ಅಧ್ಯಾಯ -9. ಜೀವಂತ ಜೀವಿಗಳು ಮತ್ತು ಅವುಗಳ ಸುತ್ತಲಿನ ಪ್ರದೇಶಗಳು - Living organisms and the areas around them

ಜೀವಂತ ಜೀವಿಗಳು ಮತ್ತು ಅವುಗಳ ಸುತ್ತಲಿನ ಪ್ರದೇಶಗಳು

Living organisms and the areas around them

    👉 ಎಲ್ಲಾ ಸ್ಥಳಗಳು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಕೆಲವು ಸ್ಥಳಗಳು ಶೀತಮಯವಾಗಿದ್ದರೆ, ಕೆಲವು ಅತಿ ಹೆಚ್ಚು ಬಿಸಿಯಾದ ಒಣ ಪ್ರದೇಶಗಳು, ಇನ್ನೂ ಕೆಲವು ಪ್ರದೇಶಗಳು ಅತಿ ಹೆಚ್ಚು ತೇವಾಂಶವುಳ್ಳ ವಾತಾವರಣವನ್ನು ಹೊಂದಿವೆ. ಈ ಎಲ್ಲಾ ಸ್ಥಳಗಳಲ್ಲಿ ವಿವಿಧ ರೀತಿಯ ಜೀವಿಗಳು ಕಂಡು ಬರುತ್ತವೆ.

    ಜೀವಿಗಳ ಆವಾಸ ಮತ್ತು ಹೊಂದಾಣಿಕೆ

    👉 ಜೀವಿಗಳು ವಾಸಿಸುವ ಸುತ್ತಮುತ್ತಲಿನ ಪ್ರದೇಶಗಳಿಗೆ ಜೀವಿಗಳ ಆವಾಸ (Habitat) ಎನ್ನುವರು.
    👉 ಆವಾಸಸ್ಥಾನ ಸಸ್ಯ ಮತ್ತು ಪ್ರಾನಿಗಳಿಗೆ ಆಹಾರ, ನೀರು, ಆಶ್ರಯ, ಗಾಳಿ, ಬೆಳಕು, ಸಂತಾನೋತ್ಪತ್ತಿ ಮಾಡುವ ಸ್ಥಳಗಳನ್ನು ಒದಗಿಸುತ್ತದೆ.
    👉 ಸಮುದ್ರದಲ್ಲಿ ಪ್ರಾಣಿಗಳು ಮತ್ತು ಸಸ್ಯಗಳು ಉಪ್ಪು ನೀರಿನಿಂದ ಆವೃತಗೊಂಡಿವೆ. ಅವುಗಳಲ್ಲಿ ಬಹುತೇಕ ಜೀವಿಗಳು ನೀರಿನಲ್ಲಿ ಕರಗುವ ಆಕ್ಸಿಜನ್‌ ನ್ನು ಉಸಿರಾಡಲು ಬಳಸುತ್ತವೆ.
    👉 ಮರುಭೂಮಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ನೀರು ದೊರೆಯುತ್ತದೆ. ಮರುಭೂಮಿಯಲ್ಲಿ ವಾಸಿಸುವ ಸಸ್ಯಗಳು ಮತ್ತು ಪ್ರಾಣಿಗಳು ಗಾಳಿಯಲ್ಲಿನ ಮುಕ್ತ ಆಕ್ಸಿಜನ್‌ ನ್ನು ಉಸಿರಾಡುತ್ತವೆ.

    ಒಂಟೆ

    👉 ಒಂಟೆಯ ದೇಹದ ರಚನೆಯು ಮರುಭೂಮಿಯ ಪರಿಸರದಲ್ಲಿ ಬದುಕಲು ಸಹಾಯಕ.
    👉 ಒಂಟೆಗೆ ಉದ್ದನೆಯ ಕಾಲುಗಳಿದ್ದು ಅದರ ದೇಹವನ್ನು ಮರಳಿನ ತಾಪದಿಂದ ದೂರವಿಡಲು ಸಹಾಯಕವಾಗಿದವೆ.
    👉 ಅದು ಸ್ವಲ್ಪ ಪ್ರಮಾಣದ ಮೂತ್ರವನ್ನು ಮತ್ತು ಓಣ ಸಗಣಿಯನ್ನು ವಿಸರ್ಜಿಸುತ್ತದೆ ಮತ್ತು ಬೆವರುವುದಿಲ್ಲ.
    👉 ಒಂಟೆಯು ತನ್ನ ದೇಹದಿಂದ ಅತಿ ಕಡಿಮೆ ಪ್ರಮಾಣದಲ್ಲಿ ನೀರನ್ನು ಹೊರಹಾಕುವುದರಿಂದ ಹಲವು ದಿನಗಳ ವರೆಗೆ ನೀರಿಲ್ಲದೆ ಬದುಕಬಲ್ಲದು.

    Living organisms and the areas around them


    ಮೀನುಗಳು

    👉 ಮೀನುಗಳ ದೇಹವು ದೋಣಿಯಾಕಾರದಲ್ಲಿದೆ.ಇದು ನೀರಿನಲ್ಲಿ ಮೀನುಗಳು ಚಲಿಸಲು ಸಹಾಯಕವಾಗಿದೆ.
    👉 ಮೀನುಗಳ ದೇಹದ ಮೇಲ್ಮೈಯಲ್ಲಿ ಜಾರುವ ಹುರುಪೆಗಳು ಇವೆ. ಈ ಹುರುಪೆಗಳು ಮೀನುಗಳನ್ನು ರಕ್ಷಿಸುವುದರ ಜೊತೆಗೆ, ನೀರಿನಲ್ಲಿ ಸುಲಭವಾಗಿ ಚಲಿಸಲು ಸಹಾಯಕವಾಗಿವೆ.
    👉 ಮೀನುಗಳು ಚಪ್ಪಟ್ಟೆಯಾದ ಈಜುರೆಕ್ಕೆಯನ್ನು ಹಾಗೂ ಬಾಲದ ರೆಕ್ಕೆಯನ್ನು ಹೊಂದಿದ್ದು, ಮೀನುಗಳ ದಿಕ್ಕನ್ನು ಬದಲಿಸಲು ಮತ್ತು ದೇಹದ ಸಮತೋಲನವನ್ನು ಕಾಪಾಡಲು ಇವು ಸಹಾಯಕವಾಗಿವೆ.
    👉 ಮೀನುಗಳಲ್ಲಿರುವ ಕಿವಿರುಗಳು ನೀರಿನಲ್ಲಿ ಕರಗಿರುವ ಆಕ್ಷಿಜನ್‌ ನ್ನು ಉಸಿರಾಟಕ್ಕೆ ಹೀರಿಕೊಳ್ಳಲು ಸಹಾಯಕವಾಗಿವೆ.

    Living organisms and the areas around them


    👉 ಯಾವುದೇ ಸಸ್ಯ ಅಥವಾ ಪ್ರಾಣಿ ತನ್ನ ಸುತ್ತಲಿನ ಪ್ರದೇಶದಲ್ಲಿ ಸಹಜವಾಗಿ ಜೀವಿಸಲು ಸಹಾಯಕವಾದ ನಿರ್ದಿಷ್ಟ ಲಕ್ಷಣಗಳು ಅಥವಾ ಅಭ್ಯಾಸಗಳನ್ನು "ಹೊಂದಾಣಿಕೆ" (Adaptation) ಎನ್ನುವರು.

    ಭೂ ಆವಾಸಗಳು

    👉 ಭೂಮಿಯ ಮೇಲೆ ವಾಸಿಸುವ ಸಸ್ಯ ಹಾಗೂ ಪ್ರಾಣಿಗಳನ್ನು ಭೂ ಆವಾಸ ಜೀವಿಗಳು ಎನ್ನುವರು.
    👉 ಉದಾ - ಅರಣ್ಯ, ಹುಲ್ಲುಗಾವಲುಗಳು, ಮರುಭೂಮಿ, ಕಡಲತೀರ, ಪರ್ವತ ಪ್ರದೇಶಗಳು.

    ಮರುಭೂಮಿಗಳು

    👉 ಮರುಭೂಮಿಯ ಪ್ರಾಣಿಗಳಾದದ ಇಲಿಗಲು ಮತ್ತು ಹಾವುಗಳಿಗೆ ಒಂಟೆಯ ರೀತಿಯಲ್ಲಿ ಉದ್ದನೆಯ ಕಾಲುಗಳು ಇರುವುದಿಲ್ಲ.
    👉 ಹಗಲು ಸಮಯದಲ್ಲಿ ಸೂರ್ಯನ ತೀವ್ರ ಶಾಖದಿಂದ ದೂರ ಉಳಿಯಲು ಮರಳಿನ ಒಳಗೆ ಆಳವಾದ ಬಿಲಗಳಲ್ಲಿ ಈ ಪ್ರಾಣಿಗಳು ವಾಸಿಸುತ್ತವೆ.
    👉 ರಾತ್ರಿಯ ವೇಳೆ ತಂಪಾಗಿರುವ ಸಮಯದಲ್ಲಿ ಮಾತ್ರ ಈ ಪ್ರಾಣಿಗಳು ಬಿಲದಿಂದ ಹೊರಗೆ ಬರುತ್ತವೆ.

    Living organisms and the areas around them


    👉 ಮರುಭೂಮಿಯ ಸಸ್ಯಗಳು ಭಾಷ್ಪ ವಿಸರ್ಜನೆಯ ಮೂಲಕ ಅತಿ ಕಡಿಮೆ ಪ್ರಮಾಣದಲ್ಲಿ ನೀರನ್ನು ಕಳೆದುಕೊಳ್ಳುವವು.
    👉 ಮರುಭೂಮಿಯ ಸಸ್ಯಗಳಲ್ಲಿ ಎಲೆಗಳು ಇಲ್ಲದಿರಬಹುದು ಅಥವಾ ಚಿಕ್ಕದಾಗಿರಬಹುದು ಅಥವಾ ಮುಳ್ಳಿನ ಆಕಾರದಲ್ಲಿ ಇರಬಹುದು. ಇದು ಭಾಷ್ಪ ವಿಸರ್ಜನೆಯ ಮೂಲಕ ಎಲೆಗಳಿಂದ ನೀರು ಹೊರ ಹಾಕುವ ಪ್ರಮಾಣ ಕಡಿಮೆಯಾಗಲು ಸಹಾಯಕವಾಗಿದೆ. 
    👉 ಪಾಪಸ್ ಸುಕಳಿಯಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆಯೂ ಸಾಮಾನ್ಯವಾಗಿ ಕಾಂಡದಲ್ಲಿ ನಡೆಯುತ್ತದೆ. ಜೊತೆಗೆ ಕಾಂಡವು ದಪ್ಪನೆಯ ಮೇಣದಂತಹ ಪದರದಿಂದ ಆಗುತವಾಗಿದ್ದು ವಾಪಸ್ಸು ಕಳ್ಳಿಯ ಅಂಗಾಂಶಗಳಲ್ಲಿ ನೀರನ್ನು ಉಳಿಸಿಕೊಳ್ಳಲು ಅದು ಸಹಾಯಕ.
    👉 ಬಹಳಷ್ಟು ಮರುಭೂಮಿಯ ಸಸ್ಯಗಳ ಬೇರುಗಳು ನೀರನ್ನು ಹೇಳಿಕೊಳ್ಳಲು ಮಣ್ಣಿನಲ್ಲಿ ಆಳವಾಗಿ ಇಳಿದಿರುತ್ತವೆ.
     

    ಪರ್ವತ ಪ್ರದೇಶಗಳು 

    👉 ಸಾಮಾನ್ಯವಾಗಿ ಈ ಆವಾಸಗಳು ತುಂಬಾ ಶೀತ ಹಾಗೂ ಬಿರುಗಾಳಿಯಿಂದ ಕೂಡಿರುತ್ತವೆ.
    👉 ಕೆಲವು ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಹಿಮಪಾತವೂ ಆಗಬಹುದು.
    👉 ಪರ್ವತ ಪ್ರದೇಶಗಳಲ್ಲಿ ವಾಸಿಸುವ ಸಸ್ಯ ಹಾಗೂ ಪ್ರಾಣಿಗಳಲ್ಲಿ ಹೆಚ್ಚಿನ ವೈವಿಧ್ಯತೆ ಇರುತ್ತದೆ.
    👉 ಮರಗಳು ಸಾಮಾನ್ಯವಾಗಿ ಶಂಖದ ಆಕಾರದಲ್ಲಿದ್ದು, ಅವುಗಳಲ್ಲಿ ಓರೆಯಾಗಿರುವ ರಂಬೆಗಳಿರುತ್ತವೆ.
    👉 ಕೆಲವು ಮರಗಳ ಎಲೆಗಳು ಸೂಜಿ ಆಕಾರದಲ್ಲಿದ್ದು, ಇವು ಮಳೆಯ ನೀರು ಮತ್ತು ಮಂಜನ ಹನಿಗಳು ಸುಲಭವಾಗಿ ಜಾರಲು ಸಹಾಯ ಮಾಡುತ್ತವೆ.
    👉 ಪರ್ವತ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳು ತಮ್ಮ ದೇಹವನ್ನು ಶೀತದಿಂದ ರಕ್ಷಿಸಿಕೊಳ್ಳಲು ಅವು ದಪ್ಪವಾದ ಚರ್ಮ ಅಥವಾ ತುಪ್ಪಟವನ್ನು ಹೊಂದಿರುತ್ತವೆ.
            ಉದಾಹರಣೆಗೆ - 
    👉 ಚಮರಿ ಮೃಗಗಳಲ್ಲಿ ದೇಹವನ್ನು ಬೆಚ್ಚಗಿಡಲು ಉದ್ದನೆಯ ಕೂದಲುಗಳು ಇರುತ್ತವೆ. 
    👉 ಪಾದಗಳು ಮತ್ತು ಕಾಲು ಬೆರಳುಗಳು ಒಳಗೊಂಡ ಹಿಮ ಚಿರತೆಯ ದೇಹದ ಮೇಲೆ ದಪ್ದನಾದ ತುಪ್ಪಟ ಇರುತ್ತದೆ. ಇದು ಹಿಮದ ಮೇಲೆ ಚಲಿಸುವಾಗ ಅದರ ಪಾದಗಳನ್ನು ಶೀತದಿಂದ ರಕ್ಷಿಸುತ್ತದೆ.
    👉 ಜಾರು ಕಲ್ಲು ಬಂಡೆಗಳಲ್ಲಿರುವ ಪರ್ವತಗಳ ಮೇಲಕ್ಕೆ ಒಡಲು ಪರ್ವತ ಮೇಕೆಯಲ್ಲಿ ಬಲವಾದ ಗೊರಸುಗಳು ಇರುತ್ತವೆ.

    Living organisms and the areas around them

    ಹುಲ್ಲುಗಾವಲುಗಳು

    👉 ಕಾಡು ಅಥವಾ ಹುಲ್ಲುಗಾವಲು ಪ್ರದೇಶಗಳಲ್ಲಿ ಸಿಂಹ ವಾಸವಾಗಿರುತ್ತದೆ.
    👉 ಇದು ಜಿಂಕೆ ಅಂತಹ ಪ್ರಾಣಿಗಳನ್ನು ಬೇಟೆಯಾಡಿ ಕೊಲ್ಲುವಂತಹ ಬಲಿಷ್ಠ ಪ್ರಾಣಿ. 
    👉 ಸಿಂಹದ ತೀಳಿ ಕಂದು ಬಣ್ಣವು ಒಣ ಹುಲ್ಲುಗಾವಲಿನಲ್ಲಿ ಅವಿತುಕೊಂಡು ತಾನು ತಿನ್ನುವ ಪ್ರಾಣಿಯನ್ನು ಬೇಟೆಯಾಡಲು ಸಹಾಯಕ.
    👉 ಅರಣ್ಯ ಮತ್ತು ಹುಲ್ಲುಗಾವಲುಗಳಲ್ಲಿ ವಾಸಿಸುವ ಮತ್ತೊಂದು ಪ್ರಾಣಿ ಜಿಂಕೆ. 
    👉 ಕಾಡಿನಲ್ಲಿ ಸಿಗುವ ಗಡಸು ಗಿಡಗಂಟಿಗಳನ್ನು ಆಗಿಯಲು ಇದರಲ್ಲಿ ಗಟ್ಟಿಯಾದ ಹಲ್ಲುಗಳಿವೆ. 
    👉 ಭಕ್ಷಕ ಪ್ರಾಣಿಗಳ ಚಲನವಲನಗಳನ್ನು ಆಲಿಸಲು ಇದಕ್ಕೆ ಉದ್ದನೆಯ ಕಿವಿಗಳಿವೆ. 
    👉 ಮುಖದ ಪಾರ್ಶ್ವಭಾಗದಲ್ಲಿರುವ ಕಣ್ಣುಗಳು ಎಲ್ಲ ದಿಕ್ಕುಗಳನ್ನು ನೋಡಿ ಅಪಾಯದ ಸುಳಿವನ್ನು ತಿಳಿಯಲು ಅನುವು ಮಾಡಿಕೊಡುತ್ತವೆ.
    👉 ಭಕ್ಷಕ ಪ್ರಾಣಿಗಳಿಂದ ತಪ್ಪಿಸಿಕೊಂಡು ಓಡಲು ಜಿಂಕೆಯ ವೇಗವು ಸಹಾಯಕವಾಗಿದೆ.

    Living organisms and the areas around them


    ಜಲ ಆವಾಸಗಳು

    👉 ನೀರಿನಲ್ಲಿ ವಾಸಿಸುವ ಸಸ್ಯ ಹಾಗೂ ಪ್ರಾಣಿಗಳನ್ನು ಜಲ ಆವಾಸ ಜೀವಿಗಳು ಎನ್ನುವರು.
    👉 ಉದಾ - ಸಾಗರಗಳು, ಸರೋವರಗಳು, ನದಿಗಳು, ಕೆರೆಗಳು.

    ಸಾಗರಗಳು

    👉 ಹಲವು ಜಲಚರ ಪ್ರಾಣಿಗಳು ನೀರಿನಲ್ಲಿ ವೇಗವಾಗಿ ಚಲಿಸಲು ದೋಣಿ ಆಕಾರದ ದೇಹವನ್ನು ಹೊಂದಿವೆ. 
    👉 ಸಮುದ್ರದಲ್ಲಿ ವಾಸಿಸುವ ಕೆಲವು ಪ್ರಾಣಿಗಳಾದ ಕ್ವಿಡ್ ಮೀನುಗಳು ಮತ್ತು ಅಷ್ಟಪಾದಿ ಮೃದ್ವಂಗಿ (ಅಕ್ಟೋಪಸ್ ಗಳು) ದೋಣಿ ಆಕಾರದಲ್ಲಿಲ್ಲ. ಅವುಗಳು ಸಾಗರದ ಆಳದಲ್ಲಿ ವಾಸಿಸುತ್ತಿದ್ದು, ತಮ್ಮೆಡೆಗೆ ಬರುವ ಪ್ರಾಣಿಗಳನ್ನು ಹಿಡಿದು ತಿನ್ನುತ್ತವೆ. ಆದರೆ ಅವುಗಳು ನೀರಿನಲ್ಲಿ ಚಲಿಸಬೇಕಾದರೆ ತಮ್ಮ ದೇಹವನ್ನು ದೋಣಿ ಆಕಾರದಂತೆ ಮಾಡಿಕೊಳ್ಳುತ್ತವೆ.
    👉 ನೀರಿನಲ್ಲಿ ಕರಗಿರುವ ಆಕ್ಸಿಜನನ್ನು ಉಸಿರಾಡಲು ಸಹಾಯ ಮಾಡುವ ಕಿವಿರುಗಳು ಈ ಪ್ರಾಣಿಗಳಲ್ಲಿವೆ. 
    ಡಾಲ್ಫಿನ್ ಮತ್ತು ತಿಮಿಂಗಲಗಳಲ್ಲಿ ಕಿವಿರುಗಳು ಇರುವುದಿಲ್ಲ, ತಲೆಯ ಮೇಲ್ಭಾಗದಲ್ಲಿರುವ ತಮ್ಮ ಮೂಗಿನ ಹೊಳ್ಳೆಗಳು ಅಥವಾ ಉದುರಂದ್ರಗಳ ಮೂಲಕ ಅವು ಉಸಿರಾಡುತ್ತವೆ.
    👉 ವಾತಾವರಣದ ಗಾಳಿಯನ್ನು ಉಸಿರಾಡಲು ಈ ರಂದ್ರಗಳು ಅನುವು ಮಾಡಿಕೊಡುತ್ತದೆ.
    👉 ಈ ಪ್ರಾಣಿಗಳು ಬಹಳ ಸಮಯದವರೆಗೆ ನೀರಿನೊಳಗಿದ್ದು, ಉಸಿರಾಡದೆ ಇರಬಲ್ಲವು.

    ಕೆರೆಗಳು ಮತ್ತು ಸರೋವರಗಳು

    👉 ಕೆಲವು ಸಸ್ಯಗಳು ತಮ್ಮ ಬೇರುಗಳನ್ನು ನೀರಿನ ಕೆಳಗೆ ಮಣ್ಣಿನಲ್ಲಿ ಬಂಧಿಸಿರುತ್ತವೆ.
    👉 ಜಲವಾಸಿ ಸಸ್ಯಗಳಲ್ಲಿ ಬೇರುಗಳು ಚಿಕ್ಕದಾಗಿದ್ದು ಸಸ್ಯಗಳನ್ನು ಸ್ಥಳದಲ್ಲಿ ಹಿಡಿದಿಡುವುದೇ ಅವುಗಳ ಮುಖ್ಯ ಕಾರ್ಯವಾಗಿದೆ.
    👉 ಕೆಲವು ಜಲವಾಸಿ ಸಸ್ಯಗಳು ನೀರಿನಲ್ಲಿ ಮುಳುಗಿರುತ್ತವೆ.
    👉 ಸಾಮಾನ್ಯವಾಗಿ ಕಪ್ಪೆಗಳು ನೀರಿನ ಒಳಗು ಮತ್ತು ನೆಲದ ಮೇಲೆಯೂ ವಾಸಿಸಬಲ್ಲವು. ಅವುಗಳ ಹಿಂಗಾಲೂ ಗಟ್ಟಿಯಾಗಿದ್ದು, ನೆಗೆಯಲು ಸಹಾಯಕವಾಗಿದೆ.
    👉 ನೀರಿನಲ್ಲಿ ಈಜಲು ಸಹಾಯಕವಾಗುವ ಜಾಲಪಾದಗಳು ಕಪ್ಪೆಗಳಲ್ಲಿವೆ.

    Living organisms and the areas around them


    ಜೀವಿಗಳ ಗುಣಲಕ್ಷಣಗಳು

    • ಜೀವಿಗಳಿಗೆ ಆಹಾರ ಬೇಕು.
    • ಜೀವಿಗಳು ಉಸಿರಾಡುತ್ತವೆ.
    • ಜೀವಿಗಳು ಬೆಳೆಯುತ್ತವೆ. ನಿರ್ಜೀವ ವಸ್ತುಗಳು ತಮ್ಮನ್ನು ತಾವು ಬೆಳೆಸಿಕೊಳ್ಳುವುದಿಲ್ಲ.
    • ಜೀವಿಗಳು ವಿಸರ್ಜಿಸುತ್ತವೆ.
    • ಜೀವಿಗಳು ಸಂತಾನೋತ್ಪತ್ತಿ ಮಾಡುತ್ತವೆ.
    • ಜೀವಿಗಳು ಚಲಿಸುತ್ತವೆ.
    • ಜೀವಿಗಳು ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಮಾಡುತ್ತವೆ. (ಉದಾ - ಮಿಮೋಸ - ಮುಟ್ಟಿದರೆ ಮುನಿ)
    • ಜೀವಿಗಳಿಗೆ ಜೀವಿತಾವಧಿ ಇದೆ.
    • ಜೀವಿಗಳು ಜೀವಕೋಶಗಳಿಂದ ಕೂಡಿದೆ.(ಏಕಕೋಶ ಜೀವಿಗಳು ಮತ್ತು ಬಹುಕೋಶ ಜೀವಿಗಳು)

    👉 ಸಾರಾಂಶ

    • ಸಸ್ಯಗಳು ಮತ್ತು ಪ್ರಾಣಿಗಳು ವಾಸಿಸುವ ಸುತ್ತಲಿನ ಪರಿಸರವನ್ನು ಅವುಗಳ ಆವಾಸ ಎನ್ನುವರು.
    • ಹಲವು ಬಗೆಯ ಸಸ್ಯಗಳು ಮತ್ತು ಪ್ರಾಣಿಗಳು ಒಂದೇ ಆವಾಸವನ್ನು ಹಂಚಿಕೊಂಡಿರಬಹುದು.
    • ಒಂದು ನಿರ್ದಿಷ್ಟ ಆವಾಸದಲ್ಲಿ ಒಂದು ಸಸ್ಯ ಅಥವಾ ಪ್ರಾಣಿಯು ಜೀವಿಸುವ ಸಾಮರ್ಥ್ಯವನ್ನು ನೀಡುವ ಅದರ ನಿರ್ದಿಷ್ಟ ಲಕ್ಷಣಗಳು ಮತ್ತು ಅಭ್ಯಾಸಗಳನ್ನು ಹೊಂದಾಣಿಕೆ ಎಂದು ಕರೆಯುತ್ತೇವೆ.
    • ಹಲವು ರೀತಿಯ ಆವಾಸಗಳಿವೆ. ಇವುಗಳನ್ನು ಎರಡು ಮುಖ್ಯ ಗುಂಪುಗಳಾಗಿ ವಿಂಗಡಿಸಬಹುದು. ಅವುಗಳೆಂದರೆ ಭೂಆವಾಸ ಮತ್ತು ಜಲಆವಾಸ.
    • ವಿವಿಧ ಆವಾಸಗಳಲ್ಲಿ ಹಲವು ಬಗೆಯ ಜೀವಿಗಳಿರುತ್ತವೆ.
    • ಕಲ್ಲುಬಂಡೆಗಳು, ಮಣ್ಣು, ಗಾಳಿ, ನೀರು, ಬೆಳಕು ಹಾಗು ಉಷ್ಣತೆ ಮುಂತಾದವು ನಮ್ಮ ಸುತ್ತಲಿನ ಅಜೈವಿಕ ಘಟಕಗಳು.
    • ಜೀವಿಗಳಲ್ಲಿ ಕೆಲವು ಸಾಮಾನ್ಯ ಲಕ್ಷಣಗಳಿರುತ್ತವೆ. ಅವುಗಳಿಗೆ ಆಹಾರ ಬೇಕು. ಅವುಗಳು ಉಸಿರಾಡುತ್ತವೆ ಮತ್ತು ತ್ಯಾಜ್ಯ ವಸ್ತುಗಳನ್ನು ವಿಸರ್ಜಿಸುತ್ತವೆ. ಸುತ್ತಲಿನ ಪರಿಸರಕ್ಕೆ ಪ್ರತಿಕ್ರಿಯಿಸುತ್ತವೆ. ವಂಶಾಭಿವೃದ್ಧಿ ಮಾಡುತ್ತವೆ, ಬೆಳೆಯುತ್ತವೆ ಹಾಗೂ ಚಲನೆಯನ್ನು ತೋರಿಸುತ್ತವೆ.

    Post a Comment (0)
    Previous Post Next Post