ಅಧ್ಯಾಯ -3. ಸರ್ಕಾರ ಎಂದರೇನು? - What is Government?

 ಸರ್ಕಾರ ಎಂದರೇನು?
Government

    ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಕೆಲಸಗಳನ್ನು ಮಾಡಲು ಸರ್ಕಾರ ಅಗತ್ಯವಿದೆ. ಸರ್ಕಾರ ಒಂದು ಜನರ ಗುಂಪು. ಸರ್ಕಾರ ಸಮುದಾಯಗಳ ಮೇಲೆ ನಿಯಂತ್ರಣ ಹೊಂದಿರುತ್ತದೆ.

    ಸರ್ಕಾರದ ಕಾರ್ಯಗಳು

    • ಆಡಳಿತ ನಿರ್ವಹಣೆ ಮಾಡುವುದು.
    • ಸಾರ್ವಜನಿಕ ನೀತಿಗಳನ್ನು ರೂಪಿಸುವುದು.
    • ಕಾರ್ಯಾಂಗ, ರಾಜಕೀಯ ಮತ್ತು ಸಾರ್ವಭೌಮ ಕಾರ್ಯಗಳು.
    • ಸರ್ಕಾರ ಸಂಪ್ರದಾಯಗಳು, ಸಂಸ್ಥೆಗಳು, ಕಾನೂನುಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ.

    ಸರ್ಕಾರದ ಪಾತ್ರ

    • ಕೆಲಸಗಾರರ ಹಕ್ಕುಗಳನ್ನು ರಕ್ಷಿಸುತ್ತದೆ.
    • ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.
      • ರಸ್ತೆಗಳು, ಶಾಲೆಗಳು ಮತ್ತು ರೈಲ್ವೆ ಮಾರ್ಗಗಳನ್ನು ಹೇಗೆ ಮತ್ತು ಎಲ್ಲಿ ನಿರ್ಮಿಸುವುದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹೇಗೆ ಸುಧಾರಿಸುವುದು, ಕುಡಿಯುವ ನೀರಿನ ಸರಬರಾಜನ್ನು ಹೇಗೆ ಸುಧಾರಿಸುವುದು ಇತ್ಯಾದಿ. 
      • ಸರ್ಕಾರವು ವಿವಿಧ ಸಾಮಾಜಿಕ ಸಮಸ್ಯೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ; ಸರ್ಕಾರವು ಬಡವರಿಗೆ ಸಹಾಯ ಮಾಡುವ ಕಾರ್ಯಕ್ರಮಗಳನ್ನು ರೂಪಿಸುತ್ತದೆ. 
      • ಎರಡು ಸಾಮಾಜಿಕ ಗುಂಪುಗಳ ನಡುವೆ ಸಂಘರ್ಷ ಉಂಟಾದಾಗ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ
    • ದೇಶದ ಗಡಿಗಳನ್ನು ರಕ್ಷಿಸುವ ಮತ್ತು ಇತರ ದೇಶಗಳೊಂದಿಗೆ ಶಾಂತಿಯುತ ಸಂಬಂಧವನ್ನು ಕಾಪಾಡುವ ಕೆಲಸವನ್ನು ಮಾಡುತ್ತದೆ.
    • ಉತ್ತಮ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುತ್ತದೆ.
    • ಸುನಾಮಿ ಮತ್ತು ಭೂಕಂಪನಗಳಂತಹ ನೈಸರ್ಗೀಕ ವಿಪತ್ತುಗಳು ಸಂಭವಿಸಿದಾಗ ಜನರಿಗೆ ನೇರವು ನೀಡುತ್ತದೆ.

    ಸರ್ಕಾರದ ಹಂತಗಳು

    ಸರ್ಕಾರದ ವಿವಿಧ ಹಂತಗಳಿವೆ ಅವು ಈ ಕೆಳಗಿನಂತಿವೆ.

    • ಕೇಂದ್ರ ಹಂತ ಅಥವಾ ರಾಷ್ಟ್ರೀಯ ಹಂತ:

    ಇದು ಸರ್ಕಾರದ ಅತ್ಯುನ್ನತ ಹಂತ. ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ಸರ್ಕಾರ ಎಂದು ಕರೆಯಲಾಗುತ್ತದೆ, ಆದರೆ ಇತರ ಎಲ್ಲಾ ಹಂತಗಳನ್ನು ಸ್ಥಳೀಯ ಸರ್ಕಾರ ಹಂತಗಳು ಎಂದು ಕರೆಯಲಾಗುತ್ತದೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳನ್ನು ನೋಡಿಕೊಳ್ಳುತ್ತದೆ. ಪ್ರಧಾನ ಮಂತ್ರಿಗಳು ಕೇಂದ್ರ ಸರ್ಕಾರದ ಮುಖ್ಯಸ್ಥರು. ಕೇಂದ್ರ ಸರ್ಕಾರವು ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಕಾರ್ಯನಿರ್ವಹಿಸುತ್ತದೆ. 

    • ರಾಜ್ಯ ಹಂತ: 

    ವಿವಿಧ ರಾಜ್ಯಗಳು ತಮ್ಮದೇ ಆದ ಸರ್ಕಾರದ ಹಂತವನ್ನು ಹೊಂದಿವೆ. ರಾಜ್ಯ ಸರ್ಕಾರವು ಆ ರಾಜ್ಯದ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತದೆ. ರಾಜ್ಯ ಸರ್ಕಾರವು ರಾಜ್ಯದ ವಿಷಯಗಳನ್ನು ನೋಡಿಕೊಳ್ಳುತ್ತದೆ. 

    • ಜಿಲ್ಲಾ ಹಂತ: 

    ಜಿಲ್ಲಾ ಮಟ್ಟದಲ್ಲಿ ಆಡಳಿತವು ನಾಗರಿಕ ಸೇವಕರು ಎಂದು ಕರೆಯಲ್ಪಡುವ ಸರ್ಕಾರಿ ಅಧಿಕಾರಿಗಳ ನಿಯಂತ್ರಣದಲ್ಲಿರುತ್ತದೆ. ಸರ್ಕಾರಿ ಅಧಿಕಾರಿಗಳು ವಿವಿಧ ಕಾರ್ಯಕ್ರಮಗಳ ಅನುಷ್ಠಾನವನ್ನು ನೋಡಿಕೊಳ್ಳುತ್ತಾರೆ. 

    • ಸ್ಥಳೀಯ ಹಂತ: 

    ಸ್ಥಳೀಯ ಹಂತ ಅಥವಾ ಗ್ರಾಮ ಮಟ್ಟದಲ್ಲಿ ಸರ್ಕಾರವು "ಸರಪಂಚರ" ನೇತೃತ್ವದಲ್ಲಿದೆ. ಗ್ರಾಮ ಮಟ್ಟದಲ್ಲಿ ಸರ್ಕಾರವನ್ನು "ಗ್ರಾಮ ಪಂಚಾಯತ್" ಎಂದು ಕರೆಯಲಾಗುತ್ತದೆ. ಇದು ಸ್ಥಳೀಯ ಆಸಕ್ತಿಯ ವಿಷಯಗಳನ್ನು ನೋಡಿಕೊಳ್ಳುತ್ತದೆ.

    Government


    Government



    ತತ್ವಚಿಂತನೆಗಳು

    • ಎಡಪಂಥೀಯರು

      • ಪ್ರಜಾಪ್ರಭುತ್ವವಾಧಿಗಳು.
      • ಸಮಾಜೀಕ ಸಮಾನತೆಗೆ ಆದ್ಯತೆ ನೀಡುವವರು.
      • ಎಲ್ಲಾ ಕಾರ್ಯಗಳು ಸರ್ಕಾರದ ಅಧೀನದಲ್ಲಿ ನಡೆಯಬೇಕು.

    • ಬಲಪಂಥೀಯರು
      • ಗಣತಂತ್ರವಾದಿಗಳು.
      • ಬಲವಾದ ರಾಷ್ಟ್ರೀಯತೆ ಮತ್ತು ಅಭಿವೃದ್ದಿಗೆ ಹೆಚ್ಚಿನ ಒಲವು ಹೊಂದಿದವರು. 


    ಕಾನೂನುಗಳು ಮತ್ತು ಸರ್ಕಾರ 

    ಸರ್ಕಾರವು ಕೆಲವು ಕಾನೂನುಗಳನ್ನು ಜಾರಿಗೆ ತರುವ ಮತ್ತು ಜಾರಿಗೊಳಿಸುವ ಮೂಲಕ  ಕಾರ್ಯನಿರ್ವಹಿಸಬಹುದು. 
    ಉದಾ - ಸರ್ಕಾರವು ಸುಗಮ ಸಂಚಾರ ನಿರ್ವಹಣೆಗೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡಿದೆ. ಈ ಕಾನೂನುಗಳು ಎಲ್ಲಾ ರಸ್ತೆ ಬಳಕೆದಾರರಿಗೆ ಇತರ ರಸ್ತೆ ಬಳಕೆದಾರರಿಂದ ತೊಂದರೆಗೊಳಗಾಗದೆ ರಸ್ತೆಯನ್ನು ಬಳಸಲು ಸಹಾಯ ಮಾಡುತ್ತದೆ. ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ದೇಶದ ಕಾನೂನನ್ನು ಪಾಲಿಸಲಾಗುತ್ತಿಲ್ಲ ಎಂದು ಯಾರಾದರೂ ಭಾವಿಸಿದರೆ, ಅವರು ತಮ್ಮ ಕುಂದುಕೊರತೆಗಳೊಂದಿಗೆ ನ್ಯಾಯಾಲಯಕ್ಕೆ ಹೋಗಬಹುದು. ನ್ಯಾಯಾಲಯವು ಪ್ರಕರಣವನ್ನು ಆಲಿಸಿ, ದೇಶದ ಕಾನೂನಿನ ಪ್ರಕಾರ ನಿರ್ಧಾರಗಳನ್ನು ಪ್ರಕಟಿಸಬೇಕಾಗಿದೆ. ನ್ಯಾಯಾಲಯದ ತೀರ್ಪಿನ ನಂತರ, ಸರ್ಕಾರಿ ಅಧಿಕಾರಿಗಳು ಕಾನೂನು ಸರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. 

    ಸರ್ಕಾರದ ವಿಧಗಳು 

    ಸರ್ಕಾರದಲ್ಲಿ ಎರಡು ಪ್ರಮುಖ ವಿಧಗಳಿವೆ. 
    • ರಾಜಪ್ರಭುತ್ವ 
    • ಪ್ರಜಾಪ್ರಭುತ್ವ 

    ರಾಜಪ್ರಭುತ್ವ 

    ಸರ್ಕಾರದ ಮುಖ್ಯಸ್ಥನು ರಾಜನಾಗಿದ್ದರೆ ಅದನ್ನು "ರಾಜಪ್ರಭುತ್ವ" ಎಂದು ಕರೆಯಲಾಗುತ್ತದೆ. ರಾಜನು ಸರ್ವೋಚ್ಚ ಅಧಿಕಾರವನ್ನು ಹೊಂದಿರುತ್ತಾನೆ. ಅಧಿಕಾರವನ್ನು ಒಬ್ಬ ರಾಜನಿಂದ ಇನ್ನೊಬ್ಬ ರಾಜನಿಗೆ ಉತ್ತರಾಧಿಕಾರದ ಆಧಾರದ ಮೇಲೆ ವರ್ಗಾಯಿಸಲಾಗುತ್ತದೆ. ಇದರರ್ಥ ರಾಜನ ಮಗ ಅಥವಾ ಮಗಳು ಮುಂದಿನ ರಾಜ ಅಥವಾ ರಾಣಿಯಾಗುತ್ತಾರೆ. ಈ ವ್ಯವಸ್ಥೆಯಲ್ಲಿ, ಸರ್ಕಾರದ ಆಯ್ಕೆಯಲ್ಲಿ ಜನರಿಗೆ ಯಾವುದೇ ಪಾತ್ರವಿಲ್ಲ. ಭೂತಾನ್ ಮತ್ತು ಸೌದಿ ಅರೇಬಿಯಾದಂತಹ ಕೆಲವೇ ದೇಶಗಳಲ್ಲಿ ಇನ್ನೂ ರಾಜಪ್ರಭುತ್ವವನ್ನು ಆಚರಿಸಲಾಗುತ್ತಿದೆ. 

    ಪ್ರಜಾಪ್ರಭುತ್ವ

    ಪ್ರಜಾಪ್ರಭುತ್ವ ಸರ್ಕಾರದಲ್ಲಿ ಆಡಳಿತಗಾರರನ್ನು ಜನರಿಂದ ಆಯ್ಕೆ ಮಾಡಲಾಗುತ್ತದೆ. ಪ್ರಜಾಪ್ರಭುತ್ವವನ್ನು "ಜನರಿಂದ, ಜನರಿಗಾಗಿ ಮತ್ತು ಜನರ ಸರ್ಕಾರ" ಎಂದು ಕರೆಯಲಾಗಿದೆ. ಈ ವ್ಯವಸ್ಥೆಯಲ್ಲಿ, ಜನರ ಆಯ್ಕೆಯ ಆಧಾರದ ಮೇಲೆ ಅಧಿಕಾರವನ್ನು ಒಬ್ಬ ಆಡಳಿತಗಾರನಿಂದ ಇನ್ನೊಬ್ಬ ಆಡಳಿತಗಾರನಿಗೆ ವರ್ಗಾಯಿಸಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು  ಚುನಾವಣೆಗಳ ಮೂಲಕ ಆಯ್ಕೆ ಮಾಡುತ್ತಾರೆ. ಚುನಾವಣೆಗಳ ನಂತರ, ಜನರ ಆಯ್ಕೆಯ ಆಧಾರದ ಮೇಲೆ ಹೊಸ ಸರ್ಕಾರ ರಚನೆಯಾಗುತ್ತದೆ. 

    ಸಾರ್ವತ್ರಿಕ ವಯಸ್ಕ ಮತದಾನದ 

    ಆಧುನಿಕ ಕಾಲದಲ್ಲಿ ಹೆಚ್ಚಿನ ದೇಶಗಳಲ್ಲಿ ಸಾರ್ವತ್ರಿಕ ವಯಸ್ಕ ಮತದಾನದ ಪದ್ಧತಿ ರೂಢಿಯಲ್ಲದೆ. ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಎಂದರೆ ದೇಶದ ಎಲ್ಲಾ 18 ವರ್ಷ ವಯಸ್ಸು ಹೊಂದಿರುವ ನಾಗರಿಕರು ಮತದಾನದ ಹಕ್ಕನ್ನು ಹೊಂದಿರುತ್ತಾರೆ. ಇದರರ್ಥ, ಬಡವರು ಮತ್ತು ಶ್ರೀಮಂತರು, ಪುರುಷರು ಮತ್ತು ಮಹಿಳೆಯರು, ಹಿಂದೂಗಳು ಅಥವಾ ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಅಥವಾ ಸಿಖ್ಖರು ಅಥವಾ ಬೌದ್ಧರು ಎಲ್ಲರಿಗೂ ಸಮಾನ ಮತದಾನದ ಹಕ್ಕಿದೆ. ಆರ್ಥಿಕ ಸ್ಥಿತಿ, ಜಾತಿ, ಲಿಂಗ ಅಥವಾ ಧರ್ಮವನ್ನು ಲೆಕ್ಕಿಸದೆ ಪ್ರತಿಯೊಬ್ಬ ವ್ಯಕ್ತಿಯ ಮತವು ಸಮಾನ ಮೌಲ್ಯವನ್ನು ಹೊಂದಿರುತ್ತದೆ. 1931 ರಲ್ಲಿ ಗಾಂಧೀಜಿಯವರು "ಯಂಗ್‌ ಇಂಡಿಯಾ" ಪತ್ರಿಕೆಯನ್ನು ಹೊರಡಿಸಿ ಅದರಲ್ಲಿ ಸಾರ್ವತ್ರಿಕ ವಯಸ್ಕ ಮತದಾನಕ್ಕೆ ಬೇಡಿಕೆ ಇಟ್ಟರು.

    Government


    Post a Comment (0)
    Previous Post Next Post