ಪುಸ್ತಕಗಳು ಮತ್ತು ಸಮಾಧಿಗಳು ನಮಗೆ ಏನು ಹೇಳುತ್ತವೆ
ನಾಲ್ಕು ವೇದಗಳು
- ಋಗ್ವೇದ
- ಸಾಮವೇದ
- ಯಜುರ್ವೇದ
- ಅಥರ್ವವೇದ
ಋಗ್ವೇದ
👉 ಋಗ್ವೇದ ವಿಶ್ವದ ಅತ್ಯಂತ ಹಳೆಯ ಸಾಹಿತ್ಯ ಮೂಲಗಳಲ್ಲಿ ಒಂದಾಗಿದೆ.
👉 ಇದು ಹಳೆಯ ಅಥವಾ ವೈಧಿಕ ಸಂಸ್ಕೃತದಲ್ಲಿದೆ.
👉 ಇದರ ಸಂಯೋಜನೆಯಾದದ್ದು 3500 ವರ್ಷಗಳ ಹಿಂದೆ.
👉 ಋಗ್ವೇದವು 1028 ಸೂಕ್ತಗಳನ್ನು ಒಳಗೊಂಡಿದೆ.
👉 ಸೂಕ್ತ ಎಂದರೆ "ಚೆನ್ನಾಗಿ ಹೇಳಿದ್ದು "ಎಂದರ್ಥ.
👉 ಈ ಸೂಕ್ತಗಳನ್ನು ಋಷಿಗಳು ರಚಿಸಿದ್ದಾರೆ. ಒಂದಷ್ಡು ಸೂಕ್ತಗಳನ್ನು ಮಹಿಳೆಯರು ರಚಿಸಿದ್ದಾರೆ.
👉 ಋಗ್ವೇದವನ್ನು 200 ವರ್ಷಗಳ ಹಿಂದೆ ಮುದ್ರಿಸಲಾಯಿತು.
👉 ಈ ಸ್ತೋತ್ರಗಳು ವಿವಿಧ ದೇವರು ಮತ್ತು ದೇವತೆಗಳನ್ನು ಸ್ತುತಿಸುತ್ತವೆ.
ಮೂರು ದೇವರುಗಳು ಪ್ರಮುಖವಾಗಿವೆ.
👉 ಅಗ್ನಿ - ಬೆಂಕಿಯ ದೇವರು.
👉 ಇಂದ್ರ - ಒಬ್ಬ ಯೋಧ ದೇವರು.
👉 ಸೋಮ - ವಿಶೇಷ ಪಾನೀಯಯವನ್ನು ತಯಾರಿಸುವ ಸಸ್ಯ.
ಸಂಸ್ಕೃತ ಮತ್ತು ಇತರ ಭಾಷೆಗಳು
👉 ಸಂಸ್ಕೃತವು ಇಂಡೋ-ಯುರೋಪಿಯನ್ ಎಂದು ಕರೆಯಲ್ಪಡುವ ಭಾಷೆಗಳ ಕುಟುಂಬದ ಒಂದು
ಭಾಗವಗಿದೆ.
- ಭಾರತೀಯ ಭಾಷೆಗಳು - ಆಸ್ಸಾಮಿ, ಗುಜರಾತಿ, ಹಿಂದಿ, ಕಾಶ್ಮೀರಿ ಮತ್ತು ಸಿಂಧಿ.
- ಏಷ್ಯಿಯನ್ ಭಾಷೆಗಳು - ಪರ್ಷಿಯನ್
- ಯುರೋಪಿಯನ್ ಭಾಷೆಗಳು - ಇಂಗ್ಲೀಷ್, ಫ್ರೆಂಚ್, ಜರ್ಮನ್, ಗೀಕ್, ಇಟಾಲಿಯನ್ ಮತ್ತು ಸ್ಪ್ಯಾನಿಷ್.
👉 ಉದಾ: "ಮಾತೃ" (ಸಂಸ್ಕೃತ), "ಮಾ" (ಹಿಂದಿ), ಮತ್ತು "ಮದರ್" (ಇಂಗ್ಲೀಷ್).
👉 ಭಾರತದ ಇತರ ಭಾಷೆಗಳು ವಿವಿಧ ಕುಟುಂಬಗಳಿಗೆ ಸೇರಿವೆ.
- ಟಿಬೆಟೋ-ಬರ್ಮನ್ ಕುಟುಂಬ - ಈಶಾನ್ಯದಲ್ಲಿ ಬಳಸುವ ಭಾಷೆಗಳು
- ದ್ರಾವಿಡ ಕುಟುಂಬ - ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ
- ಆಸ್ಟ್ರೋ-ಏಷ್ಯಾಟಿಕ್ ಕುಟುಂಬ - ಜಾರ್ಖಾಂಡ ಮತ್ತು ಮಧ್ಯಭಾರತದಲ್ಲಿ ಬಳಸುವ ಭಾಷೆಗಳು
ಇತಿಹಾಸಕಾರರು ಋಗ್ವೇದವನ್ನು ಹೇಗೆ ಅಭ್ಯಸಿಸುತ್ತಾರೆ.
👉 ಶ್ಲೋಕಗಳ ಮೂಲಕ ಅಭ್ಯಸಿಸುತ್ತಾರೆ.
👉 ಋಗ್ವೇದವನ್ನು ಜನರು ಓದುವ ಬದಲು ಕೇಳುವುದು ಮತ್ತು ಪಠಣೆ ಮಾಡಿದ್ದಾರೆ.
👉 ಋಗ್ವೇದದಲ್ಲಿನ ಕೇಲವು ಸ್ತೋತ್ರಗಳು ಸಂಭಾಷಣೆಯ ರೂಪದಲ್ಲಿವೆ.
👉 ವಿಶ್ವಾಮಿತ್ರ ಎಂಬ ಋಷಿ ಮತ್ತು ಬಿಯಾಸ್ ಮತ್ತು ಸಟ್ಲೇಜ್ ನದಿಗಳು
ದೇವತೆಗಳೆಂದು ಪೂಜಿಸಲ್ಪಡುವ ನಡುವಿನ ಸಂಭಾಷಣೆ. ಅಂತಹ ಸ್ತೋತ್ರದ ಒಂದು ಭಾಗವಾಗಿದೆ.
👉 ಋಗ್ವೇದದಲ್ಲಿ ಸಿಂಧೂ ಮತ್ತು ಅದರ ಉಪನದಿಗಳು, ಸರಸ್ವತಿ, ಗಂಗಾ ಮತ್ತು
ಯಮುನಾ ನದಿಗಳನ್ನು ಹೆಸರಿಸಲಾಗಿದೆ.
👉 ಋಉಗ್ವೇದವನ್ನು "ಪ್ರಾರಂಭಿಕ ವೇದ ಕಾಲ" ಎನ್ನುವರು.
👉 ಈ ನದಿಗಳನ್ನು ಕುದುರೆಗಳು ಮತ್ತು ಹಸುಗಳಿಗೆ ಹೋಲಿಸಲಾಗಿದೆ.
👉 ಬರ್ಚ್ ತೊಗಟೆಯ ಮೇಲೆ ಬರೆಯಲಾದ ಋಗ್ವೇದದ ಒಂದು ಹಸ್ತಪ್ರತಿಯು
ಕಾಶ್ಮೀರದಲ್ಲಿ ಕಂಡು ಬಂದಿದೆ. ಇದನ್ನು ಈಗ
ಮಹಾರಾಷ್ತ್ರದ ಪುಣೆಯಲ್ಲಿರುವ ಗ್ರಂಥಾಲಯದಲ್ಲಿ ಸಂರಕ್ಷಿಸಲಾಗಿದೆ.
ದನಗಳು, ಕುದುರೆಗಳು ಮತ್ತು ರಥಗಳು
👉 ಋಗ್ವೇದದಲ್ಲಿ
ದನಗಳು, ಮಕ್ಕಳು(ವಿಶೇಷವಾಗಿ ಪುತ್ರರು) ಮತ್ತು ಕುದುರೆಗಳಿಗಾಗಿ ಅನೇಕ
ಪ್ರಾರ್ಥನೆಗಳಿವೆ.
👉 ದನಕರುಗಳನ್ನು, ಭೂಮಿಯನ್ನು ವಶಪಡಿಸಿಕೊಳ್ಳಲು, ಜನರನ್ನು ಸೇರೆ ಹಿಡಿಯಲು ಮತ್ತು ನೀರಿಗಾಗಿ
ಯುದ್ಧಗಳು ನಡೆಯುವಾಗ ಕುದುರೆಗಳನ್ನು ರಥಗಳ ನೋಗಕ್ಕೆ ಹಾಕಿ ಯುದ್ಧ
ಮಾಡಲಾಗುತ್ತಿತ್ತು.
👉
ವಶಪಡಿಸಿಕೊಂಡ ಸಂಪತ್ತಿನಲ್ಲಿ ಒಂದಿಷ್ಟು ನಾಯಕರ ಬಳಿ ಇರುತ್ತಿತ್ತು. ಕೇಲವು
ಭಾಗವನ್ನು ಪುರೋಹಿತರಿಗೆ ನೀಡಲಾಯಿತು ಮತ್ತು ಉಳಿದಿದ್ದನ್ನು
ಸಾಮಾನ್ಯ ಜನರಿಗೆ ಹಂಚಲಾಯಿತು. ಸ್ವಲ್ಪ ಸಂಪತ್ತನ್ನು
ಯಜ್ಞಗಳಿಗಾಗಿ ಬಳಸಲಾಗುತ್ತಿತ್ತು.
👉 ಯಜ್ಞಗಳನ್ನು ಮಾಡುವಾಗ ತುಪ್ಪ, ಧಾನ್ಯಗಳನ್ನು ಬಳಸುತ್ತಿದ್ದರು ಮತ್ತು ಕೆಲವು
ಸಂಧರ್ಭಗಳಲ್ಲಿ ಪ್ರಾಣಿ ಬಲಿ ಕೂಡಾ ನಡೆಯುತ್ತಿತ್ತು.
👉 ಇವರುಗಳಿಗೆ ನಿಯಮಿತ ಸೈನ್ಯ ಇರಲಿಲ್ಲ.
ಜನರನ್ನು ವಿವರಿಸುವ ಪದಗಳು
ಕೆಲಸದ ಆಧಾರದ ಮೇಲೆ ಎರಡು ಗುಂಪುಗಳು
ಪುರೋಹಿತರು
👉 ಇವರನ್ನು ಬ್ರಾಹ್ಮಣರು ಎಂದೂ ಕರೆಯುತ್ತಾರೆ.
👉 ಇವರು ವಿವಿಧ ಆಚರಣೆಗಳನ್ನು ಮಾಡುತ್ತಿದ್ದರು.
ರಾಜರು
👉 ರಾಜರುಗಳು ರಾಜಧಾನಿ ನಗರಗಳು, ಅರಮನೆಗಳನ್ನು ಮತ್ತು ಸೈನ್ಯವನ್ನು ಹೊಂದಿರಲಿಲ್ಲ.
👉 ಅವರು ತೆರಿಗೆಗಳನ್ನು ಸಂಗ್ರಹಿಸುತ್ತಿರಲಿಲ್ಲ.
👉 ಸಾಮಾನ್ಯವಾಗಿ ರಾಜರ ಪುತ್ರರು ಸ್ವಯಂ ಚಾಲಿತವಾಗಿ ತಂದೆಯ ನಂತರ ರಾಜರು ಆಗುತ್ತಿರಲಿಲ್ಲ.
👉 ಸಮೂದಾವನ್ನು ವಿವರಿಸಲು ಜನ ಅಥವಾ ವಿಶ್ ಎಂಬ ಪದಗಳನ್ನು ಬಳಸಲಾಗಿದೆ.
ಉದಾ:
ಪುರು ಜನ ಅಥವಾ ವಿಶ್, ಯದು ಜನ ಅಥವಾ ವಿಶ್ ಅಥವಾ ಭರತ ಜನ ಅಥವಾ ವಿಶ್.
👉 ಸೂಕ್ತಗಳನ್ನು ರಚಿಸಿದ ಜನರು ತಮ್ಮನ್ನು ತಾವೇ "ಆರ್ಯರು" ಎಂದು ಕರೆದುಕೊಂಡಿದ್ದಾರೆ.
👉 ಆರ್ಯರ ಗುಲಾಮರನ್ನು ದಾಸ ಅಥವಾ ದಾಸಿ ಎಂದು ಕರೆಯುತ್ತಿದ್ದರು.
👉 ಯುದ್ದಗಳಲ್ಲಿ ಸೇರೆ ಹಿಡಿದ ಪುರುಷ ಮತ್ತು ಮಹಿಳೆಯರನ್ನು ಗುಲಾಮರು ಎಂದು ಕರೆದಿದ್ದಾರೆ.
ಮೂಕ ಕಾವಲುಗಾರರು - ಮೆಗಾಲಿತ್ ಗಳ ಕಥೆ
👉 ಕಲ್ಲನ ಬಂಡೆಗಳನ್ನು ಮೆಗಾಲಿತ್ಸ್ (ದೊಡ್ಡ ಕಲ್ಲುಗಳು) ಎಂದು
ಕರೆಯುತ್ತಾರೆ.
👉 ಇವುಗಳನ್ನು ಸಮಾಧಿ ಸ್ಥಳಗಳನ್ನು ಗುರುತಿಸಲು ಬಳಸಲಾಗುತ್ತಿತ್ತು.
👉 ಮೆಗಾಲಿತ್ ಗಳ ನಿರ್ಮಾಣ ಸುಮಾರು 3000 ವರ್ಷಗಳ ಹಿಂದೆ ಪ್ರಾರಂಭವಾಯಿತು.
👉 ಇದು ಭಾರತದ ದಕ್ಷಿಣ, ಈಶಾನ್ಯ ಮತ್ತು ಕಾಶ್ಮೀರದಲ್ಲಿ ಪ್ರಚಲಿತವಾಗಿತ್ತು.
👉 ಮೆಗಾಲಿಥಿಕ್ ಸ್ಥಳಗಳು - ಬ್ರಹ್ಮಗಿರಿ, ಆದಿಚನಲ್ಲೂರ್
👉 ಕೆಲವು ಮೆಗಾಲಿತ್ ಗಳ ಸುತ್ತಲು ಕಲ್ಲಿನ ಕೋಟೆಯನ್ನು ಕಟ್ಟುತ್ತಿದ್ದರು. ಇದನ್ನು
ಸಿಸ್ಟ್ ಎಂದು ಕರೆಯುತ್ತಾರೆ.
👉 ಕೆಲವೊಮ್ಮೆ ಕಲ್ಲಿನ ಬಂಡೆಗಳನ್ನು ವೃತ್ತಾಕಾರದಲ್ಲಿ ನಿಲ್ಲಿಸುತ್ತಿದ್ದರು ಅಥವಾ
ನೆಲದ ಮೇಲೆ ಒಂದು ದೊಡ್ಡ ಕಲ್ಲನ್ನು ನಿಲ್ಲಿಸುತ್ತಿದ್ದರು.
👉 ಕೆಲವೊಂದು ಸಮಾಧಿಗಳಲ್ಲಿ ಸತ್ತ ದೇಹಗಳ ಜೋತೆಗೆ ವಿಶಿಷ್ಟ
ಕಪ್ಪು ಮತ್ತು ಕೆಂಪು ಬಣ್ಣದ ಮಡಿಕೆಗಳು, ಕೆಲವೊಂದು ಆಯುಧಗಳು,
ಕಬ್ಬಿಣದ ಉಪಕರಣಗಳು ಮತ್ತು ಕುದುರೆಗಳ ಅಸ್ಥಿ ಪಂಜರಗಳು,
ಕುದುರೆ ಉಪಕರಣಗಳು ಮತ್ತು ಕಲ್ಲು ಮತ್ತು ಚಿನ್ನದ ಆಭರಣಗಳು ದೊರೆತಿವೆ.
ಸಾಮಾಜಿಕ ವ್ಯತ್ಯಾಸಗಳ ಬಗ್ಗೆ ಕಂಡು ಹಿಡಿಯುವುದು
👉 ಬ್ರಹ್ಮಗಿರಿಯಲ್ಲಿ ಅಸ್ಥಿಪಂಜರದ ಜೋತೆಗೆ 33 - ಚಿನ್ನದ ಮಣಿಗಳು, 2 - ಕಲ್ಲಿನ ಮಣಿಗಳು, 4
- ತಾಮ್ರದ ಬಳೆಗಳು ಮತ್ತು 01- ಶಂಖದ ಚಿಪ್ಪು ಗಳು ದೊರೆತಿವೆ.
👉 ಕೆಲವೊಂದು ಅಸ್ಥಿಪಂಜರಗಳ ಜೋತೆಗೆ ಕೇವಲ ಮಡಿಕೆಗಳು ಮಾತ್ರ ದೊರೆತಿವೆ.
ಕೆಲವು ಕುಟುಂಬಗಳಿಗೆ ಕೆಲವು ಸಮಾಧಿ ಸ್ಥಳಗಳು ಇವೆಯೇ?
👉 ಕೆಲವೊಂದು ಮೆಗಾಲಿತ್ ಗಳು ಒಂದಕ್ಕಿಂತ ಹೆಚ್ಚು ಅಸ್ಥಿಪಂಜರವನ್ನು ಹೊಂದಿದ್ದವು. ಅಂದರೆ
ಒಂದೇ ಕುಟುಂಬಕ್ಕೆ ಸೇರಿದ ಜನರನ್ನು ಒಂದೇ ಸಮಯದಲ್ಲಿ ಅಲ್ಲದಿದ್ದರೂ ಒಂದೇ ಸ್ಥಳದಲ್ಲಿ ಸಮಾಧಿ
ಮಾಡಲಾಗಿದೆ ಎಂದು ಇದು ಸೂಚಿಸುತ್ತದೆ.
ಇನಾಮಗಾಂವ್ ನ ವಿಶೇಷ ಸಮಾಧಿ
👉 ಇನಾಮಗಾಂವ್ ಭೀಮಾ ನದಿಯ ಉಪನದಿಯಾದ ಘೋಡ್ ನದಿಯ ದಡದಲ್ಲಿರುವ ತಾಣವಾಗಿದೆ.
ಇದು ಸುಮಾರು 3600 ಮತ್ತು 2700 ವರ್ಷಗಳ ಹಿಂದಿನದು.
👉 ಇಲ್ಲಿ ವಯಸ್ಕರನ್ನು ಸಾಮಾನ್ಯವಾಗಿ ನೆಲದಲ್ಲಿ ನೇರವಾಗಿ, ಉತ್ತರದ ಕಡೆಗೆ ತಲೆ ಮಾಡಿ ಸಮಾಧಿ
ಮಾಡಲಾಯಿತು. ಕೆಲವೊಂದು ಸಮಾಧಿಗಳನ್ನು ಮನೆಯೊಳಗೆ ಮಾಡಲಾಯಿತು. ಈ ಸಮಾಧಿಗಳ ಜೊತೆಗೆ ಆಹಾರ
ಮತ್ತು ನೀರನ್ನು ಒಳಗೊಂಡಿರು ಪಾತ್ರೆಗಳನ್ನು ಇರಿಸಲಾಗಿತ್ತು.
👉 ಒಬ್ಬ ವ್ಯಕ್ತಿಯನ್ನು ಐದು ಕೋಣೆಗಳ ಮನೆಯ ಅಂಗಳದಲ್ಲಿ ದೊಡ್ಡದಾದ ನಾಲ್ಕು ಕಾಲಿನ
ಮಣ್ಣಿನ ಜಾರ್ ನಲ್ಲಿ ಸಮಾಧಿ ಮಾಡಿರುವುದು ಕಂಡು ಬಂದಿದೆ. ಈ ದೇಹವನ್ನು ಅಡ್ಡ ಕಾಲಿನ
ಸ್ಥಾನದಲ್ಲಿ ಇರಿಸಲಾಗಿತ್ತು.
ಚರಕ
👉 ಸುಮಾರು 200 ವರ್ಷಗಳ ಹಿಂದೆ "ಚರಕ" ಎಂಬ ಪ್ರಸಿದ್ದ
ವೈದ್ಯನಿದ್ದನು.
👉 ಅವರು "ಚರಕ ಸಂಹಿತೆ" ಎಂಬ ವೈದ್ಯಕೀಯ ಪುಸ್ತಕವನ್ನು ಬರೆದರು.
👉 ಇದರಲ್ಲಿ ಮಾನವ ದೇಹವು 360 ಮೂಳೆಗಳನ್ನು ಹೊಂದಿದೆ ಎಂದು ಹೇಳುತ್ತಾರೆ.
(ಹಲ್ಲುಗಳು, ಕೀಲುಗಳು ಮತ್ತು ಕಾರ್ಟಿಲೆಜ್ ಅನ್ನು ಒಳಗೊಂಡಂತೆ)
ಇನಾಮಗಾಂವ್ ನಲ್ಲಿನ ಉದ್ಯೋಗಗಳು
ಬೀಜಗಳು
👉 ಗೋಧಿ, ಬಾರ್ಲಿ, ಅಕ್ಕಿ, ಕಾಳುಗಳು, ರಾಗಿ, ಬಟಾಣಿ ಮತ್ತು ಎಳ್ಳಿನ ಬೀಜಗಳು.
ಮೂಳೆಗಳು
👉 ದನ, ಎಮ್ಮೆ, ಮೇಕೆ, ಕುರಿ, ನಾಯಿ, ಕುದುರೆ, ಕತ್ತೆ, ಸಾಂಬಾರ್, ಚುಕ್ಕೆ ಜಿಂಕೆ, ಕೃಷ್ಣ
ಮೃಗ, ಹುಲ್ಲೆ, ಮೊಲ ಮತ್ತು ಮುಂಗುಸಿ, ಪಕ್ಷಿಗಳು, ಮೊಸಳೆ, ಆಮೆ, ಏಡಿ, ಮತ್ತು ಮೀನುಗಳ
ಮೂಳೆಗಳು.
ಹಣ್ಣುಗಳು
👉 ಬೇರ್, ಆಮ್ಲಾ, ಜಾಮೂನ್, ಖರ್ಜೂರ ಹಣ್ಣುಗಳು.
ಚೀನಾ
👉 ಮೊದಲ ಬರಹದ ಕುರಿತು ಸುಮಾರು 3500 ವರ್ಷಗಳ ಹಿಂದೆ ಚೀನಾದಲ್ಲಿ ಕಂಡು ಬಂದಿದೆ.
👉 ಆ ಕಾಲದಲ್ಲಿ ಪ್ರಾಣಿಗಳ ಮೂಳೆಗಳ ಮೇಲೆ ಲಿಪಿಗಳನ್ನು ಬರೆಯುತ್ತಿದ್ದರು.