ಅಧ್ಯಾಯ-7 ಸಸ್ಯಗಳನ್ನು ತಿಳಿಯುವುದು - getting to know plants

7. ಸಸ್ಯಗಳನ್ನು ತಿಳಿಯುವುದು

Getting to know plants

✅ ಸಸ್ಯಗಳ ಎತ್ತರ ಕಾಂಡಗಳು ಮತ್ತು ರೆಂಬೆಗಳ ಆಧಾರದ ಮೇಲೆ ಸಾಮಾನ್ಯವಾಗಿ ಅವುಗಳನ್ನು ಗಿಡಮೂಲಿಕೆಗಳು ಪೊದೆಗಳು ಮತ್ತು ಮರಗಳನ್ನಾಗಿ ಗುಂಪು ಮಾಡುತ್ತೇವೆ. 
✅ ಕಾಂಡಗಳು ಎಲೆ ರೆಂಬೆ, ಮೊಗ್ಗು, ಹೂ ಮತ್ತು ಹಣ್ಣುಗಳನ್ನು ಹೊಂದಿರುತ್ತದೆ.
✅ ಸಾಮಾನ್ಯವಾಗಿ ಎಲೆಯಲ್ಲಿ ಎಲೆಯ ತೊಟ್ಟು ಮತ್ತು ಪತ್ರ ಪಟಲ ಇರುತ್ತದೆ.
✅ ಎದೆಯ ಮೇಲಿರುವ ಸಿರೆಗಳ ನಮೂನೆಯನ್ನು ಸಿರಾ ವಿನ್ಯಾಸ ಎನ್ನುತ್ತೇವೆ.

✅ ಸಿರಾ ವಿನ್ಯಾಸ ವಿಧಗಳು

👉 ಜಾಲಿ ಸಿರಾ ವಿನ್ಯಾಸ 
👉 ಸಮಾನಾಂತರ ಸಿರಾ ವಿನ್ಯಾಸ 

✅ ಎಲೆಗಳು  ಬಾಷ್ಪ ವಿಸರ್ಜನೆ ಪ್ರಕ್ರಿಯೆ ಮೂಲಕ ನೀರಾವಿಯನ್ನು ಆಚೆ ಹಾಕುತ್ತವೆ.
✅ ಸೂರ್ಯನ ಬೆಳಕಿನಲ್ಲಿರುವ ಕಾರ್ಬನ್ ಡೈಆಕಡ್ ಮತ್ತು ನೀರನ್ನು ಬಳಸಿಕೊಂಡು "ದ್ಯುತಿ ಸಂಶ್ಲೇಷಣೆ" ಕ್ರಿಯೆಯ ಮೂಲಕ ಹಸಿರು ಎಲೆಗಳು ಆಹಾರವನ್ನು ತಯಾರಿಸುತ್ತವೆ.

✅ ಬೇರುಗಳಲ್ಲಿ ಎರಡು ವಿಧಗಳು : 

👉 ತಾಯಿ ಬೇರು 
👉 ತಂತು ಬೇರು 

✅ ಎಲೆಗಳಲ್ಲಿ ಜಾಲಿಕ ರೂಪ ಸಿರ ವಿನ್ಯಾಸವಿರುವ ಸಸ್ಯಗಳಲ್ಲಿ ತಾಯಿ ಬೇರುಗಳಿರುತ್ತವೆ.
✅ ಎಲೆಗಳಲ್ಲಿ ಸಮಾನಾಂತರ ಸಿರ ವಿನ್ಯಾಸವಿರುವ ಸಸ್ಯಗಳಲ್ಲಿ ತಂತು ಬೇರುಗಳಿರುತ್ತವೆ.

✅ ಹೂವಿನ ಭಾಗಗಳು.

👉 ಪುಷ್ಪ ಪತ್ರಗಳು
👉 ಪುಷ್ಪದಳಗಳು
👉 ಕೇಸರಗಳು
👉 ಶಲಾಕೆ 




Gift Image

ಹೆಚ್ಚಿನ ಅಧ್ಯಯನಕ್ಕಾಗಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ "ವಿದ್ಯಾಸಂಗಮ" ಸಂವೇದ ದೂರದರ್ಶನ ಆಧಾರಿತ ಇ-ಕಲಿಕಾ ಕಾರ್ಯಕ್ರಮದಲ್ಲಿ ಪ್ರಸಾರವಾಗುವ 6ನೇ ತರಗತಿಯ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಈ ಕೆಳಗಿನ ವಿಡಿಯೋವನ್ನು ವಿಕ್ಷಿಸಬಹುದಾಗಿದೆ

gift image


ಭಾಗ-1


ಭಾಗ-2

Post a Comment (0)
Previous Post Next Post