ಸಂಗ್ರಹಿಸುವುದರಿಂದ ಹಿಡಿದು ಬೆಳೆಯುವ ಆಹಾರದ ವರೆಗೆ
ಆಹಾರದ ವೈವಿಧ್ಯತೆಗಳು
👉 ವಿಭಿನ್ನ ಸಸ್ಯಗಳು ವೈವಿಧ್ಯಮಯವಾದ ಹವಾಮಾನದಲ್ಲಿ ಬೆಳೆಯುತ್ತವೆ.
👉 ವಿಭಿನ್ನ ಪ್ರಾಣಿಗಳು ವಿಭಿನ್ನ ಪರಿಸರದಲ್ಲಿ ಬೆಳೆಯುತ್ತವೆ.
ಕೃಷಿ ಮತ್ತು ಪ್ರಾಣಿಗಳ ಹಿಂಡಿನ ಆರಂಭ
👉 ಮೊದಲು ಸಾಕಾಣಿಕೆ ಮಾಡಲಾದ ಪ್ರಾಣಿ - "ನಾಯಿ" (ನಾಯಿಯ ಕ್ರೂರವಾದ ಪೂರ್ವಜ).
👉 ನಂತರ ಕುರಿ, ಮೇಕೆ, ಧನಕರು ಮತ್ತು ಹಂದಿಯನ್ನು ಸಾಕಲು ಪ್ರಾರಂಭಿಸಿದರು.
ಪ್ರಾಣಿಗಳನ್ನು ಪಳಗಿಸುವಿಕೆ (Domestication)
👉 ಕೃಷಿಯ ಜೊತೆಗೆ ಪ್ರಾಣಿಗಳನ್ನು ಸಾಕಣೆ ಮಾಡಲು ಪ್ರಾರಂಭಿಸಿದರು.
👉 ಈ ಪಳಗಿಸುವ ಪ್ರಕ್ರಿಯೆ ಸುಮಾರು 12000 ವರ್ಷಗಳ ಹಿಂದೆ ಪ್ರಾರಂಭವಾಯಿತು.
👉 ಕೃಷಿಯಲ್ಲಿ ಮೊದಲು ಬೆಳೆಯುಲಾದ ಬೆಳೆಗಳು - ಗೋಧಿ ಮತ್ತು ಬಾರ್ಲಿ
👉 ಕೃಷಿಯ ಜೊತೆಗೆ ಮೊದಲು ಸಾಕಾಣಿಕೆ ಮಾಡಲಾದ ಪ್ರಾಣಿಗಳು - ಕುರಿ ಮತ್ತು ಮೇಕೆ
ಹೊಸ ಜೀವನ ವಿಧಾನ
👉 ಆಹಾರ ಮತ್ತು ಬೀಜ ಎರಡಕ್ಕೂ ಧಾನ್ಯವನ್ನು ಸಂಗ್ರಹಿಸಬೇಕಾಗಿರುವುದರಿಂದ, ಜನರು ಅದನ್ನು ಸಂಗ್ರಹಿಸುವ ಮಾರ್ಗಗಳ ಬಗ್ಗೆ ಯೋಚಿಸಬೇಕಾಗಿತ್ತು.
👉 ಅನೇಕ ಪ್ರದೇಶಗಳಲ್ಲಿ, ಅವರು ದೊಡ್ಡ ಮಣ್ಣಿನ ಮಡಕೆಗಳನ್ನು ಮಾಡಲು ಪ್ರಾರಂಭಿಸಿದರು, ಅಥವಾ ಬುಟ್ಟಿಗಳನ್ನು ನೇಯ್ದರು ಅಥವಾ ನೆಲದಲ್ಲಿ ಹೊಂಡಗಳನ್ನು ಅಗೆಯುತ್ತಾರೆ.
👉 ಬೇಟೆಗಾರ-ಸಂಗ್ರಹಕಾರರು ಮಡಕೆಗಳನ್ನು ತಯಾರಿಸಿ ಬಳಸುತ್ತಿದ್ದರು
ಮೊದಲ ರೈತರು ಮತ್ತು ದನಗಾಹಿಗಳ ಬಗ್ಗೆ ಕಂಡುಹಿಡಿಯುವುದು
👉 ಮೊದಲು ರೈತರು ಮತ್ತು ದನಗಾಹಿಗಳು ನವಶಿಲಾಯುಗದ ತಾಣಗಳಲ್ಲಿ ಕಂಡು ಬರುತ್ತಾರೆ.
👉 ನವಶಿಲಾಯುಗದ ತಾಣಗಳಲ್ಲಿ ಸಸ್ಯಗಳು ಮತ್ತು ಪ್ರಾಣಿಗಳ ಮೂಳೆಗಳು ಹಾಗೂ ಸುಟ್ಟ ಧಾನ್ಯದ ಅವಶೇಷಗಳು ದೊರೆತಿವೆ.
ಬೆಳೆಕಾಳುಗಳು ಮತ್ತು ಸಾಕು ಪ್ರಾಣಿಗಳ ಎಲುಬುಗಳ ಆಧಾರ ದೊರೆತ ಸ್ಥಳಗಳು
ಕಾಳುಗಳು ಮತ್ತು ಎಲುಬುಗಳು |
ಸ್ಥಳಗಳು |
|
ಗೋಧಿ, ಬಾರ್ಲಿ, ಕುರಿ, ಮೇಕೆ, ಹಸು |
ಮೆಗರ್
ಘರ್ (ಪ್ರಸ್ತುತ - ಪಾಕಿಸ್ತಾನ್) |
|
ಭತ್ತ |
ಕೊಲಡ್ಹಿವಾ
(ಪ್ರಸ್ತುತ - ಉತ್ತರಪ್ರದೇಶ) |
|
ಭತ್ತ, ಗೋವು |
ಮೆಹಾಗಾರ
(ಪ್ರಸ್ತುತ - ಉತ್ತರಪ್ರದೇಶ) |
|
ಗೋಧಿ
ಮತ್ತು ಕಾಳುಗಳು (ಲೆಂಟಿಲ್) |
ಗಫ್
ಕ್ರಾಲ್ (ಪ್ರಸ್ತುತ - ಜಮ್ಮುಕಾಶ್ಮೀರ) |
|
ಗೋಧಿ, ಲೆಂಟಿಲ್, ನಾಯಿ,ಗೋವು, ಕುರಿ, ಮೇಕೆ, ಎಮ್ಮೆ |
ಬುರ್ಜ್
ಹೋಮ್ (ಪ್ರಸ್ತುತ - ಕಾಶ್ಮೀರ್) |
|
ಗೋಧಿ, ಹಸಿರು ಕಡಲೆ, ಬಾರ್ಲಿ, ಎಮ್ಮೆ,
ಎತ್ತು |
ಚಿರಾಂಡ್
(ಪ್ರಸ್ತುತ - ಬಿಹಾರ) |
|
ರಾಗಿ, ಗೋವು, ಕುರಿ, ಮೇಕೆ, ಹಂದಿ |
ಹಲ್ಲುರ
(ಪ್ರಸ್ತುತ - ಆಂಧ್ರಪ್ರದೇಶ) |
ನೆಲೆಸಿದ ಜೀವನದ ಕಡೆಗೆ
👉 ಪುರಾತತ್ವಶಾಸ್ತ್ರಜ್ಞರು ಕೆಲವು ಸ್ಥಳಗಳಲ್ಲಿ ಗುಡಿಸಲುಗಳು ಅಥವಾ ಮನೆಗಳ ಕುರುಹುಗಳನ್ನು ಕಂಡು ಹಿಡಿದಿದ್ದಾರೆ.
ಉದಾ- ಬುರ್ಜಾಹೋಮ್‌ನಲ್ಲಿ (ಇಂದಿನ ಕಾಶ್ಮೀರದಲ್ಲಿ) ಜನರು ಪಿಟ್-ಹೌಸ್‌ಗಳನ್ನು ನಿರ್ಮಿಸಿದರು. ಅದನ್ನು ನೆಲದಲ್ಲಿ ಅಗೆದು, ಮೆಟ್ಟಿಲುಗಳನ್ನು ಹಾಕಿದರು.
👉 ಪುರಾತತ್ತ್ವಜ್ಞರು ಗುಡಿಸಲುಗಳ ಒಳಗೆ ಮತ್ತು ಹೊರಗೆ ಅಡುಗೆ ಒಲೆಗಳನ್ನು ಕಂಡು ಹಿಡಿದಿದ್ದಾರೆ. ಇದು ಹವಾಮಾನವನ್ನು ಅವಲಂಬಿಸಿ ಜನರು ಒಳಾಂಗಣ ಅಥವಾ ಹೊರಾಂಗಣದಲ್ಲಿ ಆಹಾರವನ್ನು ಬೇಯಿಸಬಹುದು ಎಂದು ಸೂಚಿಸುತ್ತದೆ.
👉 ಅನೇಕ ಸ್ಥಳಗಳಿಂದ ಕಲ್ಲಿನ ಉಪಕರಣಗಳು ಕಂಡುಬಂದಿವೆ.
👉 ಇವುಗಳಲ್ಲಿ ಉತ್ತಮವಾದ ಕತ್ತರಿಸುವ ತುದಿಯನ್ನು ನೀಡಲು ಪಾಲಿಶ್ ಮಾಡಿದ ಉಪಕರಣಗಳು ಮತ್ತು ಧಾನ್ಯ ಮತ್ತು ಇತರ ಸಸ್ಯ ಉತ್ಪನ್ನಗಳನ್ನು ರುಬ್ಬಲು ಬಳಸುವ ಗಾರೆಗಳು ಸೇರಿವೆ.
👉 ಹಲವು ಬಗೆಯ ಮಣ್ಣಿನ ಮಡಕೆಗಳೂ ಸಿಕ್ಕಿವೆ. ಇವುಗಳನ್ನು ಕೆಲವೊಮ್ಮೆ ಅಲಂಕಾರಕ್ಕಾಗಿ ಮತ್ತು ವಸ್ತುಗಳನ್ನು ಸಂಗ್ರಹಿಸಲು ಹಾಗೂ ಆಹಾರವನ್ನು ತಯಾರಿಸಲು ಬಳಸಿರಬಹುದು.
👉 ಅವರು ಬಟ್ಟೆಯನ್ನು ನೇಯಲು ಪ್ರಾರಂಭಿಸಿದರು
ಮೆಹರ್ ಘರ್
👉 ಬೊಲಾನ್ ಪಾಸ್ ಹತ್ತಿರವಿದೆ. ಫಲವತ್ತತೆಯ ಮೈದಾನವನ್ನು ಹೊಂದಿದೆ. ಇರಾನ್ ಸಂಪರ್ಕಿಸಲು ಪ್ರಮುಖ ದಾರಿಯಾಗಿದೆ.
👉 ಇಲ್ಲಿ ಪುರುಷರು ಮತ್ತು ಹಿಳೆಯರು ಇಬ್ಬರು ಬಾರ್ಲಿ ಮತ್ತು ಗೊಧಿಯ ಕೃಷಿಯನ್ನು ಮಾಡಿರುವುದು ತಿಳಿದು ಬಂದಿದೆ.
👉 ಈ ಪ್ರದೇಶದಲ್ಲಿ ಮೊದಲ ಬಾರಿ ಕುರಿ ಮತ್ತು ಮೇಕೆಯನ್ನು ಸಾಕಿದರು.
👉 ಇಲ್ಲಿ ಜಿಂಕೆ, ಹಂದಿ, ಹಸು, ಕುರಿ ಮತ್ತು ಮೇಕೆಯ ಎಲುಬುಗಳು ಕಂಡು ಬಂದಿವೆ.
👉 ಇಲ್ಲಿ ಚೌಕ ಮತ್ತು ಆಯತಾಕಾರದ ಮನೆಗಳ ಅವಶೇಷಗಳು ದೊರೆತಿವೆ.
👉 ಎಲ್ಲಾ ಮನೆಗಳು 4 ಅಥವಾ ಅದಕ್ಕಿಂತ ಹೆಚ್ಚಿನ ಕಂಪಾರ್ಟ್ ಮೆಂಟ್ ಹೊಂದಿದ್ದು , ಕೆಲವೊಂದು ಕಾಳು ಶೇಖರಣೆಗೆ ಬಳಸಲಾಗುತ್ತಿತ್ತು.
👉 ಸತ್ತ ಮೇಲೆ ಇನ್ನೊಂದು ಜೀವನವಿದೆ ಎಂದು ಇಲ್ಲಿನ ಜನರು ನಂಬಿದ್ದರು.
👉 ಇಲ್ಲಿ ಕೇಲವು ಸಮಾಧಿಗಳು ಕಂಡು ಬರುತ್ತವೆ.
👉 ಇಲ್ಲಿ ಸತ್ತ ವ್ಯಕ್ತಿಯ ಮುಂಧಿನ ಪ್ರಪಂಚದ ಜೀವನಕ್ಕಾಗಿ ಮೇಕೆಯನ್ನು ಅವನ ಜೊತೆ ಹುಳುವುದು ಕಂಡು ಬಂದಿದೆ.
ಡೌಜಲಿ ಹೇಡಿಂಗ್
👉 ಇದು ಬ್ರಹ್ಮಪುತ್ರ ಕಣಿವೆಯು ಬೆಟ್ಟಗಳಲ್ಲಿ ಕಂಡು ಬರುತ್ತವೆ. ಇದು ಚೀನಾ ಮತ್ತು ಮಯನ್ಮಾರ್ ಹೋಗಲು ದಾರಿ ಒದಗಿಸುತ್ತದೆ.
👉 ಇಲ್ಲಿ ವೆಲಾರ್ಟಗ್ ಮತ್ತು ಪೆಸ್ಟಲ್ ಗಳಂತಹ ಶಿಲಾ ಪರಿಕರಗಳು ದೊರೆತಿವೆ.
👉 ಇಲ್ಲಿ ಚೀನಾದಿಂದ ತಂದಿರಬಹುದಾದ " ಜಡೈಟಾ" ಎಂಬ ಶಿಲೆಯು ದೊರೆತಿದೆ.
ಟರ್ಕಿ
👉 "ಕ್ಯಾಟಲ್ ಹುಯುಕ್" ಎಂಬ ನವಶಿಲಾಯುಗದ ಸ್ಥಳ ಟರ್ಕಿಯಲ್ಲಿ ಕಂಡು ಬರುತ್ತದೆ.
ಕೆಲವು ಪ್ರಮುಖ ದಿನಾಂಕಗಳು
1. ಹಳೆ ಶಿಲಾಯುಗ (ಪೆಲಿಯೋಲಿಥಿಕ್) ➠ 12,000 ವರ್ಷಗಳ ಹಿಂದೆ
2. ಪಳಗಿಸುವಿಕೆಯ ಆರಂಭ ➠ ಸುಮಾರು 12,000 ವರ್ಷಗಳ ಹಿಂದೆ
3. ಮೆಹರ್ ಘರ್‌ದಲ್ಲಿ ವಸಾಹತು ಆರಂಭ ➠ ಸುಮಾರು 8000 ವರ್ಷಗಳ ಹಿಂದೆ
4. ನವಶಿಲಾಯುಗ (ನಿಯೋಲಿಥಿಕ್) ➠ ಆರಂಭ 10,000 ವರ್ಷಗಳ ಹಿಂದೆ