ಅಧ್ಯಾಯ-8 ದೇಹದ ಚಲನೆಗಳು - Body movements

ದೇಹದ ಚಲನೆಗಳು

👉ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ ಯೋಗ. ಸಂಯುಕ್ತ ರಾಷ್ಟ್ರಗಳ ಸಂಸ್ಥೆ "ಜೂನ್ 21 ಅಂತರಾಷ್ಟ್ರೀಯ ಯೋಗ ದಿನ" ವೆಂದು ಪ್ರಕಟಿಸಿತು. ಯೋಗವು ಮೂಳೆಗಳು ಬಲಯುತವಾಗುವಂತೆ ಮಾಡಿ "ಆಸ್ಟಿಯೋ ಪೋರೋಸಿಸ್" ಎಂಬ ಕಾಯಿಲೆಯನ್ನು ದೂರವಿಡುತ್ತದೆ.

👉ಮಾನವನ ದೇಹದ ಅಸ್ತಿ ಪಂಜರವು ಮೂಳೆಗಳು ಮತ್ತು ಮೃದ್ವಸ್ವಿಗಳಿಂದ ಆಗಿದೆ. ಇದು ದೇಹಕ್ಕೆ ಚೌಕಟ್ಟು ಮತ್ತು ಆಕಾರವನ್ನು ಕೊಡುತ್ತದೆ ಹಾಗೂ ಚಲನೆಗೆ ಸಹಕರಿಸುತ್ತದೆ. ಇದು ಆಂತರಿಕ ಅಂಗಾಂಗಗಳನ್ನು ರಕ್ಷಿಸುತ್ತದೆ.

Body movements

👉ಮಾನವನ ಅಸ್ತಿಪಂಜರವು ತಲೆಬುರುಡೆ, ಬೆನ್ನುಮೂಳೆ, ಪಕ್ಕೆಲುಬುಗಳು ಮತ್ತು ಎದೆಯ ಮೂಳೆ, ಭುಜ ಮತ್ತು ಸೊಂಟದ ಮೂಳೆಗಳು ಮತ್ತು ಕೈ ಹಾಗೂ ಕಾಲಿನ ಮೂಳೆಗಳನ್ನು ಒಳಗೊಂಡಿದೆ.

👉ಮಾನವ ದೇಹದ ಅಸ್ತಿಪಂಜರವು (Skeleton) ಮೂಳೆಗಳು ಮತ್ತು ಮೃದ್ವಸ್ಥಿಗಳಿಂದ ಆಗಿದೆ. ಇದು ದೇಹಕ್ಕೆ ಚೌಕಟ್ಟು ಮತ್ತು ಆಕಾರವನ್ನು ಕೊಡುತ್ತದೆ ಹಾಗೂ ಚಲನೆಗೆ ಸಹಕರಿಸುತ್ತದೆ. ಇದು ಆಂತರಿಕ ಅಂಗಾಂಗಗಳನ್ನು ರಕ್ಷಿಸುತ್ತದೆ. 

👉ಹುಟ್ಟಿದಾಗ ಮಾನವನ ಅಸ್ತಿಪಂಜರದಲ್ಲಿ 305 ಮೂಳೆಗಳು ಇರುತ್ತವೆ ಮತ್ತು ಪ್ರೌಢಾವಸ್ಥೆಯ ಹೊತ್ತಿಗೆ ಒಂದಕ್ಕೊಂದು ಸೇರುವುದರಿಂದ ಮೂಳೆಗಳ ಸಂಖ್ಯೆ 206 ಕ್ಕೆ ಇಳಿಯುತ್ತದೆ.

👉ಕೈ "ಕಾರ್ಪಲ್" ಎನ್ನುವ ಚಿಕ್ಕ ಚಿಕ್ಕ ಮೂಳೆಗಳಿಂದ ಆಗಿದೆ. 

👉ಬೆನ್ನು ಮೂಳೆ (Back bone) ಇದು ಅನೇಕ ಚಿಕ್ಕ ಮೂಳೆಗಳಾದ "ಕಶೇರುಖಂಡ" (Verterbrate) ಗಳಿಂದ ಆಗಿದೆ.

👉ಎರಡು ಗುಂಪುಗಳ ಸ್ನಾಯುಗಳ ಪರ್ಯಾಯ ಸಂಕೋಚನ ಮತ್ತು ವಿಕಸನದಿಂದ ಮೂಳೆಗಳು ಚಲಿಸುತ್ತವೆ. 

✅ಕೀಲುಗಳು ಅಥವಾ ಸಂಧಿಗಳು (Joints)

✔ಗೋಲ ಮತ್ತು ಗುಳಿ ಕೀಲುಗಳು 

👉ದುಂಡಾಗಿರುವ ಒಂದು ಮೂಳೆಯ ತುದಿ ಮತ್ತೊಂದು ಮೂಳೆಯ ಕುಳಿಯಲ್ಲಿ (ಟೊಳ್ಳಾದ ಜಾಗ) ಜೋಡಣೆ ಆಗಿರುತ್ತದೆ.

✔ತಿರುಗಾಣಿ ಕೀಲು (Pivotal Joints)

👉ನಮ್ಮ ಕುತ್ತಿಗೆ ಎಲ್ಲಿ ತಲೆಯನ್ನು ಸೇರುತ್ತದೆಯೋ ಅದು.

✔ಬಿಜಾಗರಿ ಕೀಲುಗಳು (Hinge Joints)

👉ಉದಾಹರಣೆ - ಮೊಣ ಕೈ ಮೊಣಕಾಲು ಕೀಲುಗಳು 

✔ಸ್ಥಿರ ಕೀಲುಗಳು

👉ಮೇಲ್ದವಡೆ ಮತ್ತು ತಲೆಯ ಉಳಿದ ಭಾಗದ ಮಧ್ಯೆ ಇರುವ ಕೀಲು.

Joints

👉ಶಕ್ತಿಯುತವಾದ ಸ್ನಾಯುಗಳು ಮತ್ತು ಹಗುರವಾದ ಮೂಳೆಗಳು ಒಟ್ಟಿಗೆ ಕೆಲಸ ಮಾಡಿ ಹಕ್ಕಿಗಳು ಹಾರಲು ಸಹಾಯ ಮಾಡುತ್ತದೆ. 
👉ತಮ್ಮ ದೇಹದ ಈ ಕೆಲಗಳಲ್ಲಿ ಪರ್ಯಾಯವಾಗಿ ಕುಣಿಕೆಗಳನ್ನು ಉಂಟು ಮಾಡಿ ಮೀನುಗಳು ಈಜುತ್ತವೆ. 
👉ಹಾವುಗಳು ಪಾರ್ಶ್ವಕುಣಿಕೆಗಳಿಂದ ನೆಲದ ಮೇಲೆ ಹರಿದಾಡುತ್ತವೆ.
👉ಜಿರಳೆಗಳ ದೇಹ ಮತ್ತು ಕಾಲುಗಳಿಗೆ "ಹೊರ ಕಂಕಾಲ"ವೆಂಬ ಗಟ್ಟಿಯಾದ ಕವಚವಿದೆ.




Gift Image

ಹೆಚ್ಚಿನ ಅಧ್ಯಯನಕ್ಕಾಗಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ "ವಿದ್ಯಾಸಂಗಮ" ಸಂವೇದ ದೂರದರ್ಶನ ಆಧಾರಿತ ಇ-ಕಲಿಕಾ ಕಾರ್ಯಕ್ರಮದಲ್ಲಿ ಪ್ರಸಾರವಾಗುವ 6ನೇ ತರಗತಿಯ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಈ ಕೆಳಗಿನ ವಿಡಿಯೋವನ್ನು ವಿಕ್ಷಿಸಬಹುದಾಗಿದೆ

gift image


ಭಾಗ-1


ಭಾಗ-2


ಭಾಗ-3


ಭಾಗ-4

Post a Comment (0)
Previous Post Next Post