ಅಧ್ಯಾಯ -1. ಸೌರ ಮಂಡಲದಲ್ಲಿ ಭೂಮಿ - The Earth and The Solar System

 ಸೌರ ಮಂಡಲದಲ್ಲಿ ಭೂಮಿ

The Earth and The Solar System

    Geography 

    • ಭೂಗೋಳಶಾಸ್ತ್ರ ಶಬ್ದದವು "ಗ್ರೀಕ್"‌ ಭಾಷೆಯಿಂದ ಬಂದಿದೆ.
    • Geo - Earţh (ಭೂಮಿ), Graphy - Writing (ಬರೆಯುವುದು).
    The Earth and The Solar System

    • ನಾವು ಪೂರ್ತಿ ಚಂದ್ರನನ್ನು ತಿಂಗಳಿನಲ್ಲಿ ಒಂದು ಬಾರಿ ಮಾತ್ರ ಗಮನಿಸುತ್ತೇವೆ.
    • ಚಂದ್ರ ಮತ್ತು ಎಲ್ಲಾ ಹೊಳೆಯುವ ಸಣ್ಣ ವಸ್ತುಗಳು ಹಗಲಿನಲ್ಲಿ ಕಾಣಿಸುವುದಿಲ್ಲ. ಏಕೆಂದರೆ ತೀಕ್ಷ್ಣವಾದ ಸೂರ್ಯನ ಕಿರಣಗಳು ಕಾಣಲು ಬಿಡುವುದಿಲ್ಲ.
    • ಸೂರ್ಯ, ಚಂದ್ರ, ಮತ್ತು ರಾತ್ರಿಯ ಆಕಾಶದಲ್ಲಿ ಹೊಳೆಯುವ ಎಲ್ಲಾ ವಸ್ತುಗಳನ್ನು "ಆಕಾಶಕಾಯಗಳು" ಎನ್ನುವರು.
    • ಯಾವ ಆಕಾಶ ಕಾಯಗಳು ತಮ್ಮದೇ ಆದ ಸ್ವಂತ ಶಾಖ ಮತ್ತು ಬೆಳಕನ್ನು ಹೊರಸೂಸುತ್ತವೆಯೊ ಅವುಗಳನ್ನು "ನಕ್ಷತ್ರಗಳು" ಎನ್ನುವರು. ಉದಾ : ಸೂರ್ಯ ಒಂದು ನಕ್ಷತ್ರ.

    ನಕ್ಷತ್ರ ಪುಂಜ 

    • ನಕ್ಷತ್ರಗಳ ಗುಂಪಿಗೆ "ನಕ್ಷತ್ರ ಪುಂಜ" ಎನ್ನುವರು.
    • ಉದಾ : ಉರ್ಸಾ ಮೇಜರ್‌ ಅಥವಾ ಬಿಗ್‌ ಬಿಯರ್‌, ಸಪ್ತರಿಷಿ.
    • ಉತ್ತರ ನಕ್ಷತ್ತವು ಉತ್ತರ ದಿಕ್ಕನ್ನು ತೋರಿಸುತ್ತದೆ ಹಾಗೂ ಅದನ್ನು "ಧ್ರುವ ನಕ್ಷತ್ರ" ಎಂದು ಕರೆಯುತ್ತಾರೆ.
    The Earth and The Solar System

    ಗ್ರಹಗಳು 

    • ಇವುಗಳು ಆಕಾಶಕಾಯಗಳಾಗಿದ್ದು, ಸ್ವಂತ ಬೆಳಕು ಹಾಗೂ ಶಾಖವನ್ನು ಹೊಂದಿರುವುದಿಲ್ಲ. ಆದರೆ ಇವುಗಳು ನಕ್ಷತ್ರಗಳ ಬೆಳಕಿನಿಂದ ಬೆಳಗುತ್ತವೆ.
    • "ಚಂದ್ರ" ಒಂದು "ನೈಸರ್ಗಿಕ ಉಪಗ್ರಹ"ವಾಗಿದೆ.
    • ಗುರು, ಶನಿ ಹಾಗೂ ಯುರೇನಸ್‌ ಗಳು ತಮ್ಮ ಸುತ್ತಲು "ಉಂಗುರಗಳನ್ನು" ಹೊಂದಿವೆ. ಈ ಉಂಗುರಗಳು ಶಿಲಾಖಂಡ ರಾಶಿಗಳನ್ನು ಹೊಂದಿವೆ.

    ಸೌರಮಂಡಲ 

    • ಸೌರಮಂಡಲವು ಸೂರ್ಯ, 8 ಗ್ರಹಗಳು, ಉಪಗ್ರಹಗಳು ಹಾಗೂ ಬೇರೆ ಆಕಾಶಕಾಯಗಳು ಅಂದರೆ ಕ್ಷುದ್ರಗ್ರಹಗಳು ಹಾಗೂ ಉಲ್ಕೆಗಳನ್ನು ಒಳಗೊಂಡಿದೆ.

    The Earth and The Solar System

    ಸೂರ್ಯ 

    • ಸೌರಮಂಡಲದ ಕೇಂದ್ರಬಿಂದು.
    • ಇದು ಅತ್ಯಂತ ದುಡ್ಡದಾಗಿದ್ದು , ಅತ್ಯಂತ ಶಾಖವಿರುವ ಅನಿಲಗಳಿಂದ ರೂಪುಗೊಂಡಿದೆ.
    • ಸೂರ್ಯನು ಸೌರಮಂಡಲದ ಶಾಖ ಮತ್ತು ಬೆಳಕಿನ ಅಂತಿಮ ಮೂಲವಾಗಿದ್ದಾನೆ.
    • ಸೂರ್ಯನು ಭೂಮಿಯಿಂದ 150 ಮಿಲಿಯನ್(1‌ ಮಿಲಿಯನ್=10 ಲಕ್ಷ ಕಿ.ಮೀ) ಕಿ.ಮೀ. ದೂರದಲ್ಲಿದ್ದಾನೆ.

    ಸೌರಮಂಡಲದ ಗ್ರಹಗಳು 

    • ಗ್ರಹಗಳು - 08
    • ಬುಧ, ಶುಕ್ರ, ಭೂಮಿ, ಮಂಗಳ. ಗುರು, ಶನಿ, ಯುರೇನೆಸ್‌, ನೆಪ್ಚೂನ್.

        ಆಂತರಿಕ ಗ್ರಹಗಳು:

    • ಬುಧ, ಶುಕ್ರ, ಭೂಮಿ, ಮಂಗಳ.
    • ಸೂರ್ಯನಿಗೆ ಅತಿ ಹತ್ತಿರದಲ್ಲಿವೆ
    • ಇವುಗಳು ಶಿಲೆಯಿಂದ ರೂಪಗೊಂಡಿವೆ.

        ಬಾಹ್ಯ ಗ್ರಹಗಳು :

    • ಗುರು, ಶನಿ, ಯುರೇನೆಸ್‌, ನೆಪ್ಚೂನ್.
    • ಇವು ಸೂರ್ಯನಿಂದ ದೂರದಲ್ಲಿವೆ.
    • ಇವು ಅನಿಲ ಮತ್ತು ದ್ರವಗಳಿಂದ ರೂಪಗೊಂಡಿವೆ.
    The Earth and The Solar System

    • ಅಗಷ್ಟ 2006 ರವರೆಗೆ "ಪ್ಲೂಟೋ" ವನ್ನು ಗ್ರಹವೆಂದು ಪರಿಗಣಿಸಲಾಗಿತ್ತು. ಇದೊಂದು "ಕುಬ್ಜಗ್ರಹ".
    • ಎಲ್ಲಾ ಗ್ರಹಗಳು ಸೂರ್ಯನ ಸುತ್ತಲು ಒಂದೇ ಪಥದಲ್ಲಿ ಸುತ್ತುತ್ತವೆ. ಈ ಪಥಗಳನ್ನು  "ಕಕ್ಷೆಗಳು" ಎಂದು ಕರೆಯುತ್ತಾರೆ.
    • ಬುಧ ಗ್ರಹವು ಸೂರ್ಯನಿಗೆ ಅತ್ಯಂತ ಹತ್ತಿರವಾದ ಗ್ರಹವಾಗಿದ್ದು, ಇದು ಸೂರ್ಯನನ್ನು ಸುತ್ತಲೂ 88 ದಿನಗಳನ್ನು ತೆಗೆದುಕೊಳ್ಳುತ್ತದೆ.
    • ಶುಕ್ರ ಗ್ರಹವನ್ನು "ಭೂಮಿಯ ಅವಳಿ" ಎಂದು ಕರೆಯುತ್ತಾರೆ.

    ಭೂಮಿ 

    • ಇದು ಸೂರ್ಯನಿಗೆ 3ನೇ ಹತ್ತಿರವಾದ ಗ್ರಹವಾಗಿದೆ
    • ಗಾತ್ರದಲ್ಲಿ 5ನೇ ದೊಡ್ಡ ಗ್ರಹವಾಗಿದೆ.
    • ಇದು ಧ್ರುವ ಭಾಗದಲ್ಲಿ  ಸ್ವಲ್ಪ ಚಪ್ಪಟೆಯಾಗಿರುವುದರಿಂದ (ಜಿಯಾಯ್ಡ್ ಆಕಾರ) ಗೋಳಾಕಾರವಾಗಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
    • ಭೂಮಿಯು ನೀರು ಮತ್ತು ಗಾಳಿಯನ್ನು ಹೊಂದಿದೆ.
    • ಭೂಮಿಯು ಬಾಹ್ಯಾಕಾಶದಿಂದ ನೋಡಿದಾಗ "ನೀಲಿಯಾಗಿ" ಕಾಣುತ್ತದೆ. ಏಕೆಂದರೆ, ಭೂಮಿಯ ಮೂರನೇ ಎರಡು ಭಾಗ ನೀರಿನಿಂದ ಆವೃತವಾಗಿದೆ. ಆದ್ದರಿಂದ ಇದನ್ನು "ನೀಲಿ ಗ್ರಹ" ಎಂದು ಕರೆಯುತ್ತಾರೆ.
    • ಬೆಳಕು ಪ್ರತಿ ಸೆಕೆಂಡಿಗೆ 3ಲಕ್ಷ ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಇದು ಭೂಮಿಯನ್ನು ತಲುಪಲು 8 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

    ಚಂದ್ರ 

    The Earth and The Solar System

    • ಭೂಮಿಯ "ನೈಸರ್ಗಿಕ ಉಪಗ್ರಹ".
    • ಚಂದ್ರನ ವ್ಯಾಸವು ಭೂಮಿಯ ನಾಲ್ಕನೇ ಒಂದು ಭಾಗ ಮಾತ್ರ. ಇದು ಭೂಮಿಯಿಂದ 3,84,400 ಕಿ.ಮೀ. ದೂರದಲ್ಲಿದೆ.
    • ಚಂದ್ರನು ಭುಮಿಯನ್ನು ಸುತ್ತಲೂ 27 ದಿನಗಳನ್ನು ತೆಗೆದುಕೊಳ್ಳುತ್ತಾನೆ.
    • ನಮಗೆ ಚಂದ್ರನ "ಒಂದು ಭಾಗ" ಮಾತ್ರ ಕಾಣಿಸುತ್ತದೆ. ಏಕೆಂದರೆ, ಚಂದ್ರನ ಭ್ರಮಣೆಯ ಅವಧಿ ಹಾಗೂ ಪರಿಭ್ರಮಣೆಯ ಅವಧಿಯು ಒಂದೇ ಆಗಿರುತ್ತದೆ.
    • ಚಂದ್ರನ ಮೇಲೆ ಮೊದಲು ಕಾಲಿಟ್ಟ ಮಾನವ "ನೀಲ್‌ ಆರ್ಮಸ್ಟ್ರಾಂಗ್"‌.(ಜುಲೈ-20, 1969).

    ಉಪಗ್ರಹ 

    • ಇವು ಆಕಾಶ ಕಾಯಗಳಾಗಿದ್ದು, ಗ್ರಹಗಳನ್ನು ಸುತ್ತುತ್ತವೆ.
    The Earth and The Solar System

    ಕ್ಷುದ್ರ ಗ್ರಹಗಳು 

    The Earth and The Solar System

    • ಇವು ಸೂರ್ಯನ್ನು ಸುತ್ತುವ ಸಣ್ಣ ಗಾತ್ರದ (ಗ್ರಹಗಳಿಗಿಂತ ಚಿಕ್ಕದಾದ) ಶಿಲೆಯಂತಹ ವಸ್ತುಗಳು.
    • ಇವುಗಳು ಮಂಗಳ ಹಾಗೂ ಗುರು ಗ್ರಹಗಳ ಮಧ್ಯದಲ್ಲಿ ಕಂಡು ಬರುತ್ತವೆ.
    • ದೊಡ್ಡ  ಕ್ಷುದ್ರಗ್ರಹ - ಸಿರಸ್.‌

    ಉಲ್ಕೆಗಳು

    • ಇವುಗಳು ಅತಿ ಚಿಕ್ಕದಾದ ಶಿಲೆಗಳಾಗಿದ್ದು ಸೂರ್ಯನ ಸುತ್ತ ಸುತ್ತುತ್ತವೆ.

    ನಕ್ಷತ್ರಪುಂಜ 

    • ಇದು ಒಂದು ದೊಡ್ಡ ಮಟ್ಟದ ಬಿಲಿಯನ್‌ ನಕ್ಷತ್ರಗಳನ್ನು ಹೊಂದಿರುವ ವ್ಯವಸ್ಥೆಯಾಗಿದೆ.
    • ಇದು ಧೂಳಿನ ರಾಶಿ ಮತ್ತು ಅನಿಲಗಳನ್ನು ಒಳಗೊಂಡಿದೆ.
    • ನಮ್ಮ ಸೌರಮಂಡಲವು "ಕ್ಷೀರಪಥ" (Milky Way) ನಕ್ಷತ್ರಪುಂಜದ ಭಾಗವಾಗಿದೆ.
    • ಪ್ರಾಚೀನ ಭಾರತದಲ್ಲಿ ಆಗಸದಲ್ಲಿ ಬೆಳಕಿನ ನದಿ ಹರಿಯತ್ತದೆ ಎಂದು ಊಹಿಸಲಾಗಿತ್ತು. ಅದನ್ನು "ಆಕಾಶ ಗಣ" (Galaxy) ಎಂದು ಹೆಸರಿಡಲಾಗಿತ್ತು.
    The Earth and The Solar System

    Post a Comment (0)
    Previous Post Next Post