ಪ್ರಮುಖ ಭೂ ಸ್ವರೂಪಗಳು
- ಭೂಮಿಯ ಮೇಲ್ಮೈ ಒಂದು ಸಂಕೀರ್ಣ ವಲಯವಾಗಿದ್ದು, ಇದರಲ್ಲಿ ಮೂರು ಅಂಶಗಳು ಸಂಧಿಸುತ್ತವೆ. ಅವುಗಳು,
ಶಿಲಾಗೋಳ (ಲಿಥೋಸ್ಫಿಯರ್) :
- ಭೂಮಿಯ ಹೊರ ಪದರದ ಬಂಡೆಗಳು ಮತ್ತು ಜೀವಿಗಳಿಗೆ ಬೇಕಾಗಿರುವ ಪೋಶಕಾಂಶದ ಅಂಶಗಳನ್ನು ಒಳಗೊಂಡಿರುವ ಮಣ್ಣಿನ ತೆಳುವಾದ ಪದರವನ್ನು ಹೊಂದಿದೆ.
ಭೂಮಿಯ ಮೇಲ್ಮೈಯಲ್ಲಿ ಎರಡು ವಿಧಗಳಿವೆ.
- ಖಂಡಗಳು
- ಸಾಗರ ಜಲಾನಯನಗಳು
- ಎಲ್ಲಾ ಸಮುದ್ರಗಳು ಒಂದಕ್ಕೊಂದು ಸಂಪರ್ಕವನ್ನು ಹೊಂದಿವೆ. ಸಮುದ್ರದ ನೀರಿನ ಮಟ್ಟ ಎಲ್ಲೆಡೆ ಒಂದೇ ಆಗಿರುತ್ತದೆ. ಭೂಮಿಯ ಎತ್ತರವನ್ನು ಸಮುದ್ರ ಮಟ್ಟದಿಂದ ಅಳೆಯಲಾಗುತ್ತದೆ. ಸಮುದ್ರ ಮಟ್ಟವನ್ನು "ಶೂನ್ಯ" ಎಂದು ಪರಿಗಣಿಸಲಾಗಿದೆ.
- ಎತ್ತರದ ಪರ್ವತ ಶಿಖರ - "ಮೌಂಟ್ ಎವರೆಸ್ಟ್". 8848 ಮೀಟರ್ ಎತ್ತರವಾಗಿದೆ.
- ಫೆಸಿಪಿಕ್ ಮಹಾಸಾಗರದ -"ಮರಿಯಾನಾ ಕಂದಕವು" 11022 ಮೀಟರ್ ಆಳವನ್ನು ಹೊಂದಿದೆ
ಮೌಂಟ್ ಎವರೆಸ್ಟ್ ಹತ್ತಿದ ಮೊದಲಿಗರು :
- ಪುರುಷರು - ಮೇ 29, 1953 -ಎಡ್ಮಂಡ್ ಹಿಲರಿ (ನ್ಯೂಜಿಲೆಂಡ್)
- ಪುರುಷರು - ಮೇ 29, 1953 -ಶೆರ್ಪಾ ತೇನ್ಸಿಂಗ್ (ಭಾರತ)
- ಮಹಿಳೆಯರು - ಮೇ 16, 1975 -ಜುಂಕೋ ತಾಂಬೆ (ಜಪಾನ್)
- ಮಹಿಳೆಯರು - ಮೇ 23, 1984 -ಬಚೇಂದ್ರಿ ಪಾಲ್ (ಭಾರತ)
ಖಂಡಗಳು :
1. ಏಷ್ಯಾ ಖಂಡ |
5. ದಕ್ಷಿಣ ಅಮೇರಿಕಾ ಖಂಡ |
2. ಯುರೋಪ್ ಖಂಡ |
6. ಆಸ್ಟ್ರೇಲಿಯಾ ಖಂಡ |
3. ಆಫ್ರಿಕಾ ಖಂಡ |
7. ಅಂಟಾರ್ಟಿಕಾ ಖಂಡ |
4. ಉತ್ತರ ಅಮೇರಿಕಾ ಖಂಡ |
|
- ಏಳು ಖಂಡಗಳಿವೆ.
- ಇವುಗಳು ಸಾಗರಗಳಿಂದ ಬೇರ್ಪಟ್ಟಿವೆ.
- ಭೂಮಿಯ ದ್ರವ್ಯರಾಶಿಯ ಹೆಚ್ಚಿನ ಭಾಗ "ಉತ್ತರ ಗೋಳಾರ್ಧ"ದಲ್ಲಿದೆ.
1. ಏಷ್ಯಾ ಖಂಡ :
- ದೊಡ್ಡ ಖಂಡವಾಗಿದೆ.
- ಭೂಮಿಯ ಮೂರನೇ ಒಂದು ಭಾಗವನ್ನು ಹೊಂದಿದೆ.
- ಇದು ಪೂರ್ವ ಗೋಳಾರ್ಧದಲ್ಲಿದೆ.
- ಕರ್ಕಾಟಕ ಸಂಕ್ರಾಂತಿ ವೃತ್ತವು ಈ ಖಂಡದ ಮೂಲಕ ಹಾದು ಹೋಗುತ್ತದೆ.
- ಪಶ್ಚಿಮದಲ್ಲಿ ಯೂರಲ್ ಪರ್ವತಗಳಿಂದಾಗಿ ಯುರೋಪ್ ನಿಂದ ಏಷ್ಯಾ ಬೇರ್ಪಟ್ಟಿದೆ.
- ಯೂರೋಪ್ ಮತ್ತು ಏಷ್ಯಾ ಸಂಯೋಜಿತ ಭೂಪ್ರದೇಶವನ್ನು "ಯುರೇಷಿಯಾ" (ಯೂರೋಪ್+ಏಷ್ಯಾ) ಎನ್ನುವರು.
2. ಯುರೋಪ್ ಖಂಡ :
- ಈ ಖಂಡವು ಏಷ್ಯಾದ ಪಶ್ಚಿಮಕ್ಕಿದೆ.
- ಆರ್ಕಿಟಿಕ್ ವೃತ್ತವು ಹಾದು ಹೋಗುತ್ತದೆ.
- ಮೂರು ಕಡೆ ಜಲ ಮಾರ್ಗಗಳಿಂದ ಆವೃತವಾಗಿದೆ.
3. ಆಫ್ರಿಕಾ ಖಂಡ :
- ಎರಡನೇ ದೊಡ್ಡ ಖಂಡ.
- "ಸಮಭಾಜಕ ವೃತ್ತವು" ಬಹುತೇಕ ಈ ಖಂಡದ ಮಧ್ಯದಲ್ಲಿ ಹಾದೂ ಹೋಗುತ್ತದೆ.
- ಆಫ್ರಿಕಾದ ಹೆಚ್ಚಿನ ಭಾಗ ಉತ್ತರ ಗೋಳಾರ್ಧದಲ್ಲಿದೆ.
- ಈ ಖಂಡವು ಮೂರು ವೃತ್ತಗಳು ಅಂದರೆ "ಕರ್ಕಾಟಕ ಸಂಕ್ರಾಂತಿ ವೃತ್ತ, ಸಮಭಾಜಕ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತ" ಸಂಧಿಸುವ ಏಕೈಕ ಖಂಡವಾಗಿದೆ.
- ವಿಶ್ವದ ಅತಿ ದೊಡ್ಡ ಬಿಸಿ ಮರುಭೂಮಿ "ಸಹರಾ ಮರುಭೂಮಿ" ಆಫ್ರಿಕಾದಲ್ಲಿ ಕಂಡು ಬರುತ್ತದೆ.
- ವಿಶ್ವದ ಅತೀ ಉದ್ದವಾದ "ನೈಲ್ ನದಿ" ಕೂಡಾ ಆಫ್ರಿಕಾದಲ್ಲಿ ಕಂಡು ಬರುತ್ತದೆ.
4. ಉತ್ತರ ಅಮೇರಿಕಾ ಖಂಡ :
- ಮೂರನೇ ದೊಡ್ಡ ಖಂಡವಾಗಿದೆ.
- "ಪನಾಮಾ" ಕಾಲುವೆಯು ಉತ್ತರ ಅಮೇರಿಕಾ ಹಾಗೂ ದಕ್ಷಿಣ ಅಮೇರಿಕಾಗಳನ್ನು ಸಂಪರ್ಕಿಸುತ್ತದೆ.
- ಈ ಖಂಡವು ಸಂಪೂರ್ಣವಾಗಿ ಉತ್ತರ ಮತ್ತು ಪಶ್ಚಿಮ ಗೋಳಾರ್ಧದಲ್ಲಿದೆ.
5. ದಕ್ಷಿಣ ಅಮೇರಿಕಾ ಖಂಡ :
- ವಿಶ್ವದ ಉದ್ದವಾದ ಪರ್ವತ ಶ್ರೇಣಿ "ಆಂಡೀಸ್" ಇಲ್ಲಿ ಕಂಡು ಬರುತ್ತದೆ.
- ವಿಶ್ವದ ಅತಿ ದೊಡ್ಡ ನದಿ "ಅಮೆಜಾನ್" ಇಲ್ಲಿ ಕಂಡು ಬರುತ್ತದೆ.
6. ಆಸ್ಟ್ರೇಲಿಯಾ ಖಂಡ :
- ಇದು ಚಿಕ್ಕದಾದ ಖಂಡವಾಗಿದೆ.
- ಸಂಪೂರ್ಣವಾಗಿ ದಕ್ಷಿಣ ಗೋಳಾರ್ಧದಲ್ಲಿ ಕಂಡು ಬರುತ್ತದೆ.
- ಈ ಖಂಡವನ್ನು "ದ್ವೀಪ ಖಂಡ" ಎನ್ನುವರು.
7. ಅಂಟಾರ್ಟಿಕಾ ಖಂಡ :
- ಇದು ದಕ್ಷಿಣ ಗೋಳಾರ್ಧದ ದೊಡ್ಡ ಖಂಡವಾಗಿದೆ.
- ದಕ್ಷಿಣ ಧ್ರುವ ಬಹುತೇಕ ಈ ಖಂಡದ ಮಧ್ಯದಲ್ಲಿದೆ.
- ಇಲ್ಲಿ ಭಾರತದ "ಮೈತ್ರಿ" ಮತ್ತು "ದಕ್ಷಿಣ ಗಂಗೋತ್ರಿ" ಎಂಬ ಸಂಶೋಧನಾ ಕೇಂದ್ರಗಳಿವೆ.
ಜಲಗೋಳ :
- ಭೂಮಿಯನ್ನು "ನೀಲಿ ಗ್ರಹ" ಎನ್ನುವರು.
- ಭೂಮಿಯು ಶೇಕಡಾ 71 ಕ್ಕಿಂತ ಹೆಚ್ಚು ಜಲಾವೃತವಾಗಿದೆ.
- 29 % ಭೂಮಿಯಿಂದ ಆವೃತವಾಗಿದೆ.
- 97 % ಭೂಮಿಯ ನೀರು ಸಮುದ್ರಗಳಲ್ಲಿ ಕಂಡು ಬರುತ್ತದೆ. ಇದು ಉಪ್ಪು ನೀರು ಆಗಿರುವುದರಿಂದ ಮಾನವ ಬಳಕೆಗೆ ಉಪಯುಕ್ತವಲ್ಲ. ಉಳಿದ ನೀರಿನ ಪ್ರಮಾಣವು ಮಂಜುಗಡ್ಡೆಗಳು ಮತ್ತು ಹಿಮನದಿಗಳ ರೂಪದಲ್ಲಿ ಅಥವಾ ಭೂ ಅಂತರ್ಜಲವಾಗಿದೆ.
- ಅತ್ಯಂತ ಕಡಿಮೆ ಶೇಕಡಾವಾರು ಮಾನವರಿಗೆ ಶುದ್ಧ ನೀರಿನ ರೂಪದಲ್ಲಿ ಲಭ್ಯವಿದೆ.
ಸಾಗರಗಳು :
- ಸಾಗರದ ನೀರು ಸದಾ ಚಲನೆಯಲ್ಲಿರುತ್ತದೆ.
- ಈ ಚಲನೆಗೆ ಕಾರಣಗಳು : ಅಲೆಗಳು, ಉಬ್ಬರವಿಳಿತಗಳು ಮತ್ತು ಸಾಗರ ಪ್ರವಾಹಗಳು.
- ನಾಲ್ಕು ಪ್ರಮುಖ ಸಾಗರಗಳಿವೆ.
- ಪೆಸಿಫಿಕ್ ಮಹಾಸಾಗರ
- ಅಟ್ಲಾಂಟಿಕ್ ಮಹಾಸಾಗರ
- ಹಿಂದೂ ಮಹಾಸಾಗರ
- ಆರ್ಕಿಟಿಕ್ ಮಹಾಸಾಗರ
1. ಪೆಸಿಫಿಕ್ ಮಹಾಸಾಗರ :
- ಅತೀ ದೊಡ್ಡದಾದ ಸಾಗರವಾಗಿದ್ದು, ಇದು ವೃತ್ತಾಕಾರವಾಗಿದೆ.
- ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾ ಕಂಡಗಳು ಸುತ್ತುವರೆದಿವೆ.
- "ಮರಿಯಾನ ಕಂದಕ"- ಭೂಮಿಯ ಆಳವಾದ ಭಾಗ ಇಲ್ಲಿದೆ.
2. ಅಟ್ಲಾಂಟಿಕ್ ಮಹಾಸಾಗರ :
- ಎರಡನೇ ದೊಡ್ಡದಾದ ಸಾಗರ.
- ಇದು "S" ಆಕಾರದಲ್ಲಿದೆ.
- ಇದು ಪಶ್ಚಿಮ ಭಾಗಗಳಿಂದ ಉತ್ತರ ಮತ್ತು ದಕ್ಷಿಣ ಅಮೇರಿಕಾ ಮತ್ತು ಪೂರ್ವ ಭಾಗಗಳಿಂದ ಯುರೋಪ್ ಮತ್ತು ಆಫ್ರಿಕಾ ಸುತ್ತುವರೆದಿವೆ.
- ಕರಾವಳಿ ತೀರ ಹೆಚ್ಚು ಇಂಡೆಂಟ್ ಆಗಿದೆ. ಇದರಿಂದಾಗಿ ನೈಸರ್ಗಿಕ ಬಂದರು ಮತ್ತು ಬಂದರುಗಳಿಗೆ ಸೂಕ್ತ ಸ್ಥಳವನ್ನು ಒದಗಿಸುತ್ತದೆ.
- ವಾಣಿಜ್ಯ ದೃಷ್ಟಿಕೋನದಿಂದ ಇದು ಅತ್ಯಂತ ಜನನಿಬೀಡ ಸಾಗರವಾಗಿದೆ.
3. ಹಿಂದೂ ಮಹಾಸಾಗರ :
- ಸಾಗರದ ಹೆಸರನ್ನು ದೇಶದ ಹೆಸರನ್ನು ಅಳವಡಿಸಿ ಇಟ್ಟಿರುವ ಏಕೈಕ ಸಾಗರವಾಗಿದೆ.
- ಈ ಸಾಗರದ ಆಕಾರವು ಬಹುತೇಕ "ತ್ರೀಕೋನವಾಗಿದೆ".
- ಉತ್ತರದಲ್ಲಿ ಏಷ್ಯಾ, ಪಶ್ಚಿಮದಲ್ಲಿ ಆಫ್ರಿಕಾ ಮತ್ತು ಪೂರ್ವದಲ್ಲಿ ಆಸ್ಟ್ರೇಲಿಯಾದಿಂದ ಸುತ್ತುವರೆದಿದೆ.
4. ಆರ್ಕಿಟಿಕ್ ಮಹಾಸಾಗರ :
- ಉತ್ತರ ಧ್ರುವವನ್ನು ಸುತ್ತುವರೆದಿದೆ.
- ಇದು "ಬೇರಿಂಗ್ ಜಲಸಂಧಿ" ಸಹಾಯದಿಂದ ಫೆಸಿಫಿಕ್ ಸಾಗರವನ್ನು ಸಂಪರ್ಕಿಸಿದೆ.
- ಇದು ಉತ್ತರ ಅಮೇರಿಕಾ ಮತ್ತು ಯುರೇಷಿಯಾದ ಉತ್ತರ ಭಾಗಗಳಿಂದ ಸುತ್ತುವರೆದಿದೆ.
ವಾಯುಮಂಡಲ :
- ಭೂಮಿಯು ಅನಿಲಗಳಿಂದ ಆವೃತವಾಗಿದೆ. ವಾಯುಮಂಡಲವು ಭೂಮಿಯ ಮೇಲ್ಮೈಯಲ್ಲಿ ಸುಮಾರು 1600 ಕಿ.ಮೀ.ಗಳವರೆಗೆ ವಿಸ್ತರಿಸಿದೆ.
- ಸಂಯೋಜನೆ, ತಾಪಮಾನ ಮತ್ತು ಇತರ ಗುಣಲಕ್ಷಣಗಳ ಆಧಾರದ ಮೇಲೆ ವಾತಾವರಣವನ್ನು 5 ಪದರಗಳಾಗಿ ವಿಂಗಡಿಸಲಾಗಿದೆ.
- ಭೂಮಿಯ ಮೇಲ್ಮೈಯಿಂದ ಪ್ರಾರಂಭವಾಗುವ ಈ ಪದರಗಳು,
- ಪರಿವರ್ತನಾ ಮಂಡಲ (ಟೋಪೊಸ್ಫಿಯರ್)
- ಸಮೋಷ್ಣ ಮಂಡಲ (ಸ್ಟ್ರಾಟೋಸ್ಫಿಯರ್)
- ಮಧ್ಯಂತರ ಮಂಡಲ (ಮೆಸೋಸ್ಫಿಯರ್)
- ಉಷ್ಣ ಮಂಡಲ (ಥರ್ಮೋಸ್ಫಿಯರ್)
- ಬಾಹ್ಯ ಮಂಡಲ (ಎಕ್ಸೋಸ್ಫಿಯರ್)
- ವಾಯುಮಂಡಲವು ಸಾರಜನಕ (78%), ಆಮ್ಲಜನಕ (21%), ಇಂಗಾಲದ ಡೈ ಆಕ್ಸೈಡ್, ಆರ್ಗಾನ್ ಮತ್ತು ಇತರ ಅನಿಲಗಳಿಂದ ಕೂಡಿದೆ.
- ಆಮ್ಲಜನಕವು ಜೀವನದ ಉಸಿರಾಗಿದ್ದರೆ, ಸಾರಜನಕವು ಜೀವನದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇಂಗಾಲದ ಡೈ ಆಕ್ಸೈಡ್ ಕಡಿಮೆ ಪ್ರಮಾಣದಲ್ಲಿದ್ದರೂ ಭೂಮಿಯಿಂದ ಹೊರ ಸೂಸುವ ಶಾಖವನ್ನು ಹೀರಿಕೊಳ್ಳುವುದರಿಂದ ಗ್ರಹವನ್ನು ಬೆಚ್ಚಗಾಗಿಸುತ್ತದೆ. ಇಂಗಾಲ ಸಸ್ಯಗಳ ಬೆಳವಣಿಗೆಗೆ ಅತ್ಯವಶ್ಯಕವಾಗಿದೆ.
- ವಾಯುಮಂಡಲದ ಸಾಂದ್ರತೆ ಎತ್ತರಕ್ಕೆ ಹೋದಂತೆ ಕಡಿಮೆಯಾಗುತ್ತದೆ. ಹೀಗಾಗಿ ಆರೋಹಿಗಳು ಉಸಿರಾಟದ ತೊಂದರೆ ಅನುಭವಿಸುತ್ತಾರೆ. ಎತ್ತರಕ್ಕೆ ಹೋದಂತೆ ಭೂಮಿಯ ಮೇಲೆ ಕೇಲವು ಪ್ರದೇಶಗಳು ಹೆಚ್ಚು ಅಥವಾ ಕಡಿಮೆ ಒತ್ತಡ ಅನುಭವಿಸುತ್ತವೆ.
- ಗಾಳಿಯು ಹೆಚ್ಚು ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಚಲಿಸುತ್ತದೆ.