2. ಆಹಾರದ ಘಟಕಗಳು
✅ ಪೋಷಕಗಳು
👉ಪ್ರತಿಯೊಂದು ಅಡುಗೆಯು ಪ್ರಾಣಿ ಅಥವಾ ಸಸ್ಯಗಳಿಂದ ದೊರೆಯುವ ಒಂದು ಅಥವಾ ಹೆಚ್ಚು ಘಟಕಾಂಶಗಳಿಂದ ಆಗಿರುತ್ತದೆ. ಇದರಲ್ಲಿ ನಮ್ಮ ದೇಹಕ್ಕೆ ಅವಶ್ಯಕವಾದ ಕೆಲವು ಅಂಶಗಳು ಈ ಘಟಕಾಂಶಗಳಲ್ಲಿರುತ್ತವೆ. ಈ ಆಂಶಗಳನ್ನು "ಪೋಷಕಗಳು" ಎಂದು ಕರೆಯುತ್ತಾರೆ.
✅ ನಮ್ಮ ಆಹಾರದಲ್ಲಿರುವ ಪೋಷಕಗಳು :
👉ಕಾರ್ಬೋಹೈಡ್ರೇಟ್ ಗಳು
👉ಪ್ರೋಟೀನ್ ಗಳು
👉ಕೊಬ್ಬು
👉ವಿಟಮಿನ್ ಗಳು
👉ಖನಿಜಗಳು
✅ ಕಾರ್ಬೋಹೈಡ್ರೇಟ್ ನ ವಿಧಗಳು :
👉ಪಿಷ್ಟ
👉ಶರ್ಕರ
✅ಶಕ್ತಿಯನ್ನು ಕೊಡುವ ಆಹಾರ ಪದಾರ್ಥಗಳು ( Energy Giving Foods) :
👉ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬಿನಾಂಶವನ್ನು ಒಳಗೊಂಡಿರುವ ಆಹಾರ ಪದಾರ್ಥಗಳು.
☑ ಕಾರ್ಬೋಹೈಡ್ರೇಟ್ ಇರುವ ಆಹಾರ ಪದಾರ್ಥಗಳು :
👉ಗೋಧಿ, ಅಕ್ಕಿ, ಸಜ್ಜೆ, ಮೆಕ್ಕೆ ಜೋಳ, ಮಾವು, ಕಲ್ಲಂಗಡಿ, ಪಪ್ಪಾಯ, ಕಬ್ಬು, ಆಲೂಗಡ್ಡೆ, ಗೆಣಸು.
☑ ಕೊಬ್ಬನ್ನು ಹೊಂದಿರುವ ಆಹಾರ ಪದಾರ್ಥಗಳು :
✔ಸಸ್ಯ ಮೂಲ :
👉ಸಾಸಿವೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ತೆಂಗಿನ ಎಣ್ಣೆ, ಸೋಯಾಬಿನ್ ಎಣ್ಣೆ,
ಕಡಲೆಕಾಯಿ ಬೀಜ, ಗೋಡಂಬಿ, ಬಾದಾಮಿ, ಎಳ್ಳು.
✔ಪ್ರಾಣಿ ಮೂಲ :
👉ಮಾಂಸ, ಮೀನು, ತುಪ್ಪ, ಹಾಲೂ, ಬೆಣ್ಣೆ, ಕ್ರೀಮ್, ಮೊಟ್ಟೆ.
✅ದೇಹ ನಿರ್ಮಾಣಕಾರಕ ಆಹಾರ ಪದಾರ್ಥಗಳು (Body Building Foods) :
👉ಪ್ರೋಟೀನ್ ಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳು.
☑ ಪ್ರೋಟೀನ್ ಹೊಂದಿರುವ ಆಹಾರ ಪದಾರ್ಥಗಳು :
✔ ಸಸ್ಯ ಮೂಲ :
👉ಹೆಸರುಕಾಳು, ತೊಗರಿ ಬೆಳೆ, ಬೀನ್ಸ್, ಕಡಲೆಕಾಳು, ಬಟಾಣಿ, ಸೋಯಾಬಿನ್
✔ ಪ್ರಾಣಿ ಮೂಲ :
👉ಮಾಂಸ, ಮೀನು, ಪನ್ನೀರ್, ಹಾಲೂ, ಮೊಟ್ಟೆ.
✅ವಿಟಮಿನ್ ಗಳು :
👉ರೋಗಗಳು ಬಾರದಂತೆ ನಮ್ಮ ದೇಹವನ್ನು ರಕ್ಷಿಸಲು ಸಹಾಯ.
👉ನಮ್ಮ ಕಣ್ಣುಗಳು, ಮೂಳೆಗಳು, ಹಲ್ಲುಗಳು ಮತ್ತು ದವಡೆಗಳನ್ನು ಆರೋಗ್ಯವಾಗಿಡಲು
ಸಹಾಯಕ.
✅ಪ್ರಮುಖ ವಿಟಮಿನ್ ಗಳು :
👉ವಿಟಮಿನ್ - ಎ
👉ವಿಟಮಿನ್ - ಬಿ ಕಾಂಪ್ಲೆಕ್ಸ್
👉ವಿಟಮಿನ್ - ಸಿ
👉ವಿಟಮಿನ್ - ಡಿ
👉ವಿಟಮಿನ್ - ಇ
👉ವಿಟಮಿನ್ - ಕೆ
👉ವಿಟಮಿನ್ - ಎ - ಕಣ್ಣು ಮತ್ತು ಚರ್ಮವನ್ನು ಆರೋಗ್ಯವಾಗಿಡುತ್ತದೆ.
👉ವಿಟಮಿನ್ - ಸಿ - ಅನೇಕ ರೋಗಗಳ ವಿರುದ್ದ ಹೋರಾಡಲು ಸಹಾಯಕ.
👉ವಿಟಮಿನ್ - ಡಿ - ಹಲ್ಲುಗಳು ಮತ್ತು ಮೂಳೆಗಳಿಗೆ ಬೇಕಾದ ಕ್ಯಾಲ್ಸಿಯಮ್ ಬಳಸಲು ನಮ್ಮ
ದೇಹಕ್ಕೆ ಸಹಾಯಕ.
☑ ವಿಟಮಿನ್ - ಎ ಇರುವ ಆಹಾರ ಪದಾರ್ಥಗಳು :
👉ಹಾಲು, ಮೀನಿನ ಎಣ್ಣೆ, ಪಪ್ಪಾಯ, ಮಾವು, ಕ್ಯಾರೇಟ್.
☑ ವಿಟಮಿನ್ - ಬಿ ಇರುವ ಆಹಾರ ಪದಾರ್ಥಗಳು :
👉ಗೋಧಿ, ಅಕ್ಕಿ, ಪಿತ್ತಜನಕಾಂಗ (ಯಕೃತ್ತು).
☑ ವಿಟಮಿನ್ - ಸಿ ಇರುವ ಆಹಾರ ಪದಾರ್ಥಗಳು :
👉ಕಿತ್ತಳೆ, ಸೀಬೆಕಾಯಿ, ಹಸಿಮೆನಸಿನ ಕಾಯಿ, ನಿಂಬೆ, ನೆಲ್ಲಿಕಾಯಿ, ಟೋಮೆಟೋ.
☑ ವಿಟಮಿನ್ - ಡಿ ಇರುವ ಆಹಾರ ಪದಾರ್ಥಗಳು :
👉ಹಾಲು, ಬೆಣ್ಣೆ, ಪಿತ್ತಜನಕಾಂಗ (ಯಕೃತ್ತು), ಮೊಟ್ಟೆ, ಮೀನು.
☑ ಖನಿಜಗಳನ್ನು ಹೊಂದಿರುವ ಆಹಾರ ಪದಾರ್ಥಗಳು :
✔ಅಯೋಡಿನ್ ಹೊಂದಿರುವ ಆಹಾರ ಪದಾರ್ಥಗಳು :
👉ಶುಂಠಿ, ಮೀನು, ಬೆಣ್ಣೆ.
✔ ಪಾಸ್ಫರಸ್ ಹೋಂದಿರುವ ಆಹಾರ ಪದಾರ್ಥಗಳು :
👉ಹಾಲು, ಗೋಧಿ, ಅಕ್ಕಿ, ಮೆಣಸಿನ ಕಾಯಿ, ಬಾಳೆ ಹಣ್ಣು.
✔ ಕಬ್ಬಿಣ ಹೊಂದಿರುವ ಆಹಾರ ಪದಾರ್ಥಗಳು :
👉ಸೇಬು, ಪಿತ್ತಜನಕಾಂಗ (ಯಕೃತ್ತು), ಸೊಪ್ಪು.
✔ ಕ್ಯಾಲ್ಸಿಯಮ್ ಹೋಂದಿರುವ ಆಹಾರ ಪದಾರ್ಥಗಳು :
👉 ಹಾಲು, ಮೊಟ್ಟೆ.
ವಿಟಮಿನ್ ಗಳ ಕೊರತೆಯಿಂದ ಬರುವ ರೋಗಗಳು (Deficiency Diseases)
👉 ಸಾರಾಂಶ
- ನಮ್ಮ ಆರೋಗ್ಯದ ಮುಖ್ಯ ಘಟಕಗಳೆಂದರೆ ಕಾರ್ಬೋಹೈಡ್ರೇಟ್‌ಗಳು, ಪ್ರೊಟೀನ್‌ಗಳು, ಕೊಬ್ಬು, ಖನಿಜಗಳು ಮತ್ತು ವಿಟಮಿನ್‌ಗಳು. ಇವುಗಳ ಜೊತೆಗೆ ನೀರು ಮತ್ತು ನಾರು ಪದಾರ್ಥಗಳನ್ನು ಸಹ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
- ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬು ನಮ್ಮ ದೇಹಕ್ಕೆ ಮುಖ್ಯವಾಗಿ ಶಕ್ತಿಯನ್ನು ಒದಗಿಸುತ್ತವೆ.
- ಪ್ರೊಟೀನ್‌ಗಳು ಮತ್ತು ಖನಿಜಗಳು ನಮ್ಮ ದೇಹದ ಬೆಳವಣಿಗೆ ಮತ್ತು ನಿರ್ವಹಣೆಗೆ ಅವಶ್ಯಕ.
- ನಮ್ಮ ದೇಹಕ್ಕೆ ವಿಟಮಿನ್‌ಗಳು ಅಲ್ಪ ಪ್ರಮಾಣದಲ್ಲಿ ಬೇಕಿದ್ದರೂ ದೇಹದ ವಿವಿಧ ಕಾರ್ಯಗಳಿಗೆ ಸಹಾಯ ಮಾಡುತ್ತವೆ.
- ನಮ್ಮ ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಒದಗಿಸುವ ಆಹಾರ ಪದ್ಧತಿಗೆ ಸಮತೋಲಿತ ಆಹಾರ ಎಂದು ಕರೆಯುತ್ತೇವೆ.
- ನಮ್ಮ ಆಹಾರದಲ್ಲಿ ಒಂದು ಅಥವಾ ಹೆಚ್ಚು ಪೋಷಕಾಂಶಗಳ ಕೊರತೆಯಿಂದ ಉಂಟಾಗುವ ತೊಂದರೆಗಳಿಗೆ ಕೊರತೆ ರೋಗಗಳು ಎನ್ನುವರು.
ಹೆಚ್ಚಿನ ಅಧ್ಯಯನಕ್ಕಾಗಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ "ವಿದ್ಯಾಸಂಗಮ" ಸಂವೇದ ದೂರದರ್ಶನ ಆಧಾರಿತ ಇ-ಕಲಿಕಾ ಕಾರ್ಯಕ್ರಮದಲ್ಲಿ ಪ್ರಸಾರವಾಗುವ 6ನೇ ತರಗತಿಯ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಈ ಕೆಳಗಿನ ವಿಡಿಯೋವನ್ನು ವಿಕ್ಷಿಸಬಹುದಾಗಿದೆ
