ಭಾರತದ ವಾಯುಗುಣ ಸಸ್ಯವರ್ಗ ಮತ್ತು ಪ್ರಾಣಿವರ್ಗ
👉 ವಾಯುಗುಣದಲ್ಲಿ ಪ್ರತಿ ದಿನ ಆಗುವ ಬದಲಾವಣೆಗಳನ್ನು
"ಹವಾಗುಣ" ಎನ್ನುವರು.
ಉದಾ - ಮಳೆ ಸೂರ್ಯನ ಕಿರಣ ಉಷ್ಣಾಂಶ ಇತ್ಯಾದಿ.
ಭಾರತದಲ್ಲಿ ಕಂಡು ಬರುವ ಪ್ರಮುಖ ಋತುಗಳು
- ಶೀತಿ ಹವಾಮಾನ (ಚಳಿಗಾಲ) - ಡಿಸೆಂಬರ್ ನಿಂದ ಫೆಬ್ರುವರಿ
- ಉಷ್ಣ ಹವಾಮಾನ (ಬೇಸಿಗೆ ಕಾಲ) - ಮಾರ್ಚ್ ನಿಂದ ಮೇ
- ನೈರುತ್ಯ ಮಾನ್ಸೂನ್ (ಮಳೆಗಾಲ) - ಜೂನ್ ನಿಂದ ಸೆಪ್ಟೆಂಬರ್
- ನಿರ್ಗಮನ ಮಾನ್ಸೂನ್ (ಶರತ್ ಕಾಲ) - ಅಕ್ಟೋಬರ್ ನಿಂದ ನವೆಂಬರ್
ಚಳಿಗಾಲ
👉 ಈ ಕಾಲದಲ್ಲಿ ಶೀತ ಶುಷ್ಕ ಗಾಳಿಯು ಉತ್ತರದಿಂದ ದಕ್ಷಿಣಕ್ಕೆ ಬೀಸುತ್ತದೆ.
👉 ಸೂರ್ಯನ ಕಿರಣಗಳು ನೇರವಾಗಿ ಉತ್ತರ ಭಾರತದಲ್ಲಿ ಬೀಳದೆ ಇರುವ ಕಾರಣ ತಾಪಮಾನ ತುಂಬಾ ಕಡಿಮೆ
ಇರುತ್ತದೆ.
ಬೇಸಿಗೆ ಕಾಲ
👉 ಸೂರ್ಯನ ಕಿರಣಗಳು ನೇರವಾಗಿ ಬೀಳುವ ಕಾರಣ ತಾಪಮಾನ ಹೆಚ್ಚಾಗಿರುತ್ತದೆ.
👉 ಉಷ್ಣ ಮತ್ತು ಶುಷ್ಕ ಗಾಳಿಯನ್ನು ಉತ್ತರ ಭಾರತದಲ್ಲಿ "ಲೂ" ಎನ್ನುವರು. ಇದು ಹಗಲಿನಲ್ಲಿ
ಬಿಸುತ್ತದೆ.
ನೈರುತ್ಯ ಮಾನ್ಸೂನ್ ಅಥವಾ ಮಳೆಗಾಲ
👉 ಈ ಋತುವಿನಲ್ಲಿ ಮಳೆ ಪ್ರಾರಂಭವಾಗುವುದು.
👉 ಬಂಗಾಳಕೊಲ್ಲಿ ಮತ್ತು ಅರಬ್ಬಿಯನ್ ಸಮುದ್ರಗಳಿಂದ ಗಾಳಿಯೂ ಭೂ ಭಾಗಗಳ ಕಡೆಗೆ
ಬೀಸುತ್ತದೆ.
ನಿರ್ಗಮನ ಮಾನ್ಸೂನ್ ಅಥವಾ ಶರತ್ ಕಾಲ
👉 ಈ ಕಾಲದಲ್ಲಿ ಗಾಳಿಯು ಭೂ ಭಾಗದಿಂದ ಬಂಗಾಳಕೊಲ್ಲಿ ಕಡೆಗೆ ಬೀಸಲಾರಂಭಿಸುತ್ತದೆ. ಮುಖ್ಯವಾಗಿ
ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳು ಮಳೆಯನ್ನು ಪಡೆಯುತ್ತವೆ.
ವಾಯುಗುಣ
👉 ವಾಯುಗುಣ ಎಂದರೆ ಹವಾಮಾನದ ಸರಾಸರಿ ಇದನ್ನು ಹಲವು ವರ್ಷಗಳಿಂದ
ಅಳೆಯಲಾಗುತ್ತದೆ.
👉 ಭಾರತದ ವಾಯುಗುಣವನ್ನು ಮಾನ್ಸೂನ್ ವಿವಿಧ ವಾಯುಗುಣ ಎನ್ನುವರು.
👉 "ಮಾನ್ಸೂನ್" ಎಂಬ ಪದವು ಅರೇಬಿಕ್ ಭಾಷೆಯ "ಮೌಸಿಮ್" ಎಂಬ ಪದದಿಂದ ಬಂದಿದೆ ಇದರ ಅರ್ಥ
"ಋತು".
👉 ಭಾರತವು ಉಷ್ಣ ವಲಯದಲ್ಲಿ ಕಂಡು ಬರುವದರಿಂದ ಇದಕ್ಕೆ ಹೆಚ್ಚಿನ ಮಳೆಯು ಮಾನ್ಸೂನ್
ಮಾರುತಗಳಿಂದ ಆಗುತ್ತದೆ.
👉 ಒಂದು ಸ್ಥಳದ ವಾಯುಗುಣವು ಅದರ ಸ್ಥಳ ಎತ್ತರ, ಸಮುದ್ರದಿಂದ ದೂರ ಮತ್ತು ಭೂಮೇಲ್ಮೈ ಮೇಲೆ
ಅವಲಂತವಾಗಿರುತ್ತದೆ. ಹೀಗಾಗಿ ಭಾರತದ ವಾಯುಗುಣದಲ್ಲಿ ಪ್ರಾದೇಶಿಕ ವ್ಯತ್ಯಾಸಗಳು
ಕಂಡುಬರುತ್ತವೆ.
ಉದಾ - ರಾಜಸ್ಥಾನದ ಮರುಭೂಮಿಯಲ್ಲಿರುವ ಜೈಸಲ್ಮೇರ್ ಮತ್ತು ಬಿಕಾನೇರ್ ಗಳು
ಬಿಸಿಯಾಗಿದ್ದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡುಬರುವ ಡ್ರಾಸ್ ಮತ್ತು ಕಾರ್ಗಿಲ್ ಗಳು
ತುಂಬಾ ಶೀತವಾಗಿರುತ್ತವೆ.
👉 ಮೌಸಿನ್ ರಾಮ್ (ಮೇಘಾಲಯ) - ವಿಶ್ವದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಅಂದರೆ
ಜೈಸಲ್ಮೇರ್ ನಲ್ಲಿ ನಿರ್ದಿಷ್ಟ ವರ್ಷದಲ್ಲಿ ಮಳೆ ಆಗುವುದಿಲ್ಲ.
ನೈಸರ್ಗಿಕ ಸಸ್ಯವರ್ಗ
👉 ಮಾನವನ ಹಸ್ತಕ್ಷೇಪ ಮತ್ತು ಸಹಾಯವಿಲ್ಲದೆ ತಾವಾಗಿಯೇ ಬೆಳೆಯುವ ಹುಲ್ಲು ಪೊದೆ ಮತ್ತು
ಮರಗಳನ್ನು "ನೈಸರ್ಗಿಕ ಸಸ್ಯ" ಎನ್ನುವರು
👉 ವೈವಿಧ್ಯಮಯ ವಾಯುಗುಣದ ಕಾರಣದಿಂದಾಗಿ ಭಾರತದಲ್ಲಿ ವ್ಯಾಪಕವಾದ ನೈಸರ್ಗಿಕ ಸಸ್ಯವರ್ಗಗಳು
ಕಂಡುಬರುತ್ತವೆ.
👉 ಭಾರತದ ಸಸ್ಯ ವರ್ಗವನ್ನು ಐದು ವಿಧಗಳಾಗಿ ವಿಂಗಡಿಸಲಾಗಿದೆ
- ಉಷ್ಣವಲಯದ ಸತ್ಯಹರಿದ್ವರ್ಣ
- ಉಷ್ಣವಲಯದ ಎಲೆ ಉದುರುವ ಕಾಡು
- ಮುಳ್ಳಿನ ಪೊದೆಗಳು
- ಪರ್ವತ ಸಸ್ಯ ವರ್ಗ
- ಮ್ಯಾಂಗ್ರೋವ್ ಅರಣ್ಯ
ಉಷ್ಣವಲಯದ ನಿತ್ಯ ಹರಿದ್ವರ್ಣ ಕಾಡುಗಳು
👉 ಈ ಅರಣ್ಯಗಳು ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಕಂಡುಬರುತ್ತವೆ.
👉 ಅವು ತುಂಬಾ ದಟ್ಟವಾಗಿದ್ದು ಸೂರ್ಯನ ಕಿರಣಗಳನ್ನು ಭೂಮಿಯನ್ನು ತಲುಪಲು ಬಿಡುವುದಿಲ್ಲ
.
👉 ಇಲ್ಲಿ ಕಂಡು ಬರುವ ಮರಗಳು ವರ್ಷದ ವಿವಿಧ ಸಮಯಗಳಲ್ಲಿ ಎಲೆ ಉದುರಿಸುತ್ತವೆ. ಹಾಗಾಗಿ ಈ
ಅರಣ್ಯಗಳು ಯಾವಾಗಲೂ ಹಸಿರಾಗಿ ಕಾಣುತ್ತವೆ. ಹೀಗಾಗಿ ಈ ಅರಣ್ಯಗಳನ್ನು "ನಿತ್ಯ ಹರಿದ್ವರ್ಣ
" ಎನ್ನುವರು
👉 ಪ್ರಮುಖ ಮರಗಳು - ಮಹಾಗನಿ, ಎಬೋನಿ, ರೋಸ್ ವುಡ್.
👉 ಈ ಅರಣ್ಯಗಳು ಅಂಡಮಾನ್ ಮತ್ತು ನಿಕೋಬಾರ್, ಈಶಾನ್ಯ ಭಾರತದ ರಾಜ್ಯಗಳ ಭಾಗಗಳಲ್ಲಿ ಮತ್ತು
ಪಶ್ಚಿಮ ಘಟ್ಟಗಳ ಕೆಲವೊಂದು ಸ್ಥಳಗಳಲ್ಲಿ ಕಂಡುಬರುತ್ತವೆ.
ಉಷ್ಣವಲಯದ ಎಲೆ ಉದುರುವ ಅರಣ್ಯಗಳು
👉 ನಮ್ಮ ದೇಶದ ಬಹುಪಾಲು ಭಾಗಗಳಲ್ಲಿ ಈ ಕಾಡುಗಳೇ ಕಂಡು ಬರುತ್ತವೆ.
👉 ಈ ಕಾಡುಗಳನ್ನು ಮಾನ್ಸೂನ್ ಅರಣ್ಯಗಳು ಎಂದು ಕೂಡಾ ಕರೆಯುವರು.
👉 ಇವುಗಳು ಕಡಿಮೆ ದಟ್ಟವಾಗಿರುತ್ತವೆ. ಹಾಗೂ ವರ್ಷದ ನಿರ್ದಿಷ್ಟ ಸಮಯದಲ್ಲಿ ಎಲೆ
ಉದುರಿಸುತ್ತವೆ.
👉 ಪ್ರಮುಖ ಮರಗಳು - ಸಾಲ, ಪೀಪಲ್, ಬೇವು ಮತ್ತು ಶಿಸಾಯ್.
👉 ಈ ಅರಣ್ಯಗಳು ಮಧ್ಯ ಪ್ರದೇಶ ಉತ್ತರ ಪ್ರದೇಶ, ಬಿಹಾರ, ಜಾರ್ಖಾಂಡ್, ಛತ್ತೀಸ್ ಘಡ್, ಒರಿಸ್ಸಾ
ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ಕಂಡು ಬರುತ್ತವೆ.
ಮುಳ್ಳಿನ ಪೊದೆಗಳು
👉 ಇವು ಭಾರತದ ಶುಷ್ಕ ಪ್ರದೇಶಗಳಲ್ಲಿ ಕಂಡು ಬರುತ್ತವೆ.
👉 ನೀರಿನ ನಷ್ಟವನ್ನು ತಗ್ಗಿಸಲು ಎಲೆಗಳು ಮುಳ್ಳಿನ ರೂಪದಲ್ಲಿರುತ್ತವೆ.
👉ಪ್ರಮುಖ ಮರಗಳು - ಕ್ಯಾಕ್ಟಸ್ ಖೈರ್, ಬಬೂಲ್ ಮತ್ತು ಕಿಕರ್.
👉 ಈ ಅರಣ್ಯಗಳು ರಾಜಸ್ಥಾನ ಪಂಜಾಬ್ ಹರಿಯಾಣ ಪಶ್ಚಿಮ ಘಟ್ಟಗಳ ಪೂರ್ವ ಇಳಿಜಾರು ಮತ್ತು ಗುಜರಾತ್
ನಲ್ಲಿ ಕಂಡುಬರುತ್ತದೆ.
ಪರ್ವತ ಸಸ್ಯವರ್ಗ
👉 ಪರ್ವತ ಎತ್ತರದ ವ್ಯತ್ಯಾಸದಿಂದಾಗಿ ಬೇರೆ ಬೇರೆ ಎತ್ತರಗಳಲ್ಲಿ ವಿವಿಧ ಜಾತಿಯ ಸಸ್ಯವರ್ಗ
ಕಂಡುಬರುತ್ತವೆ.
👉 1500-2500 ಮೀಟರ್ ಎತ್ತರದಲ್ಲಿ ಬಹುತೇಕ ಮರಗಳು ಕೊನಿಕಲ್ ಆಕಾರದಲ್ಲಿ
ಇರುತ್ತವೆ.
👉 ಪ್ರಮುಖ ಮರಗಳು - ಚಿರ್, ಫೈನ್ ಮತ್ತು ದಿಯೋಧರ್.
ಮ್ಯಾಂಗ್ರೋವ್ ಅರಣ್ಯಗಳು
👉 ಈ ಕಾಡುಗಳಲ್ಲಿರುವ ಮರಗಳು ಉಪ್ಪು ನೀರಿನಲ್ಲಿ ಬದುಕಬಲ್ಲವು.
👉 ಇವುಗಳು ಪಶ್ಚಿಮ ಬಂಗಾಳದ ಸುಂದರ್ ಬನ್ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ
ಕಂಡು ಬರುತ್ತವೆ.
👉 ಪ್ರಮುಖ ಮರ - ಸುಂದರಿ (ಸುಂದರ್ ಬನ್).
ಪ್ರಾಣಿವರ್ಗ
👉 ಹುಲಿ - ನಮ್ಮ ರಾಷ್ಟ್ರೀಯ ಪ್ರಾಣಿ ಭಾರತದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ.
👉 ಏಷ್ಯಾದ ಸಿಂಹ - ಗಿರ್ ಕಾಡು (ಗುಜರಾತ).
👉 ಆನೆ ಮತ್ತು ಒಂದು ಕೊಂಬಿನ ಘೇಂಡಾ ಮೃಗ - ಆಸ್ಸಾಂ.
👉 ಆನೆಗಳು - ಕರ್ನಾಟಕ ಮತ್ತು ಕೇರಳ.
👉 ಒಂಟೆ ಮತ್ತು ಕಾಡುಕತ್ತೆ - ಮರಭೂಮಿ ರನ್ ಆಫ್ ಕಛ್.
👉 ನವಿಲು - ನಮ್ಮ ರಾಷ್ಟ್ರೀಯ ಪಕ್ಷಿ.
ವಲಸೆ ಹಕ್ಕಿಗಳು
👉 ಕೆಲವೊಂದು ಪಕ್ಷಿಗಳು ಪ್ರತಿ ವರ್ಷ ಚಳಿಗಾಲದಲ್ಲಿ ನಮ್ಮ ದೇಶಕ್ಕೆ ವಲಸೆ
ಬರುತ್ತವೆ.
👉 ತಿಂಗಳು - ಡಿಸೆಂಬರ್ ನಿಂದ ಮಾರ್ಚ್ ವರೆಗೂ ಕಂಡು ಬರುತ್ತವೆ.
👉 ಪೆಲಿಕನ್, ಸೈಬೀರಿಯನ್ ಕ್ರೇನ್, ಸ್ಟಾರ್ಕ್, ಪ್ಲೇಮಿಂಗೋ, ಪಿನ್ ಟ್ಟೆಲ್, ಬಾತುಕೋಳಿ, ಕರ್ಲಿವ್.