಾವಿರಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆಗಳು ವಿವಿಧ ಭೂ ರೂಪಗಳ ರವನೆಗೆ ಕಾರಣವಾಗುತ್ತವೆ.
👉 ಭೂಮಿಯ ಮೇಲೆ ಕಾಣುವ ಭೂ ರೂಪಗಳು ಆಂತರಿಕ ಮತ್ತು ಬಾಹ್ಯ ಪ್ರಕ್ರಿಯೆಗಳಿಂದಾಗಿದೆ.

ಆಂತರಿಕ ಪ್ರಕ್ರಿಯೆ :

👉 ಆಂತರಿಕ ಪ್ರಕ್ರಿಯೆಗಳು ಭೂಮಿಯ ಮೇಲ್ಮೈಯಲ್ಲಿ ಅಂದರೆ ಹೊರಪದರದ ಕೆಳಗೆ ಸಂಭವಿಸುವ ಪ್ರಕ್ರಿಯೆ.
👉 ಭೂಮಿಯ ಮೇಲ್ಮೈಯನ್ನು ಹಲವಾರು ಸ್ಥಳಗಳಲ್ಲಿ ಉಗಮ ಮತ್ತು ಮುಳುಗಿಸಲು ಕಾರಣವಾಗುತ್ತದೆ.
ಉದಾ : ವಿಯೋಲ್ಕಾನಿಕ್‌ ಎರಪ್ಶನ್‌ ಮತ್ತು ಪಿ ಲೆಟ್‌ ಟೆಕ್ಟೋನಿಕ್ಸ್.‌

ಬಾಹ್ಯ ಪ್ರಕ್ರಿಯೆ :

👉 ಭೂಮಿಯ ಮೇಲ್ಮೈಯು ನಿರಂತರವಾದ ಸವಕಳಿ ಹಾಗೂ ಸಂಚಯನ ಕ್ರಿಯೆಗಳಿಗೆ ಒಳಪಟ್ಟರೆ ಅದನ್ನು ಬಾಹ್ಯ ಪ್ರಕ್ರಿಯೆ ಎನ್ನುವರು.
👉 ಈ ಪ್ರಕ್ರಿಯೆಯು ಹರಿಯುವ ನೀರು (ಮಳೆ), ಮಂಜುಗಡ್ಡೆ ಮತ್ತು ಗಾಳಿಯ ಮೂಲಕ ನಡೆಯುತ್ತದೆ.

ಪ್ರಮುಖ ಭೂರೂಪಗಳು :

Types of Landforms

👉 ಎತ್ತರ ಮತ್ತು ಇಳಿಜಾರಿನ ಆಧಾರದ ಮೇಲೆ ಭೂಪ್ರದೇಶಗಳನ್ನು ಪರ್ವತಗಳು, ಪ್ರಸ್ಥಭೂಮಿಗಳು ಮತ್ತು ಬಯಲು ಪ್ರದೇಶಗಳು (ಮೈದಾನಗಳು) ಎಂದು ವರ್ಗೀಕರಿಸಲಾಗಿದೆ.

1. ಪರ್ವತಗಳು :

Mountains

👉 ಪರ್ವತಗಳು ಚಿಕ್ಕದಾದ ಶಿಖರ ಮತ್ತು ವಿಶಾಲವಾದ ತಳವನ್ನು ಹೊಂದಿರುತ್ತವೆ.
👉 ಪರ್ವತಗಳ ಸುತ್ತಮುತ್ತಲಿನ ಭೂ ಪ್ರದೇಶಗಳಿಗಿಂತ ಎತ್ತರವಾಗಿರುತ್ತವೆ.
👉 ಸಾಮಾನ್ಯವಾಗಿ ಪರ್ವತಗಳು 200 ಅಡಿಗಿಂತ ಹೆಚ್ಚು ಎತ್ತರದಲ್ಲಿವೆ.
👉ಪರ್ವತಗಳ ಎತ್ತರಕ್ಕೆ  ಹೋದಂತೆ ತಾಪಮಾನವು ಮತ್ತು ಹವಾಮಾನವು ತಂಪಾಗುತ್ತದೆ. ಹೀಗಾಗಿ ಅಲ್ಲಿ ವಾಸ ಮಾಡಲು ಕಷ್ಟಕರವಾಗುತ್ತದೆ. ಮತ್ತು ಅದಕ್ಕಾಗಿಯೇ ಪರ್ವತ ಪ್ರದೇಶಗಳಲ್ಲಿ ಕಡಿಮೆ ಜನವಸತಿ ಇರುತ್ತದೆ.
👉ಎತ್ತರದ ಪರ್ವತಗಳಲ್ಲಿ ಶಾಶ್ವತವಾಗಿ ಹೆಪ್ಪುಗಟ್ಟಿದ ಮಂಜುಗಡ್ಡೆಗಳಿರುತ್ತವೆ. ಇವುಗಳನ್ನು "ಹಿಮನದಿಗಳು" ಎಂದು ಕರೆಯುತ್ತಾರೆ.
👉 ಸಮುದ್ರ ತಳವನ್ನು ಸ್ಕೆಲ್‌ ಎಂದೂ ಪರಿಗಣಿಸಿ ನಾವು ಮೇಲ್ಮೈ ಎತ್ತರವನ್ನು ಲೆಕ್ಕ ಹಾಕಿದರೆ ಸಾಗರದ ಅಡಿಯಲ್ಲಿಯೂ ಪರ್ವತಗಳಿವೆ.
ಉದಾ : ಪೆಸಿಫಿಕ್‌ ಮಹಾಸಾಗರದಲ್ಲಿರುವ "ಮೌನಾ ಕೀ" (ಹವಾಯಿ). ವಾಸ್ತವವಾಗಿ ಇದು ಮೌಂಟ್‌ ಎವರೆಸ್ಟ್‌ ಕ್ಕಿಂತ 10250 ಮೀ ಎತ್ತರವಾಗಿದೆ.
👉 ಪರ್ವತಗಳ ಸಾಲುಗಳನ್ನು "ಪರ್ವತ ಶ್ರೇಣಿ" ಎನ್ನವರು.
ಉದಾ : ಹಿಮಾಲಯಗಳು (ಏಷ್ಯಾ), ಆಲ್ಪ್ಸ್‌ (ಯುರೋಪ) ಮತ್ತು ಆಂಡಿಸ್‌ ಪರ್ವತ ಶೇಣಿಗಳು (ದಕ್ಷಿಣ ಅಮೇರಿಕಾ).
👉ಪರ್ವತಗಳು ಸಾಮಾನ್ಯವಾಗಿ ನಾಗರಿಕತೆಗಳಿಂದ ಅಸ್ಪೃಶ್ಯ ಮತ್ತು ಅಳಿವಿನಂಚಿನಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳನ್ನು ಹೊಂದಿರುತ್ತವೆ.

ಪರ್ವತಗಳಲ್ಲಿ ಮೂರು ವರ್ಗಗಳಿವೆ.
        1. ಮಡಿಕೆ ಪರ್ವತಗಳು :

Fold Mountains

👉 ಮಡಿಕೆ ಪರ್ವತಗಳನ್ನು ಅದರ ವಯಸ್ಸಿಗೆ ಅನುಗುಣವಾಗಿ "ಯುವ ಮಡಿಕೆ" ಮತ್ತು "ಹಳೆಯ ಮಡಿಕೆ" ಪರ್ವತಗಳಾಗಿ ವರ್ಗೀಕರಿಸಲಾಗಿದೆ.
👉 ಯುವ ಮಡಿಕೆ ಪರ್ವತಗಳು 10 ರಿಂದ 25 ಮಿಲಿಯನ್ ವರ್ಷಗಳಷ್ಟು ಹಳೆಯವು. 
ಉದಾಹರಣೆಗೆ - ಹಿಮಾಲಯ (ನೇಪಾಳ), ಆಲ್ಪ್ಸ್ (ಯುರೋಪ)ಮತ್ತು ಆಂಡಿಸ್ (ದಕ್ಷಿಣ ಅಮೆರಿಕಾದ).
👉 ಹಳೆಯ ಮಡಿಕೆ ಪರ್ವತಗಳು 200 ಮಿಲಿಯನ್ ವರ್ಷಗಳ ಹಳೆಯವು. 
ಉದಾಹರಣೆಗೆ - ಭಾರತದಲ್ಲಿನ ಅರಾವಳಿ ಪರ್ವತಗಳು (ರಾಜಸ್ಥಾನ), ಇದು ವಿಶ್ವದಲ್ಲಿಯೆ ಅತ್ಯಂತ ಹಳೆಯ ಮಡಿಕೆ ಪರ್ವತ ಶ್ರೇಣಿ. ಉರಲ್ ಪರ್ವತಗಳು (ರಷ್ಯಾ) ಮತ್ತು ಅಪಲ್ಚಯಿನ್‌ (ಅಮೆರಿಕಾ).

        2. ಬ್ಲಾಕ್/ಅಡ್ಡ ಪರ್ವತಗಳು :

Block Mountains


👉 ದೊಡ್ಡ ಪ್ರದೇಶಗಳು ಮುರಿದು ಲಂಬವಾಗಿ ಸ್ಥಳಾಂತರಗೊಂಡಾಗ ಬ್ಲಾಕ್ ಪರ್ವತಗಳು ರೂಪುಗೊಳ್ಳತ್ತವೆ. 
👉ಮೇಲಕ್ಕೆತ್ತಿದ ಬ್ಲಾಕ್ ಗಳನ್ನು "ಹೋರ್ಸ್ಟ್" ಎಂದು ಕರೆಯಲಾಗುತ್ತದೆ ಮತ್ತು ಕುಗ್ಗಿದ ಬ್ಲಾಕ್ ಗಳನ್ನು"ಗ್ರಾಬನ್" ಎಂದು ಕರೆಯಲಾಗುತ್ತದೆ .
ಉದಾಹರಣೆಗೆ - ರೈನ್ ಕಣಿವೆ ಮತ್ತು ಪೊಸ್ಟಸ್ ಪರ್ವತ‌ (ಯುರೋಪ).

        3. ಜ್ವಾಲಾಮುಖಿ ಪರ್ವತಗಳು :


Volcanic Mountains

👉 ಮ್ಯಾಂಟಲ್ ನಿಂದ ಭೂಮಿಯ ಹೊರಪದರಕ್ಕೆ ಏರುವ ಮ್ಯಾಗ್ನಾ ಜ್ವಾಲಾಮುಖಿ ಪರ್ವತಗಳನ್ನು ರೂಪಿಸುತ್ತದೆ.
ಉದಾಹರಣೆ - ಕಿಲಿಮಂಜಾರೋ (ಆಫ್ರಿಕಾ) ಮತ್ತು ಮೌಂಟ್ ಫ್ಯೂಜಿಯಾಮ (ಜಪಾನ್).


2. ಪ್ರಸ್ಥಭೂಮಿಗಳು :


Plateaus

👉 ಪ್ರಸ್ಥ ಭೂಮಿಗಳು ಎತ್ತರದ ಸಮತಟ್ಟಾದ ಭೂ ಪ್ರದೇಶಗಳಾಗಿವೆ.
👉 ಪ್ರಸ್ಥಭೂಮಿಗಳು ನೂರು ಮೀಟರ್‌ಗಳಿಂದ ಸಾವಿರ ಮೀಟರ್‌ಗಳ ವರೆಗೆ ಕಂಡುಬರುತ್ತದೆ.
👉 ಭಾರತದಲ್ಲಿ ಒಂದಾದ ಡೆಕ್ಕನ್ ಪ್ರಸ್ಥಭೂಮಿ ಅತ್ಯಂತ ಹಳೆಯ ಪ್ರಸ್ಥಭೂಮಿ. 
👉 ಪ್ರಸ್ಥ ಭೂಮಿಯಲ್ಲಿ ಟಿಬೆಟಿಯನ್ ಪ್ರಸ್ಥಭೂಮಿ ವಿಶ್ವದ ಅತಿ ಎತ್ತರದ ಪ್ರಸ್ಥಭೂಮಿಯಾಗಿದೆ.
👉 ಇದರ ಎತ್ತರ ಸಮುದ್ರ ಮಟ್ಟದಿಂದ 400 ಮೀ ರಿಂದ 6000 ಮೀಟರ್‌ ಗಳು.
👉 ಆಫ್ರಿಕನ್ ಪ್ರಸ್ಥಭೂಮಿಯು ಚಿನ್ನ ಮತ್ತು ವಜ್ರದ ಗಣಿಗಾರಿಕೆಗೆ ಹೆಚ್ಚು ಪ್ರಸಿದ್ಧವಾಗಿದೆ.
👉ಭಾರತದಲ್ಲಿ ಕಬ್ಬಿಣದ ಅದಿರು, ಕಲ್ಲದ್ದಲು,ಮ್ಯಾಂಗನೀಸ್‌ ನಂತಹ ಖನಿಜ ನಿಕ್ಷೇಪಗಳು ಛೋಟಾನಾಗ್‌ಪುರ ಪ್ರಸ್ಥಭೂಮಿಯಲ್ಲಿ ಕಂಡು ಬರುತ್ತವೆ.
👉 ಪ್ರಸ್ಥಭೂಮಿಗಳ ಎತ್ತರದಿಂದಾಗಿ ಇಲ್ಲಿ ಹರಿಯುವ ನದಿಗಳು ಜಲಪಾತಗಳನ್ನು ಸೃಷ್ಟಿಸುತ್ತವೆ.
ಉದಾಹರಣೆಗೆ - ಹುಂಡ್ರಾ ಜಲಪಾತ (ಸುಬರ ನರೇಖಾ ನದಿ) - ಛೋಟಾನಾಗ್‌ಪುರ ಪ್ರಸ್ಥಭೂಮಿ ಮತ್ತು ಜೋಗ್ ಜಲಪಾತ (ಶರಾವತಿ) - ಕರ್ನಾಟಕ.
👉 ಇದಲ್ಲದೆ, ಈ ಭೂ ರೂಪಗಳು ಪ್ರವಾಸೋದ್ಯಮ ಮತ್ತು ದೃಶ್ಯ ಚಟುವಟಿಕೆಗಳ ಕೇಂದ್ರ ಗಳಾಗಿವೆ.

3. ಬಯಲು ಪ್ರದೇಶಗಳು (ಮೈದಾನಗಳು) :


Plains

👉ವಿಸ್ತಾರವಾಗಿ ಹರಡಿರುವ ಸಮತಟ್ಟಾದ ಭೂಮಿಯನ್ನು ಬಯಲು ಪ್ರದೇಶಗಳು (ಮೈದಾನಗಳು) ಎನ್ನುವರು.
👉 ಇವುಗಳು ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ 200 ಮೀಟರ್ ಗಳ ಎತ್ತರದವರೆಗೂ ಕಂಡು ಬರುತ್ತವೆ.
👉 ಕೆಲವೊಂದು ಅತ್ಯಂತ ಸಮತಟ್ಟಾಗಿವೆ. ನದಿಗಳು ಮತ್ತು ಅವುಗಳ ಉಪನದಿಗಳು ಬಯಲು ಪ್ರದೇಶಗಳನ್ನು ರೂಪಿಸುತ್ತವೆ.
👉 ಬಯಲು ಪ್ರದೇಶಗಳು(ಮೈದಾನಗಳು) ಅತ್ಯಂತ ಫಲವತ್ತಾದ ಪ್ರದೇಶಗಳಾಗಿರುವುದರಿಂದ ಹೆಚ್ಚಿನ ಜನಸಂದಣಿ ಹೊಂದಿರುವ ಪ್ರದೇಶಗಳಾಗಿವೆ.
👉 ಭಾರತದಲ್ಲಿ, ಇಂಡೋ-ಗಂಗಾ ಬಯಲು ಪ್ರದೇಶಗಳು ದೇಶದ ಅತ್ಯಂತ ಜನನಿಬಿಡ ಪ್ರದೇಶಗಳಾಗಿವೆ.

Post a Comment (0)
Previous Post Next Post