ನೈತಿಕತೆಯನ್ನು ಹೊಂದುವುದರ ಪ್ರಾಮುಖ್ಯತೆ - Importance of having morals

 ನೈತಿಕತೆಯನ್ನು ಹೊಂದುವುದರ ಪ್ರಾಮುಖ್ಯತೆ

1. ವಯಕ್ತಿಕ ಮಟ್ಟದಲ್ಲಿ (At Individual Level)

  • ಸಮಗ್ರತೆ (Integrity) : ನೈತಿಕತೆಯು ವ್ಯಕ್ತಿಯಲ್ಲಿ ಸಮಗ್ರತೆಯನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ಹಾಗೂ ಅವನ ಕಾರ್ಯಗಳನ್ನು ಮತ್ತು ಆಲೋಚನೆಗಳಲ್ಲಿ ದೃಡತೆಯನ್ನು ಹೊಂದಲು ಸಹಾಯ ಮಾಡುತ್ತದೆ.

    • ಉದಾಹರಣೆ : ರಜನಿ ಸೆಕ್ರಿ ಸಿಬಲ್‌ ಕೆಡರ್‌ ನಿಂದ ಬಂದವರು. 1992-2000 ರಲ್ಲಿ 3200 ಜೂನಿಯರ್‌ ಬೇಸಿಕ್‌ ಟ್ರೈನಿಂಗ್‌ (ಜೆಬಿಟಿ) ಶಿಕ್ಷಕರ ಫಲಿತಾಂಶಗಳನ್ನು ಬದಲಾಯಿಸಲು ಬಯಸಿದ ರಾಜಕೀಯ ಶಕ್ತಿಗಳು ಲಂಚವನ್ನು ನೀಡಲು ಮುಂದಾದಾಗ ಅವರು ನಿರ್ದಾಕ್ಷಿಣ್ಯದಿಂದ "ಇಲ್ಲ" ಎಂದು ಹೇಳಿದರು.

  • ನ್ಯಾಯೋಚಿತ (Fairness) : ಸರಿಯಾದ ನೈತಿಕತೆಯನ್ನು ಹೊಂದಿರುವ ವ್ಯಕ್ತಿಯು ವೃತ್ತಿಪರ ಮತ್ತು ವಯಕ್ತಿಕ ಕರ್ತವ್ಯಗಳಲ್ಲಿ ನ್ಯಾಯಯುತವಾಗಿ ಇರಲು ಸಹಾಯ ಮಾಡುತ್ತದೆ.

    • ಉದಾಹರಣೆ : ಐಎಎಸ್‌ ಬಿ.ಚಂದ್ರಕಲಾ ರವರು ನ್ಯಾಯಯುತರು ಎಂದೂ ತಿಳಿದು ಬಂದಿದೆ. ಹಾಗೂ ಅವರು ಇತರ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಅಧಿಕಾರವನ್ನು ತಮ್ಮ ವಯಕ್ತಿಕ ಒಳಿತಿಗಾಗಿ ಬಳಸುತ್ತಿರುವುದನ್ನು ಮತ್ತು ಅವರ ಕರ್ತವ್ಯಗಳನ್ನು ಪೊರೈಸದಿದ್ದರೆ ಬಯಲು ಮಾಡುತ್ತಾರೆ.

  • ಪ್ರಾಮಾಣಿಕತೆ (Honesty) : ಪ್ರಾಮಾಣಿಕತೆ ಮತ್ತು ಸತ್ಯನಿಷ್ಠೆಯು ನೈತಿಕತೆಯಲ್ಲಿ ಕಂಡುಬರುವ ಸದ್ಗುಣಗಳು ; ಒಬ್ಬ ವ್ಯಕ್ತಿಯು ಸಮಾಜದಲ್ಲಿ ಗೌರವಾನ್ವಿತನಾಗಿ ತನ್ನನ್ನು ತಾನೂ ಸ್ಥಾಪಿಸಿಕೊಳ್ಳಲು ಸಹಾಯ ಮಾಡುತ್ತವೆ.

    • ಉದಾಹರಣೆ : ಅಶೋಕ ಖೆಮ್ಕಾ ರವರು ಅನೇಕ ರಾಜಕಾರಣಗಳ ಭೂ ಹಗರಣಗಳನ್ನು ಬಹಿರಂಗಪಡಿಸಿದ ಪ್ರಾಮಾಣಿಕ ಅಧಿಕಾರಿ ಎಂದೂ ಹೆಸರುವಾಸಿಯಾಗಿದ್ದಾರೆ, ಬೆದರಿಕೆಗಳ ನಡುವೆಯೂ ಅವರು ತಮ್ಮ ಪ್ರಾಮಾಣಿಕ ನಿಲುವನ್ನು ಉಳಿಸಿಕೊಂಡರು.

  • ಆತ್ಮ ವಿಶ್ವಾಸ (Self confidence) : ನೈತಿಕತೆಯು ವ್ಯಕ್ತಿಗೆ ಮಾರ್ಗದರ್ಶಿ ನಕ್ಷೆಯಂತೆ ಕಾರ್ಯ ನಿರ್ವಹಿಸುತ್ತದೆ. ಮತ್ತು ಜೀವನದಲ್ಲಿ ಅವನ/ಆಕೆಯ ಆತ್ಮ ವಿಶ್ವಾಸವನ್ನು ಸುಧಾರಿಸಲು ಮತ್ತು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    • ಉದಾಹರಣೆ : ಕೃಷ್ಣ ಗೋಪಾಲ್‌ ತಿವಾರಿ ಅವರು ಭಾರತದ ಮೊದಲ ದೃಷ್ಟಿದೋಷವುಳ್ಳ ಜಿಲ್ಲಾಧಿಕಾರಿ. ಮತ್ತು ಈಗ ಮಧ್ಯಪ್ರದೇಶದ ಉಮಾರಿಯಾ ಜಿಲ್ಲಾಧಿಕಾರಿಯಾಗಿದ್ದಾರೆ. ಈ ಐಎಎಸ್‌ ಅಧಿಕಾರಿಯು ಒಂದು ಮಾದರಿಯಾಗಿದ್ದಾರೆ. ಮತ್ತು ದೇಶದ ಸಾವಿರಾರು ಅಂಗವಿಕಲರಿಗೆ ಪ್ರೇರಣೆ ನೀಡುತ್ತಾರೆ.

  • ಪ್ರಾಮಾಣಿಕತೆ (Probity) : ಇದು ಪ್ರಬಲ ಉದ್ದೇಶಗಳನ್ನು ಕಾಪಾಡಿಕೊಳ್ಳಲು ಮತ್ತು ಆಂತರಿಕ ಮೌಲ್ಯ ವ್ಯವಸ್ಥೆಯನ್ನು ಅನುಸರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಸಮಾಜಕ್ಕೆ ಒಳಿತಾಗುತ್ತದೆ.

    • ಉದಾಹರಣೆ : ಮಹಿಳಾ ಐಎಎಸ್‌ ಅಧಿಕಾರಿ ಪೂನಂ ಮಲಕೊಂಡಯ್ಯ ಹಲವಾರು ಬಾರಿ ವರ್ಗಾವಣೆಗೊಂಡಿದ್ದರು, ಭ್ರಷ್ಟ ರಾಜಕಾರಣಿಗಳು ಮತ್ತು ಉದ್ಯಮಿಗಳ ವಿರುದ್ಧ ಹೋರಾಟವನ್ನು ಮುಂದುವರೆಸಿದ್ದಾರೆ.

  • ಸಹಕಾರ (Co-operation) : ಇತರರಿಗೆ ಸಹಾಯ ಮಾಡುವ ಹಾಗೂ  ರಾಷ್ಟ್ರ ಮತ್ತು ಸಮಾಜಕ್ಕೆ ಸಹಾಯ ಮಾಡುವ ಸದ್ಗುಣವು ನೈತಿಕ ಅವಶ್ಯಕತೆಯಿಂದಲೂ ಸಹ ಸಕ್ರಿಯಗೊಂಡಿದೆ.

    • ಉದಾಹರಣೆ : ಐಎಎಸ್‌ ಅಧಿಕಾರಿ ಪಿ.ನರಹರಿ (ಸಂಸದ) ಸಮಾಜದಲ್ಲಿ ಸಮಾನತೆಯನ್ನು ಸಾಧಿಸಲು, ವಿಕಲಚೇತನರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ.

  • ನಿಸ್ವಾರ್ಥತೆ (Selfessness) : ನೈತಿಕತೆಯು ಒಬ್ಬ ವ್ಯಕ್ತಿಯು ತನ್ನನ್ನು ಮೀರಿ ಯೋಚಿಸಲು ಮತ್ತು ತನ್ನ ಸುತ್ತಲಿನ ಇತರರ ಅಗತ್ಯಗಳ ಬಗ್ಗೆ ಯೋಚಿಸಲು ಅನುವು ಮಾಡಿಕೊಡುತ್ತದೆ.

    • ಉದಾಹರಣೆ : ಸರ್ಕಾರದ ಅನುದಾನದ ಕೊರತೆಯ ನಡುವೆಯೂ ರಸ್ತೆಗಳನ್ನು ನಿರ್ಮಿಸಿದ ಐಎಎಸ್‌ ಅಧಿಕಾರಿ ಆರ್ಮ್‌ಸ್ಟ್ರಾಂಗ್‌ ಪಾಮೆ, ಅದಕ್ಕಾಗಿ ತಮ್ಮ ಜೇಬಿನಿಂದ ಪ್ರಧಾನ ಮೊತ್ತವನ್ನು ದೇಣಿಗೆ ನೀಡಿದರು.

  • ಸಹಾನೂಭೂತಿ (Empathy) : ಒಬ್ಬ ವ್ಯಕ್ತಿಯ ಪರಿಸ್ಥಿಯನ್ನು ಊಹಿಸಿಕೊಂಡು ಅವನ ಭಾವನೆಗಳನ್ನು ಅಥವಾ ಅನುಭವಗಳನ್ನು ಹಂಚಿಕೊಳ್ಳುವ ಸಾಮರ್ಥ್ಯ.

    • ಉದಾಹರಣೆ : ಅಂಗವಿಕಲ ವ್ಯಕ್ತಿಯೊಬ್ಬರು ಕುರ್ಚಿಯ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದಿದ್ದಾಗ, ಐಎಎಸ್‌ ಅಧಿಕಾರಿ ಕೌಸ್ತುಭ್‌ ದಿವೇಗಾಂವ್ಕರ್‌ ಅವರ ಜೊತೆ ನೆಲದ ಮೇಲೆ ಕುಳಿತರು.

2. ಸಾಮಾಜಿಕ ಮಟ್ಟದಲ್ಲಿ (At Social Level)

  • ಸಾಮರಸ್ಯ  (Harmony) : ಒಂದು ಸಮಾಜವು ನೈತಿಕತೆ ಮತ್ತು ಸದ್ಗುಣಗಳನ್ನು ಹೊಂದಿರುವುದರಿಂದ ಸಾಮರಸ್ಯದಿಂದ ಕೊಡಿರುತ್ತದೆ. 
    • ಉದಾಹರಣೆ : ಭಾರತದಲ್ಲಿನ ವೈವಿಧ್ಯತೆಯ ಗೌರವ ಭಾರತವನ್ನು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ ಎಂದು ಕರೆಯಲು ಅನುವು ಮಾಡಿ ಕೊಟ್ಟದೆ.
  • ನಂಬಿಕೆ (Trust) : ಜನರು ಜೀವನದಲ್ಲಿ ನೈತಿಕತೆಯ ಮೂಲಕ ಬದುಕಲು ಆರಿಸಿಕೊಂಡಾಗ ಮತ್ತು ಯಾರಾದರೂ ಮತ್ತೊಬ್ಬರಿಗೆ ಯಾವುದೇ ಅನಗತ್ಯ ಹಾನಿಯನ್ನುಂಟು ಮಾಡದಿದ್ದಾಗ ಸಾಮಜಿಕ ನಂಬಿಕೆಯ ಪ್ರಯೋಜನವನ್ನು ಪಡೆಯಬಹುದು.
    • ಉದಾಹರಣೆ : ಶನಿ ಶಿಂಗಾಣಾಪುರವನ್ನು ಸುರಕ್ಷಿತ ಭಾರತೀಯ ಗ್ರಾಮವೆಂದು ಕರೆಯುತ್ತಾರೆ. ಗ್ರಾಮದಲ್ಲಿ ಯಾವುದೇ ಮನೆಗೆ ಬಾಗಿಲುಗಳಿಲ್ಲ ಎಂಬುದಕ್ಕೆ ಹೆಸರುವಾಸಿಯಾಗಿದೆ.
  • ಭ್ರಾತೃತ್ವ (Brotherhood) : ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನು ಇತರರನ್ನು ಗೌರವಿಸಿ ಮತ್ತು ಇತರರೊಂದಿಗೆ ಯಾವುದೇ ಸಂಘರ್ಷವನ್ನು  ಮಾಡದೇ , ಸಹೋದರತ್ವ ಭಾವನೆಯಿಂದ ಬದುಕುವುದು.
    • ಉದಾಹರಣೆ : ಆಗ್ರಾದಿಂದ 31 ಕಿ.ಮೀ ದಕ್ಷಿಣಕ್ಕೆ  20000 ಸಾವಿರ ಜನಸಂಖ್ಯೆ ಹೊಂದಿರುವ ಸಾಧನ ಗ್ರಾಮ, ಇಲ್ಲಿನ ನಿವಾಸಿಗಳು ಒಟ್ಟಾಗಿ ಬಹಿಷ್ಕಾರದ ಭಯವಿಲ್ಲದೆ ವಿಭಿನ್ನ ನಂಬಿಕೆಗಳನ್ನು ಪ್ರತಿಪಾದಿಸುತ್ತಾರೆ ಮತ್ತು ಎಲ್ಲರೂ ಸಾಮರಸ್ಯದಿಂದ ಒಟ್ಟಿಗೆ ವಾಸಿಸುತ್ತಾರೆ.
  • ತಂಡದ ಕೆಲಸ (Team work) : ನೈತಿಕ ಸಮಾಜದ ನಿವಾಸಿಗಳು ಪರಸ್ಪರ ಸಹಾಯ ಮಾಡುತ್ತಾರೆ. ಮತ್ತು ಪರಸ್ಪರ ಸಮಸ್ಯೆಗಳು ಮತ್ತು ಘರ್ಷಣೆಗಳನ್ನು  ಪರಿಹರಿಸುವ ತಂಡವಾಗಿ ಕೆಲಸ ಮಾಡುತ್ತಾರೆ. ಅವರು ಯಾವುದೇ ಬಾಹ್ಯ ಸವಾಲಿನ ವಿರುದ್ಧ ಒಂದಾಗಿ ಹೋರಾಡುತ್ತಾರೆ.
    • ಉದಾಹರಣೆ : ಮೇಘಾಲಯದ ಮಾವ್ಲಿನ್ನಾಂಗ್ ಗ್ರಾಮದ ನಿವಾಸಿಗಳು ನೀರನ್ನು ಮರುಬಳಕೆ ಮಾಡುತ್ತಾರೆ. ಧೂಮಪಾನ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದಾರೆ. ಮತ್ತು ಪ್ರತಿ ಮನೆಯೊಳಗೆ ಸ್ವಚ್ಛ ಶೌಚಾಲಯಗಳನ್ನು ನಿರ್ವಹಿಸಿದ್ದಾರೆ, ಆದ್ದರಿಂದ ಇದು ಏಷ್ಯಾದ ಸ್ವಚ್ಛ  ಗ್ರಾಮವಾಗಿದೆ.
  • ಸಾಮಾಜಿಕ ಬಂಡವಾಳ (Social capital) : ಇದು ಒಂದು ನಿರ್ಧಿಷ್ಟ ಸಮಾಜದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಜನರ ನಡುವಿನ ಸಂಬಂಧಗಳ ಜಾಲವಾಗಿದೆ. ಆ ಸಮಾಜವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.
    • ಉದಾಹರಣೆ : ಭೂತಾನ್‌ ನಲ್ಲಿ ಎಲ್ಲಾ ನಿವಾಸಿಗಳಿಗೆ ಪರಿಸರದ ಸುರಕ್ಷತೆಯು ರಾಷ್ಟ್ರೀಯ ಅಭಿವೃದ್ದಿಯ ಪ್ರಾಥಮಿಕ ಉದ್ದೇಶ ಮತ್ತು ಆರಂಭಿಕ ಹಂತವಾಗಿದೆ.
  • ನ್ಯಾಯಯುತ ಸಮಾಜ (Just Society) : ನೈತಿಕತೆಯು ಒಂದು ನಿರ್ದಿಷ್ಟ ಸಮಾಜದಲ್ಲಿ ಚಾಲ್ತಿಯಲ್ಲಿರುವ ನ್ಯಾಯದ ಪ್ರಜ್ಞೆಯಿಂದ ಹುಟ್ಟಿಕೊಂಡಿದೆ. ಅಂತಹ ಸಮಾಜದಲ್ಲಿ ತಾರತಮ್ಯವು ಇರುವುದಿಲ್ಲ ಅಥವಾ ತೀರಾ ಕಡಿಮೆ. 
    • ಉದಾಹರಣೆ : ಭಾರತೀಯ ಸಂವಿಧಾನವು ಎಲ್ಲರಿಗೂ ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಹಕ್ಕುಗಳನ್ನು ಹೊಂದಿರುವ ನ್ಯಾಯಯುತವಾದ ಸಮಾಜವನ್ನು ಪ್ರತಿಪಾದಿಸುತ್ತದೆ.
  • ಕೋಮು ಸೌಹಾರ್ದತೆ (Communal hormony): ನೈತಿಕ ಸಮಾಜಗಳು ಪರಸ್ಪರ ಸಹಕಾರ ಮತ್ತು ಗೌರವದಿಂದ ವರ್ತಿಸುತ್ತವೆ. ಹೀಗಾಗಿ ಅಸ್ತಿತ್ವದಲ್ಲಿರಬಹುದಾದ ಯಾವುದೇ ಕೋಮು ಉದ್ವಿಗ್ನತೆಯನ್ನು ಕಡಿಮೆ ಮಾಡುತ್ತದೆ.
    • ಉದಾಹರಣೆ : ಸಿಖ್‌ ಮತ್ತು ಹಿಂದೂ ಸಮುದಾಯಗಳ ಜನರು ಲೂಧಿಯಾನ ಬಳಿಯ ನಥೋವಾಲ್‌ ಗ್ರಾಮದಲ್ಲಿ ಹಳೆಯ ಮಸೀದಿಯನ್ನು ದುರಸ್ತಿ ಮಾಡಲು ಸಹಾಯ ಮಾಡಿದರು. ಮತ್ತು ದುರಸ್ತಿ ವೆಚ್ಚದ 65 ಪ್ರತಿಶತಕ್ಕಿಂತ ಹೆಚ್ಚು ಅವರೆ ನೋಡಿಕೊಂಡರು.

3. ಸಾಂಸ್ಥಿಕ ಮಟ್ಟದಲ್ಲಿ (At Organizational Level)

  • ಪಾರದರ್ಶಕತೆ (Transparency) : ಅಧಿಕಾರಿಗಳು ಕಟ್ಟುನಿಟ್ಟಾದ ನೀತಿಸಂಹಿತೆಯನ್ನು ನಿರ್ವಹಿಸಿದಾಗ, ಸಂಸ್ಥೆಗಳು ಮರೆಮಾಡಲು ಏನನ್ನು ಹೊಂದಿರುವುದಿಲ್ಲ ಮತ್ತು ಪಾರದರ್ಶಕವಾಗಿರುತ್ತವೆ ಮತ್ತು ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿರುತ್ತವೆ.
    • ಉದಾಹರಣೆ : ಭಾರತದ ಭ್ರಷ್ಟಾಚಾರ ಸಮೀಕ್ಷೆಯು ಒಡಿಶಾವನ್ನು ಭಾರತದಲ್ಲಿ ಅತ್ಯಂತ ಕಡಿಮೆ ಭ್ರಷ್ಟ ಮತ್ತು ಅತ್ಯಂತ ಪಾರದರ್ಶಕ ರಾಜ್ಯ ಎಂದು ಪ್ರಮಾಣೀಕರಿಸಿದೆ.
  • ದಕ್ಷತೆ (Efficiency) : ನೈತಿಕ ಸಂಸ್ಥೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಮಾರ್ಗದರ್ಶಿ ಸೂತ್ರಗಳಾಗಿರುವುದರಿಂದ ಜನರು ತಮ್ಮ ವೃತ್ತಿಪರ ಜವಾಬ್ದಾರಿಗಳಿಗೆ ಮೋಸ ಮಾಡದ ಕಾರಣ ಕೆಲಸದಲ್ಲಿ ದಕ್ಷತೆಯು ಅಧಿಕವಾಗಿರುತ್ತದೆ.
    • ಉದಾಹರಣೆ : ಡೆನ್ಮಾರ್ಕ್‌ ಅಧಿಕ ಭ್ರಷ್ಟ ರಾಷ್ಟ್ರವಾಗಿದೆ ಮತ್ತು ಸುಸ್ಥಿರತೆಯ ನಾಯಕರಲ್ಲಿ ಒಂದಾಗಿದೆ. ಕಟ್ಟಡಗಳಲ್ಲಿನ ಶಕ್ತಿಯ ಬಳಕೆಯನ್ನು ಕಳೆದ 40 ಸಾರ್ವಜನಿಕ ವರ್ಷಗಳಲ್ಲಿ ಪ್ರತಿ ಚದರ ಮೀಟರ್‌ ಗೆ 45% ರಷ್ಟು ಕಡಿಮೆ ಮಾಡಲಾಗಿದೆ.
  • ನಂಬಿಕೆ (Faith) : ಸಂಸ್ಥೆಗಳಲ್ಲಿ ಸಾರ್ವಜನಿಕ ನಂಬಿಕೆಯು ಅವರ ನೈತಿಕತೆಯ ಫಲಿತಾಂಶವಾಗಿದೆ. ಮತ್ತು ಅವರು ಸಾಮಾಜಿಕ ಮತ್ತು ಆರ್ಥಿಕ ಆದೇಶಗಳೊಂದಿಗೆ ಕೆಲಸ ಮಾಡುವುದನ್ನು ಖಾತ್ರಿ ಪಡಿಸುವ ತತ್ವಗಳನ್ನು ಹೊಂದಿರುತ್ತಾರೆ.
    • ಉದಾಹರಣೆ : ಏಳು ದಶಕಗಳ ನಂತರವೂ ಭಾರತದ ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆಗಳನ್ನು ನಡೆಸುತ್ತಿದೆ. ಜನರು ಮತ್ತು ರಾಜಕೀಯ ಪಕ್ಷಗಳು ಚುನಾವಣೆ ನಡೆಸುವ ಚುನಾವಣಾ ಆಯೋಗದ ಮೇಲೆ ಅಪಾರ ನಂಬಿಕೆ ಇಟ್ಟಿವೆ.
  • ಜವಾಬ್ದಾರಿ ಮತ್ತು ಹೊಣೆಗಾರಿಕೆ (Responsible and Accountable) : ನೈತಿಕ ಸಂಸ್ಥೆಯು ಅದರ ಕ್ರಿಯೆಗಳಿಗೆ ಹೊಣೆಗಾರಿಕೆಯನ್ನು ಹೊಂದಿರುತ್ತದೆ ಮತ್ತು ಅದರ ಫಲಿತಾಂಶಗಳು ಏನೇ ಆಗಿರಲಿ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ.
    • ಉದಾಹರಣೆ : ಭಾರತದ ಅತ್ಯಂತ ಗೌರವಾನ್ವಿತ ವ್ಯಾಪಾರ ಸಂಸ್ಥೆಯಾದ ಟಾಟಾ ಗ್ರೂಪ್‌, ಇದು ಬ್ರಿಟನ್‌ ನ "ಒನ್‌ ವರ್ಲ್ಡ್‌ ಟ್ರಸ್ಟ್‌" ನಿಂದ ವಿಶ್ವದ ಮೂರನೇ ಜವಾಬ್ದಾರಿಯುತ ಮತ್ತು ಪಾರದರ್ಶಕ ಕಂಪನಿಯಾಗಿದೆ. 

=======================================================================================

PDF FILE DETAILS

File Category: Importance of having morals

File Language: Kannada

Published Date: 25.12.2024

File Format Type: PDF

File Size: 605 KB

Total Pages: 3 Pages

Editable text: No

Copy text: No

Download enable: Yes

Print enables: Yes

Quality: High

File Size Reduced: No

Password Protected: No

Pass word Encrypted: No


👉 Strictly For Educational And Knowledge Purpose Only

Download Now: Click Below Download Now Option To Download " Importance of having morals " Notes PDF

Post a Comment (0)
Previous Post Next Post